ETV Bharat / state

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಇನ್ನುಷ್ಟು ಚುರುಕುಗೊಳಿಸಲು ಸಚಿವ ಈಶ್ವರಪ್ಪ ಸೂಚನೆ

ಶಿವಮೊಗ್ಗ ತಾಲೂಕಿನ ಸೋಗಾನೆಯಲ್ಲಿ‌ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ಮಾಡಿದ ಸಚಿವ‌ ಕೆ.ಎಸ್.ಈಶ್ವರಪ್ಪ, ವಿಮಾನ ನಿಲ್ದಾಣದ ಕಾಮಗಾರಿ ಇನ್ನುಷ್ಟು ಚುರುಕುಗೊಳ್ಳಬೇಕೆಂದು ಅಧಿಕಾರಿಗಳಿಗೆ‌ ಸೂಚನೆ‌ ನೀಡಿದ್ದಾರೆ.

Minister KS Eshwarappa
ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ
author img

By

Published : Nov 17, 2020, 5:19 PM IST

ಶಿವಮೊಗ್ಗ: ತಾಲೂಕಿನ ಸೋಗಾನೆಯಲ್ಲಿ‌ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿ ಇನ್ನುಷ್ಟು ಚುರುಕುಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ‌ ಸಚಿವ‌ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ‌ ಸೂಚನೆ‌ ನೀಡಿದ್ದಾರೆ.

ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಸಚಿವ‌ ಕೆ.ಎಸ್.ಈಶ್ವರಪ್ಪ

ಇಂದು ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಆಗಬೇಕು ಎಂಬ ಆಸೆ ಜಿಲ್ಲೆಯ ಜನತೆಯದ್ದಾಗಿದೆ. ಯಡಿಯೂರಪ್ಪನವರು ಸಿಎಂ ಆದ ನಂತರ ವಿಮಾನ ನಿಲ್ದಾಣ ಕಾಮಗಾರಿ ಚುರುಕುಗೊಳಿಸಿದ್ದಾರೆ ಎಂದರು. ವಿಮಾನ ನಿಲ್ದಾಣದ ಕಾಮಗಾರಿಯು ಫೇಸ್ - 1ರಲ್ಲಿ ರನ್ ವೇ, ಪ್ಯಾಡ್ ಕಾಮಗಾರಿ ನಡೆಯುತ್ತಿದೆ. ಈ ಫೇಸ್-1 ಕಾಮಗಾರಿಗೆ 149 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಫೇಸ್ - 2ರಲ್ಲಿ ಬಿಲ್ಡಿಂಗ್ ಪ್ಲಾನ್ ಇದೆ. ಈಗ ಟೆಂಡರ್ ಮುಗಿದಿದೆ. ನಮ್ಮ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಹಂತದ ಕಾಮಗಾರಿಗೆ 220 ಕೋಟಿ‌ ರೂ. ಬಿಡುಗಡೆಯಾಗಿದೆ. 2021ರ ಅಂತ್ಯಕ್ಕೆ ವಿಮಾನ ಹಾರಾಟ ನಡೆಸಬಹುದಾಗಿದೆ. ಆದರೆ ಕಾಮಗಾರಿಯ ವೇಗ ಇನ್ನಷ್ಟು ಹೆಚ್ಚಾಗಬೇಕಿದೆ ಎಂದರು.

ವಿಮಾನ ನಿಲ್ದಾಣದ ಕಾಮಗಾರಿಯ ಕುರಿತು ಬೆಂಗಳೂರಿನಲ್ಲಿ ವಿಶೇಷವಾಗಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಈಗ ಟೆಂಡರ್ ಆಗಿ, ಕೆಲಸದ ಆರ್ಡರ್​ ನೀಡಲಾಗುತ್ತದೆ. ಈಗ ಗುತ್ತಿಗೆದಾರರಿಗೆ ಕಾಮಗಾರಿ ವೇಗಗೊಳಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.

ಶಿವಮೊಗ್ಗದಲ್ಲಿ ಮಳೆ ಜಾಸ್ತಿ ಇರುವ ಕಾರಣ ಕಾಮಗಾರಿ ನಡೆಸಲಾಗುವುದಿಲ್ಲ. ಇದರಿಂದ ಮಳೆ ಇಲ್ಲದ ವೇಳೆಯಲ್ಲಿ ರನ್ ವೇ ಸೇರಿದಂತೆ ಅಗತ್ಯ ಕಾಮಗಾರಿ ನಡೆಸಬೇಕಿದೆ. ಕಟ್ಟಡಕ್ಕೆ ಮಳೆ ಇದ್ದರೂ ‌ಸಹ ಸಮಸ್ಯೆ ಆಗಲ್ಲ. 2021ರ ಅಂತ್ಯಕ್ಕೆ ವಿಮಾನ ಹಾರಾಟ ಮಾಡುವಂತೆ ಮಾಡಬೇಕಿದೆ. ಈಗ ಕಟ್ಟಡ ಕಟ್ಟಲು 15 ತಿಂಗಳು ಬೇಕಾಗುತ್ತದೆ. 2022ರ ವೇಳೆಗೆ ಎಲ್ಲಾ ಕಾಮಗಾರಿ ಮುಗಿದಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಲೋಕೋಪಯೋಗಿ ಇಲಾಖೆಯ ವಿಶೇಷ ಕಾರ್ಯಪಡೆಯ ಎಂಜಿನಿಯರ್ ಸಂಪತ್ ಪಿಂಗಾಳೆ, ಸಚಿವರು ನೀಡಿದ‌ ಸಲಹೆ ಪಡೆದು ಕಾಮಗಾರಿ ವೇಗವನ್ನು ಚುರುಕುಗೊಳಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.