ಶಿವಮೊಗ್ಗ: ಯೋಗ ವಿಸ್ಮಯ ಟ್ರಸ್ಟ್ ವತಿಯಿಂದ ಡಾ. ಖಾದರ್ ಮತ್ತು ಅನಂತ್ ಜೀ ನೇತೃತ್ವದಲ್ಲಿ ಕುವೆಂಪು ರಂಗಮಂದಿರದಲ್ಲಿ ಕ್ಯಾನ್ಸರ್ಗೆ ಕಾರಣ ಮತ್ತು ಸರಳ ಪರಿಹಾರ ಉಚಿತ ಶಿಬಿರವನ್ನು ಏರ್ಪಡಿಸಲಾಗಿದ್ದು, ಜನರು ಇದರ ಉಪಯೋಗ ಪಡೆಯುಂತೆ ತಿಳಿಸಿದ್ದಾರೆ.
ಶಿಬಿರವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಶಾಸಕ ಕೆ.ಬಿ ಅಶೋಕ್ ನಾಯ್ಕ ಉದ್ಘಾಟಿಸಲಿದ್ದಾರೆ. ನಂತರ ಸಾವಯುವ ಕೃಷಿ ಕುರಿತು ಡಾ.ಖಾದರ್ ಮಾತನಾಡಲಿದ್ದು ಸಾವಯುವ ಕೃಷಿಗೆ ಸರ್ಕಾರದ ಸವಲತ್ತು ಕುರಿತು ಸಾವಯುವ ಕೃಷಿ ಮಿಷನ್ ಅದ್ಯಕ್ಷ ಆನಂದ್ ಮಾತನಾಡಲಿದ್ದಾರೆ ಎಂದು ಟ್ರಸ್ಟ್ ನ ಮುಖ್ಯಸ್ಥ ಅನಂತ್ ಜೀ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆ ಪ್ರತಿಯೊಬ್ಬರಲ್ಲಿ ಕಂಡು ಬರುತ್ತಿದೆ. ಹಾಗಾಗಿ ಈ ಶಿಬಿರ ಆಯೋಜಿಸಲಾಗಿದೆ. ರೈತರು ಆತ್ಮಹತ್ಯೆ ಅಂತಹ ಕೆಲಸಕ್ಕೆ ಮುಂದಾಗುತ್ತಿದ್ದಾರೆ ಆತ್ಮಹತ್ಯೆ ತಡೆಗಟ್ಟಲು ಸಾವಯುವ ಕೃಷಿ ಬಗ್ಗೆ ಮಾಹಿತಿ ಸಹ ಈ ಕಾರ್ಯಕ್ರಮ ದಲ್ಲಿ ಸಿಗಲಿದೆ ಎಂದರು.