ETV Bharat / state

ಶಾಲೆ ಅಭಿವೃದ್ಧಿಗೆ ಡಿಸಿ ಮೂಲಕ ಪಿಎಂ,ಸಿಎಂ,ಶಿಕ್ಷಣ ಸಚಿವರಿಗೆ ಮನವಿ ಮಾಡಿದ ವಿದ್ಯಾರ್ಥಿ - ಶಾಲೆ ಅಭಿವೃದ್ಧಿಗಾಗಿ ಪತ್ರ ಬರೆದ 6ನೇ ತರಗತಿ ವಿದ್ಯಾರ್ಥಿ

ಶಾಲಾ ಆವರಣದಲ್ಲಿ ಆಟದ ಮೈದಾನವಿಲ್ಲ. ಇದರಿಂದ ಆಟೋಟ ಚಟುಟವಟಿಕೆಗಳಲ್ಲಿ ಭಾಗಿಯಾಗಲು ಆಗುತ್ತಿಲ್ಲ. 7ನೇ ತರಗತಿಯವರೆಗಿದ್ದರೂ ಕೇವಲ ಮೂರು ಕೊಠಡಿಗಳಿವೆ. ಶಾಲೆಯಲ್ಲಿ ಕಂಪ್ಯೂಟರ್ ಕಲಿಕೆ ಸೇರಿದಂತೆ ಸ್ಮಾರ್ಟ್​ಕ್ಲಾಸ್ ವ್ಯವಸ್ಥೆಯಿಲ್ಲ. ಇದರಿಂದ ಆಧುನಿಕ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾನೆ..

A student appealed
ವಿದ್ಯಾರ್ಥಿ ಮನವಿ
author img

By

Published : Sep 22, 2021, 8:46 PM IST

ಶಿವಮೊಗ್ಗ : ತಾನು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಯ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಯೊಬ್ಬ ಜಿಲ್ಲಾಧಿಕಾರಿ ಮೂಲಕ ಪಿಎಂ, ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾನೆ.

ತಾಲೂಕಿನ ಗೆಜ್ಜೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್​ ಜಿ ಉದಯ್​ ಎಂಬ ವಿದ್ಯಾರ್ಥಿ ಮನವಿ ಪತ್ರ ಬರೆದಿದ್ದಾನೆ.

ಶಾಲೆಯಲ್ಲಿವೆ ಅಧಿಕ ಸಮಸ್ಯೆಗಳಿವೆ : ಶಾಲೆಯಲ್ಲಿ ಒಂದನೇ ತರಗತಿಯಿಂದ 7ನೇ ತರಗತಿ ಇದೆ. ಇಲ್ಲಿ ಹೆಚ್ಚಾಗಿ ಬಡ, ಕೂಲಿ ಕಾರ್ಮಿಕ, ಮಧ್ಯಮ ವರ್ಗಕ್ಕೆ ಸೇರಿದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ ಇದೆ ಎಂದು ಸ್ಕೂಲ್​ನಲ್ಲಿರುವ ಸಮಸ್ಯೆಗಳನ್ನು ಹೇಳಿದರು.

ಕಲಿಕೆಯಲ್ಲಿ ಹಿಂದುಳಿಯುವ ಭಯ : ಶಾಲಾ ಆವರಣದಲ್ಲಿ ಆಟದ ಮೈದಾನವಿಲ್ಲ. ಇದರಿಂದ ಆಟೋಟ ಚಟುಟವಟಿಕೆಗಳಲ್ಲಿ ಭಾಗಿಯಾಗಲು ಆಗುತ್ತಿಲ್ಲ. 7ನೇ ತರಗತಿಯವರೆಗಿದ್ದರೂ ಕೇವಲ ಮೂರು ಕೊಠಡಿಗಳಿವೆ. ಶಾಲೆಯಲ್ಲಿ ಕಂಪ್ಯೂಟರ್ ಕಲಿಕೆ ಸೇರಿದಂತೆ ಸ್ಮಾರ್ಟ್​ಕ್ಲಾಸ್ ವ್ಯವಸ್ಥೆಯಿಲ್ಲ. ಇದರಿಂದ ಆಧುನಿಕ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾನೆ.

ವಿದ್ಯಾರ್ಥಿಯ ಮನವಿ : ಈ ಹಿನ್ನೆಲೆಯಲ್ಲಿ ಶಾಲೆಗೆ ಅಗತ್ಯವಿರುವ ಆಟದ ಮೈದಾನ, ಸುಸಜ್ಜಿತ ಕಟ್ಟಡ ಸೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಅನುವು ಮಾಡಿಕೊಡಬೇಕು. ಹಾಗೆಯೇ ಆಸಕ್ತರಿಗೆ ಶಾಲೆಯಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಕೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಕಲ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಶಿವಕುಮಾರ್​ ಅವರ ಮೂಲಕ ಪ್ರಧಾನಮಂತ್ರಿ, ಸಿಎಂ ಬೊಮ್ಮಾಯಿಯವರಿಗೆ ಮನವಿ ಮಾಡಿದ್ದಾನೆ.

ಇದನ್ನೂ ಓದಿ: ಕ್ರೀಡಾಂಗಣ ಉನ್ನತೀಕರಣಕ್ಕೆ ಕ್ರೀಡಾ ತಜ್ಞರ ಸಮಿತಿ ರಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.