ಶಿವಮೊಗ್ಗ : ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ್ ಅವರಿಗೆ ಕಾರಾಗೃಹದ ಸಜಾಬಂಧಿಗಳು ಹೃದಯಸ್ಪರ್ಶಿಯಾಗಿ ಬೀಳ್ಕೊಡುಗೆ ನೀಡಿದ್ದಾರೆ. ಮುಖ್ಯ ಅಧೀಕ್ಷಕರಾದ ಡಾ.ಪಿ.ರಂಗನಾಥ್ ಅವರಿಗೆ ಬೆಂಗಳೂರು ಪರಪ್ಪನ ಕಾರಾಗೃಹಕ್ಕೆ ವರ್ಗಾವಣೆಯಾಗಿದೆ. ಇದರಿಂದ ಇಂದು ಕಾರಾಗೃಹದಲ್ಲಿ ಸಜಾಬಂಧಿಗಳು ಕಾರ್ಯಕ್ರಮ ನಡೆಸಿ, ರಂಗನಾಥ್ ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು.
ಕಾರಾಗೃಹದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಡಾ.ಪಿ.ರಂಗನಾಥ್ ಅವರಿಗೆ ಹೂಗುಚ್ಚ ನೀಡಿ, ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಿದ್ದಾರೆ. ಈ ವೇಳೆ ಸಜಾಬಂಧಿಯಾದ ದಾದಪೀರ್ ಡಾ.ಪಿ.ರಂಗನಾಥ್ ಅವರ ಮೇಲೆ ಹಾಡನ್ನು ಹಾಡಿದರು. ಈ ಹಾಡನ್ನು ಇದೇ ಕಾರಾಗೃಹದ ಸಜಾಬಂಧಿ ಅಬುಸಲೈ ರಚನೆ ಮಾಡಿದ್ದರು.
ಇದನ್ನೂ ಓದಿ: ನಂಟು-ಗಂಟು ಸಂಬಂಧವೇ!?.. ನಾಳೆ ವಿಚಾರಣೆಗೆ ಹಾಜರಾಗಲು ಮಾಜಿ ಸಚಿವ ಡಿ.ಸುಧಾಕರ್ಗೆ ಎಸ್ಐಟಿ ನೋಟಿಸ್..
ಡಾ.ಪಿ.ರಂಗನಾಥ್ ಶಿವಮೊಗ್ಗ ಕಾರಾಗೃಹಕ್ಕೆ ಬಂದು 21 ತಿಂಗಳಾಗಿವೆ. ಇವರು ಇಲ್ಲಿಗೆ ಬಂದ ಮೇಲೆ ಹಲವು ಸುಧಾರಣೆಯನ್ನು ತಂದಿದ್ದಾರೆ. ಮೊದಲನೆಯದಾಗಿ ಸಜಾಬಂಧಿಗಳ ನಡುವೆ ಇದ್ದ ವೈಮಷ್ಯ ಹಾಗೂ ಜಗಳವನ್ನು ನಿಲ್ಲುವಂತೆ ಮಾಡಿದ್ದಾರೆ. ಇದರಿಂದ ಯಾವಾಗಲೂ ಸಹ ತಮ್ಮಗಳ ನಡುವೆ ಜಗಳವಾಡುತ್ತಿದ್ದ ಬಂಧಿಗಳು ಈಗ ಸಮಾಧಾನದಿಂದ ಇದ್ದಾರೆ.
ಕೊರೊನಾದಿಂದಾಗಿ ಹೊಸದಾಗಿ ಕಾರಾಗೃಹಕ್ಕೆ ಅಡ್ಮಿಷನ್ ತೆಗೆದುಕೊಳ್ಳುವವರನ್ನು ಕ್ವಾರಂಟೈನ್ನಲ್ಲಿರಿಸಿ, ಅವರಿಗೆ ಯಾವುದೇ ಸೋಂಕಿಲ್ಲ ಎಂದು ತಿಳಿದ ಮೇಲೆ ಸಾಮಾನ್ಯ ಬಂಧಿಗಳ ಜೊತೆ ಬಿಡುತ್ತಾರೆ. ಇಲ್ಲಿನ ಗ್ರಂಥಾಲಯದಲ್ಲಿ 15 ಸಾವಿರ ಪುಸ್ತಕಗಳನ್ನು ಸಂಗ್ರಹ ಮಾಡಿಸಿದ್ದಾರೆ.