ETV Bharat / state

ಪಾರ್ಕಿಂಗ್ ಜಾಗದಲ್ಲಿ ಮದ್ಯ ಸೇವನೆ ಬೇಡ ಎಂದಿದ್ದಕ್ಕೆ ಹೋಟೆಲ್ ನೇಮ್ ಪ್ಲೇಟ್ ಧ್ವಂಸ: ಶಿವಮೊಗ್ಗದಲ್ಲಿ ದೂರು ದಾಖಲು - etv bharat kannada

ಹೋಟೆಲ್ ಒಳಗೆ ಹೋಗಿ ಕುಡಿಯಿರಿ ಎಂದು ಹೇಳಿದಕ್ಕೆ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೇರಿದಂತೆ ಐವರು ನಮ್ಮ ಹೋಟೆಲ್​ನ ಪೀಠೋಪಕರಣಗಳನ್ನು ದ್ವಂಸ ಮಾಡಿದ್ದಾರೆ ಎಂದು ಹೋಟೆಲ್​ ಮಾಲೀಕ ಆರೋಪಿಸಿ ಶಿವಮೊಗ್ಗದ ಸಾಗರ ಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

a-group-of-people-vandalized-name-plate-of-the-hotel-in-sagara-at-shivamogga
ಪಾರ್ಕಿಂಗ್ ಜಾಗದಲ್ಲಿ ಮದ್ಯ ಸೇವನೆ ಬೇಡ ಎಂದಿದ್ದಕ್ಕೆ ಹೋಟೆಲ್ ನೇಮ್ ಪ್ಲೇಟ್ ಧ್ವಂಸ: ದೂರು ದಾಖಲು
author img

By ETV Bharat Karnataka Team

Published : Sep 16, 2023, 6:50 PM IST

Updated : Sep 17, 2023, 10:56 AM IST

ಹೋಟೆಲ್ ಮಾಲೀಕ ವಿರೇಶ್

ಶಿವಮೊಗ್ಗ: ಹೋಟೆಲ್ ಒಳಗೆ ಹೋಗಿ ಕುಡಿಯಿರಿ ಎಂದು ಹೇಳಿದಕ್ಕೆ ನನ್ನ ಜೊತೆ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೇರಿದಂತೆ ಒಟ್ಟು ಐವರು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿ ಹೋಟೆಲ್​ ಮಾಲೀಕ ಸಾಗರ ಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಗರ ತಾಲೂಕು ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಅಶೋಕ್ ಮರಗಿ ಹಾಗೂ ಬೆಂಬಲಿಗರು ನಮ್ಮ ಸೌಪರ್ಣಿಕಾ ಹೋಟೆಲ್ ಮೇಲೆ ದಾಳಿ ನಡೆಸಿ, ಹೋಟೆಲ್​ನಲ್ಲಿರುವ ಪೀಠೋಪಕರಣಗಳನ್ನು ದ್ವಂಸ ಮಾಡಿ, ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಹೋಟೆಲ್ ಮಾಲೀಕ ವಿರೇಶ್ ಆರೋಪಿಸಿ ಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಾಗರ ಪಟ್ಟಣದ ವರದಹಳ್ಳಿ ತಿರುವಿನ ಬಳಿ ಇರುವ ಸೌಪರ್ಣಿಕಾ ಹೋಟೆಲ್​ನಲ್ಲಿ ಕಳೆದ ರಾತ್ರಿ ಸಾಗರ ತಾಲೂಕು ಪಂಚಾಯತಿಯ ಮಾಜಿ ಉಪಾಧ್ಯಕ್ಷ ಅಶೋಕ್ ಮರಗಿ ಹಾಗೂ ಬೆಂಬಲಿಗರು ಕುಡಿದು ಗಲಾಟೆ ಮಾಡಿದ್ದಾರೆ ಎಂದು ಹೋಟೆಲ್​ ಮಾಲೀಕ ವಿರೇಶ್​ ಆರೋಪ ಮಾಡಿದ್ದಾರೆ. ಕುಡಿದು ಹೊರಗೆ ಗಲಾಟೆ ಮಾಡಬೇಡಿ ಎಂದು ಹೇಳಿದ್ದೆ. ಇದಕ್ಕೆ ಅಶೋಕ್‌ ಮರಗಿ ಹಾಗೂ ಬೆಂಬಲಿಗರು ಕೋಪಗೊಂಡು ಹೋಟೆಲ್ ಒಳಗೆ ನುಗ್ಗಿ ಪಿಠೋಪಕರಣಗಳನ್ನು ದ್ವಂಸ ಮಾಡಿದ್ದಾರೆ. ಅಲ್ಲದೆ ಹೋಟೆಲ್ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನಂತರ ಹೋಟೆಲ್ ಮುಂಭಾಗದ ನೇಮ್ ಬೋರ್ಡ್ಅನ್ನು ಸಹ ಹೊಡೆದು ಹಾಕಿದ್ದಾರೆ ಎಂದು ಹೋಟೆಲ್​ ಮಾಲೀಕ ವಿರೇಶ್​ ಆರೋಪಿಸಿದ್ದಾರೆ. ಬಳಿಕ ಈ ಘಟನೆ ಬಗ್ಗೆ ಸಾಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಚಾಕು ತೋರಿಸಿ ಚಿನ್ನಾಭರಣ ಕಿತ್ತೊಯ್ದ ಖದೀಮರು: ಗಾಯಗೊಂಡ ವೃದ್ಧೆ ಆಸ್ಪತ್ರೆಗೆ ದಾಖಲು

ಬೇಕರಿ ಗ್ರಾಹಕರ ಮೇಲೆ ಡ್ಯಾಗರ್ ಹಿಡಿದು ದರ್ಪ: ಪಕ್ಕದ ಅಂಗಡಿಯ ಗ್ರಾಹಕರ ಮೇಲೆ ಇದ್ದಕ್ಕಿದ್ದಂತೆ ಡ್ಯಾಗರ್ ಹಿಡಿದು ಹಲ್ಲೆಗೆ ಮುಂದಾದ ಆಸಾಮಿಯೊಬ್ಬ ತಾನೇ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಇತ್ತೀಚಿಗೆ ಬೆಂಗಳೂರಿನ ನಾಗರಭಾವಿ ವಿಲೇಜ್​ನಲ್ಲಿ ನಡೆದಿತ್ತು. ನಂದಿನಿ ಬೂತ್ ಮಾಲೀಕ ಕುರುಡಸ್ವಾಮಿ ಡ್ಯಾಗರ್ ಹಿಡಿದು ಹಲ್ಲೆಗೆ ಯತ್ನಿಸಿ ಆಸ್ಪತ್ರೆ ಪಾಲಾದ ಆರೋಪಿ. ನಂದಿನಿ‌ ಬೂತ್ ಪಕ್ಕದಲ್ಲಿರುವ ಬೇಕರಿ ಬಳಿ ನಿಂತಿದ್ದ ಗ್ರಾಹಕರೊಂದಿಗೆ ತಾನೇ ಕಿರಿಕ್‌ ಆರಂಭಿಸಿದ್ದ ಕುರುಡಸ್ವಾಮಿ ಏಕಾಏಕಿ ಡ್ಯಾಗರ್ ನಿಂದ ಇರಿಯಲು ಯತ್ನಿಸಿದ್ದ. ಈ ವೇಳೆ, ತಪ್ಪಿಸಿಕೊಳ್ಳವ ಭರದಲ್ಲಿ ನಡೆದ ತಳ್ಳಾಟದಲ್ಲಿ ಕುರುಡಸ್ವಾಮಿಯ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದ.

ಘಟನೆ ಬಗ್ಗೆ ಚಂದ್ರಾ ಲೇಔಟ್ ಪೊಲೀಸರು ಮಾಹಿತಿ ಪಡೆದಿದ್ದು, ತನಿಖೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿತ್ತು. ಡ್ಯಾಗರ್ ಹಿಡಿದು ಹಲ್ಲೆ ನಡೆಸಲು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದೃಶ್ಯದಲ್ಲಿ ಬೇಕರಿಗೆ ಬಂದ ಗ್ರಾಹಕರ ಬಳಿ ಡ್ಯಾಗರ್​ ಹಿಡಿದು ಕುರುಡುಸ್ವಾಮಿ ಪುಂಡಾಟ ಮೆರೆದಿದ್ದ. ಬಳಿಕ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಗುಂಪುಗಳ ನಡುವೆ ತಳ್ಳಾಟ ಏರ್ಪಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.

Last Updated : Sep 17, 2023, 10:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.