ಶಿವಮೊಗ್ಗ : ತೋಟದ ಮನೆಗೆ ಬೆಂಕಿ ಬಿದ್ದು 80 ಕ್ವಿಂಟಾಲ್ ಅಡಿಕೆ ಹಾಗೂ 20 ಕ್ವಿಂಟಾಲ್ ಕಾಳು ಮೆಣಸು ಸುಟ್ಟು ಕರಕಲಾಗಿರುವ ಘಟನೆ ಸಾಗರದ ಹೆಸರಬೈಲು ಗ್ರಾಮದಲ್ಲಿ ನಡೆದಿದೆ.
ಸಾಗರದ ನಿವಾಸಿ ಹೂಯ್ಸಳ ಎಂಬುವರ ತೋಟದ ಮನೆಗೆ ಬೆಂಕಿ ಬಿದ್ದಿದೆ. ಶರಾವತಿ ಹಿನ್ನೀರಿನ ಹೆಸರು ಬೈಲು ಗ್ರಾಮದ ತಮ್ಮ ತೋಟದ ಮನೆಯಲ್ಲಿ ಹೂಯ್ಸಳ ಅವರು ಅಡಿಕೆ ಹಾಗೂ ಕಾಳು ಮೆಣಸನ್ನು ಸಂಗ್ರಹಿಸಿಟ್ಟಿದ್ದರು.
ಕಾಳು ಮೆಣಸಿಗೆ ಬೆಲೆ ಇಲ್ಲದ ಕಾರಣ ಕಳೆದ 4 ವರ್ಷದ ಫಸಲನ್ನು ಸಂಗ್ರಹಿಸಿಟ್ಟಿದ್ದರು. ಆದರೆ, ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಹಾಗೂ ಕಾಳು ಮೆಣಸು ಸುಟ್ಟು ಕರಕಲಾಗಿದೆ.
ಶರಾವತಿ ಹಿನ್ನೀರಿನ ಪ್ರದೇಶಕ್ಕೆ ಅಗ್ನಿ ಶಾಮಕದಳದವರು ಬಂದು ಬೆಂಕಿ ಆರಿಸುವ ಹೊತ್ತಿಗೆ ಎಲ್ಲವೂ ಸುಟ್ಟು ಕರಕಲಾಗಿದೆ. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ.. ಸಿನಿಮಾದಲ್ಲಿನ ದೃಶ್ಯಕ್ಕಿಂತಲೂ ಭೀಕರ ಈ ಆಕ್ಸಿಡೆಂಟ್.. ಸಿಸಿಟಿವಿಯಲ್ಲಿ ದೃಶ್ಯ ಸೆರೆ