ETV Bharat / state

ಶಿವಮೊಗ್ಗ ಜಿಲೆಟಿನ್ ಸ್ಫೋಟ ಪ್ರಕರಣ: 6ನೇ ಮೃತದೇಹದ ಗುರುತು ಪತ್ತೆ

author img

By

Published : Sep 12, 2021, 6:53 PM IST

ಕಳೆದ ಜನವರಿಯಲ್ಲಿ ಜಿಲೆಟಿನ್ ತುಂಬಿದ್ದ ಲಾರಿ ಸ್ಫೋಟಗೊಂಡ ಪ್ರಕರಣದಲ್ಲಿ ಸಾವಿಗೀಡಾದ 6ನೇ ವ್ಯಕ್ತಿಯ ಮೃತದೇಹದ ಗುರುತು ಪತ್ತೆಯಾಗಿದೆ.

6th dead body identified after 8 month in Shivamogga gelatin blast case
ಜಿಲೆಟಿನ್ ಸ್ಫೋಟ ಪ್ರಕರಣದ 6ನೇ ಮೃತದೇಹದ ಗುರುತು ಪತ್ತೆ

ಶಿವಮೊಗ್ಗ: ಶಿವಮೊಗ್ಗದ ಹುಣಸೋಡಿನ ಕಲ್ಲುಕ್ವಾರಿ ಸ್ಫೋಟ ಪ್ರಕರಣ ಸಂಬಂಧ 8 ತಿಂಗಳ ಬಳಿಕ 6ನೇ ಮೃತದೇಹದ ಗುರುತು ಪತ್ತೆಯಾಗಿದೆ. ಜನವರಿ 21ರ ರಾತ್ರಿ ಶಿವಮೊಗ್ಗ ತಾಲೂಕು ಕಲ್ಲುಗಂಗೂರಿನ ಸರ್ವೆ ನಂಬರ್ 2ರ ಎಸ್.ಎಸ್ ಕ್ರಷರ್​​ನಲ್ಲಿ ಸ್ಪೋಟಕ ತುಂಬಿದ ಲಾರಿ ಸ್ಪೋಟಗೊಂಡು 6 ಮಂದಿ ಕಾರ್ಮಿಕರು ಮೃತಪಟ್ಟಿದ್ದರು.

ಈ ಘಟನೆಯಲ್ಲಿ ಕಾರ್ಮಿಕರ ದೇಹಗಳು ಛಿದ್ರಗೊಂಡಿದ್ದವು. ಹೀಗಾಗಿ ಮೃತರ ಗುರುತು ಪತ್ತೆ ಮಾಡುವುದು ಸಹ ಕಷ್ಟವಾಗಿತ್ತು. ಬಳಿಕ ಐವರ ಗುರುತು ಪತ್ತೆಯಾಗಿತ್ತಲ್ಲದೇ, ಓರ್ವನ ಗುರುತು ಪತ್ತೆಗಾಗಿ ಬೆಂಗಳೂರಿನ ಎಫ್​​ಎಸ್​​ಎಲ್​​ಗೆ ಮಾದರಿ ಕಳುಹಿಸಲಾಗಿತ್ತು.

ಇದೀಗ ಈ ವರದಿ ಬಂದಿದೆ. ಮೃತಪಟ್ಟ ವ್ಯಕ್ತಿ ಭದ್ರಾವತಿಯ ಶಶಿ ಅಲಿಯಾಸ್ ದೇವೇಂದ್ರ (32) ಎಂಬುದು ತಿಳಿದುಬಂದಿದೆ. ಶಶಿ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಜೊತೆಗೆ ಕಲ್ಲು ಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: ಮದುವೆಗೆ ಇದ್ದಿದ್ದು ಮೂರೇ ದಿನ..: ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡ ಮದುಮಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.