ETV Bharat / state

ಚಿಲ್ಲರೆ ಕೇಳುವ ನೆಪದಲ್ಲಿ 60 ಗ್ರಾಂ ಚಿನ್ನ ಎಗರಿಸಿದ ಖದೀಮ

ಶಿವಮೊಗ್ಗದ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್​ನ ಸುಬ್ರಮಣಿ ಗೋಲ್ಡ್ ಸ್ಮಿತ್ ಶಾಪ್​​ಗೆ ಬಂದ ವ್ಯಕ್ತಿಯೊರ್ವ ಚಿಲ್ಲರೆ ಕೇಳುವ ನೆಪದಲ್ಲಿ ಶಾಪ್​ಗೆ ನುಗ್ಗಿ 60 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾನೆ.

ಚಿಲ್ಲರೆ ನೆಪದಲ್ಲಿ ಬಂಗಾರ ಎಗರಿಸಿದ ಖದೀಮ
author img

By

Published : Sep 18, 2019, 11:42 AM IST

ಶಿವಮೊಗ್ಗ: 500 ರೂಪಾಯಿಯ ಚಿಲ್ಲರೆ ಕೇಳುವ ನೆಪದಲ್ಲಿ ಬಂಗಾರದಂಗಡಿಗೆ ಬಂದಿದ್ದ ಖದೀಮನೊಬ್ಬ ಅಂಗಡಿಯಲ್ಲಿಟ್ಟಿದ್ದ 60 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದ. ಬಳಿಕ ಕಳ್ಳನನ್ನ ಅಂಗಡಿಯವರು ಸಾರ್ವಜನಿಕರ ನೆರವಿನೊಂದಿಗೆ ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್​ನ ಸುಬ್ರಮಣಿ ಗೋಲ್ಡ್ ಸ್ಮಿತ್ ಶಾಪ್​​ಗೆ ಬಂದ ವ್ಯಕ್ತಿಯೊರ್ವ ಶಾಪ್​ಗೆ ನುಗ್ಗಿ, ಮೊದಲು 500 ರೂಪಾಯಿಯ ಚಿಲ್ಲರೆ ಕೇಳಿದ್ದಾನೆ. ಬಳಿಕ ಚಿಲ್ಲರೆ ಪಡೆಯುವ ನೆಪದಲ್ಲಿ ಅಲ್ಲೆ ಇದ್ದ ಚಿನ್ನ ಎಗರಿಸಿಕೊಂಡು ಹೋಗಿದ್ದಾನೆ.‌

ಚಿಲ್ಲರೆ ನೆಪದಲ್ಲಿ ಬಂಗಾರ ಎಗರಿಸಿದ ಖದೀಮ

ನಂತರ ಅಂಗಡಿಯವನಿಗೆ ತನ್ನ ಅಂಗಡಿಯಿಂದ ಯಾವುದೋ ಒಂದು ವಸ್ತು ಕಾಣೆಯಾಗಿರುವ ಬಗ್ಗೆ ಅರಿವಿಗೆ ಬಂದಿದೆ. ಹೊರಗಡೆಯ‌ ಸಿಸಿಟಿವಿ ಕ್ಯಾಮರಾ ಗಮನಿಸಿದಾಗ ಕಳ್ಳನ ಚಲನವಲನ ನೋಡಿ ಅಂಗಡಿಯನ್ನು ಮತ್ತೆ ಪರಿಶೀಲಿಸಿದಾಗ ಅಂಗಡಿಯಲ್ಲಿದ್ದ 60 ಗ್ರಾಂ ಬಂಗಾರ ಕಾಣೆಯಾಗಿರುವುದು ತಿಳಿದು ಬಂದಿದೆ.

ತಕ್ಷಣ ಆತನನ್ನು ಹುಡುಕಿದಾಗ ಆತ ಗಾಂಧಿ ಬಜಾರ್​ನಲ್ಲಿಯೇ ಇರುವುದನ್ನು ಕಂಡು ಸಾರ್ವಜನಿಕರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಬಂದ ದೊಡ್ಡಪೇಟೆ ಪೊಲೀಸರು ಆರೋಪಿಯನ್ನು ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸೆರೆ ಸಿಕ್ಕ ಕಳ್ಳ ದಾವಣಗೆರೆ ಜಿಲ್ಲೆ ಹರಿಹರದವನು ಎಂದು ತಿಳಿದು ಬಂದಿದೆ.

Intro:ಚೆಂಜ್ ಕೇಳುವ ನೆಪದಲ್ಲಿ 60 ಗ್ರಾಂ ಬಂಗಾರ ಎಗರಿಸಿದ ಕದೀಮ: ಕಳ್ಳನ ಬಂಧನ.

ಶಿವಮೊಗ್ಗ: 500 ರೂಪಾಯಿಯ ಚೆಂಜ್ ಕೇಳುವ ನೆಪದಲ್ಲಿ ಬಂಗಾರದಂಗಡಿಗೆ ಬಂದಿದ್ದ ಕದೀಮನೊಬ್ಬ ಅಂಗಡಿಯಲ್ಲಿಟ್ಟಿದ್ದ 60 ಗ್ರಾಂ ಬಂಗಾರವನ್ನು ಕದ್ದು ಪರಾರಿಯಾಗಿದ್ದ ಕದೀಮನನ್ನು ಅಂಗಡಿಯವ ಸಾರ್ವಜನಿಕರ ನೆರವಿನೊಂದಿಗೆ ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ ನ ಸುಬ್ರಮಣಿ ಗೋಲ್ಡ್ ಸ್ಮಿತ್ ಶಾಪ್ ಗೆ ಬಂದ ವ್ಯಕ್ತಿಯೂರ್ವ ಶಾಪ್ ಗೆ ನುಗ್ಗಿ, ಮೊದಲು 500 ರೂಪಾಯಿಯ ಚಿಲ್ಲರೆ ಕೇಳಿದ್ದಾನೆ. ಚಿಲ್ಲರೆ ಪಡೆಯು ನೆಪದಲ್ಲಿ ಅಲ್ಲೆ ಇದ್ದ ಬಂಗಾರವನ್ನು‌ ಎಗರಿಸಿಕೊಂಡು ಹೋಗಿದ್ದಾನೆ.‌Body:ಚಿಲ್ಲರೆ ಕೇಳಲು ಬಂದು ಹೋದ ನಂತ್ರ ಅಂಗಡಿಯವನಿಗೆ ತನ್ನ ಅಂಗಡಿಯಿಂದ ಯಾವುದೂ ಒಂದು ವಸ್ತು ಕಾಣೆಯಾಗಿರುವ ಬಗ್ಗೆ ಅರಿವಿಗೆ ಬಂದಿದೆ. ನಂತ್ರ ಹೊರಗಡೆಯ‌ ಸಿ.ಸಿ. ಕ್ಯಾಮಾರವನ್ನು ಗಮನಿಸಿದಾಗ ಕಳ್ಳನ ಚಲನವಲನ ನೋಡಿ ಅಂಗಡಿಯನ್ನು ಮತ್ತೆ ಪರಿಶೀಲಿಸಿದಾಗ ಅಂಗಡಿಯಲ್ಲಿದ್ದ 60 ಗ್ರಾಂ ಬಂಗಾರ ಕಾಣೆಯಾಗಿರುವುದು ತಿಳಿದು ಬಂದಿದೆ.Conclusion:ತಕ್ಷಣ ಆತನನ್ನು ಹುಡುಕಿದಾಗ ಆತ ಗಾಂಧಿ ಬಜಾರ್ ನಲ್ಲಿಯೆ ಇರುವುದನ್ನು ಕಂಡು ಸಾರ್ವಜನಿಕರ ಸಹಾಯದಿಂದ ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಗಾಂಧಿ ಬಜಾರ್ ಮೊದಲೆ ಜನನಿಬಿಡ ಪ್ರದೇಶವಾಗಿದೆ. ಕಳ್ಳನನ್ನು ಹಿಡಿಯುತ್ತಿದ್ದಂತೆಯೇ ಜನ ಜಮಾವಣೆಗೊಂಡಿದ್ದಾರೆ. ಸ್ಥಳಕ್ಕೆ ಬಂದ ದೊಡ್ಡಪೇಟೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಠಾಣೆಗೆ ಕರೆದು ಕೊಂಡು ಹೋಗಿದ್ದಾರೆ. ಸೆರೆ ಸಿಕ್ಕ ಕಳ್ಳ ದಾವಣಗೆರೆ ಜಿಲ್ಲೆ ಹರಿಹರದವನು ಎಂದು ತಿಳಿದು ಬಂದಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.