ETV Bharat / state

ಶಿಕಾರಿಪುರ : ಶ್ರೀಗಂಧ ಕದ್ದ ಮೂವರಿಗೆ 5 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ

ಶ್ರೀಗಂಧ ಕಳವು ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿ ಆದೇಶಿಸಿದೆ.

5-years-imprisonment-and-50-thousand-fine-for-three-who-stole-sandalwood
ಶಿಕಾರಿಪುರ : ಶ್ರೀಗಂಧ ಕದ್ದ ಮೂವರಿಗೆ 5 ವರ್ಷ ಜೈಲು ಶಿಕ್ಷೆ,50 ಸಾವಿರ ದಂಡ
author img

By

Published : Oct 18, 2022, 4:12 PM IST

ಶಿವಮೊಗ್ಗ : ಶ್ರೀಗಂಧ ಕಳವು ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯವು 5 ವರ್ಷ ಶಿಕ್ಷೆ ಹಾಗೂ 50 ಸಾವಿರ ದಂಡವನ್ನು‌ ವಿಧಿಸಿ‌ ಆದೇಶಿಸಿದೆ.

2017 ರಲ್ಲಿ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮುದಿಗೌಡ ಕೇರಿಯಲ್ಲಿ ಶ್ರೀಗಂಧ ಮರವನ್ನು ಕಳವು ಮಾಡಿದ ಬಗ್ಗೆ ದೂರು ದಾಖಲಾಗಿತ್ತು.‌ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ಅಂದಿನ ಸಿಪಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ತರಿಕೆರೆ ಬಿಲ್ಲಹಳ್ಳಿಯ ಮಹಮ್ಮದ್ ರಿಜ್ವಾನ್(25) ಹಾಗೂ ಬರ್ಕತ್ ಅಲಿ(54) ಮತ್ತು ಚನ್ನಗಿರಿ ಹೊನ್ನೆಬಾಗಿಯ ಮಹಮ್ಮದ್ ಅಜಂ(25) ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಅವರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಾದಗಳನ್ನು ಆಲಿಸಿ ಮೂವರು ಆರೋಪಿಗಳಿಗೆ 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದರೆ, 6 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರ ಪೀಠ ಆದೇಶ ಹೊರಡಿಸಿದೆ. ಶ್ರೀಗಂಧ ಕಳ್ಳತನಕ್ಕೆ ದೊಡ್ಡ ಪ್ರಮಾಣ ಶಿಕ್ಷೆ ಇದೇ ಮೊದಲು ಎನ್ನಬಹುದು.

ಇದನ್ನೂ ಓದಿ : ರಾಮಮಂದಿರ ಕೆಡವಲು, ಬಾಬರಿ ಮಸೀದಿ ಮರುನಿರ್ಮಾಣಕ್ಕೆ ಪಿಎಫ್‌ಐ ಪ್ಲಾನ್​​: ತನಿಖೆಯಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.