ಶಿವಮೊಗ್ಗ: ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ 4 ದಿನದ ಹಸುಗೂಸನ್ನು ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆಗೆ ಝಿರೋ ಟ್ರಾಫಿಕ್ನಲ್ಲಿ ರವಾನಿಸಲಾಗಿದೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದಿಂದ ಮಣಿಪಾಲಕ್ಕೆ ರವಾನೆ ಮಾಡಲಾಯಿತು.
ಭದ್ರಾವತಿಯ ಅಶ್ವಥ್ ನಗರದ ದೇವೆಂದ್ರ ಮತ್ತು ಸುಪ್ರಿಯಾ ದಂಪತಿಗೆ ಕಳೆದ ನಾಲ್ಕು ದಿನದ ಹಿಂದೆ ಹೆಣ್ಣು ಶಿಶು ಜನಿಸಿತ್ತು. ಈ ವೇಳೆ ಮಗುವಿಗೆ ಕ್ಯಾನ್ಸರ್ ಇರುವುದು ದೃಢವಾಗಿದೆ. ಹೀಗಾಗಿ ಝಿರೋ ಟ್ರಾಫಿಕ್ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಆ್ಯಂಬುಲೆನ್ಸ್ನಲ್ಲಿ ನವಜಾತ ಶಿಶುವನ್ನು ರವಾನಿಸಲಾಗಿದೆ.
ಶಿವಮೊಗ್ಗದಿಂದ ಮಣಿಪಾಲದವರೆಗೂ ಝಿರೋ ಟ್ರಾಫಿಕ್ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಮೇಲ್ವಿಚಾರಣೆಯಲ್ಲಿ ಕಲ್ಪಿಸಲಾಗಿತ್ತು. ಶಿವಮೊಗ್ಗದಿಂದ ಉಡುಪಿಯ ಗಡಿ ಭಾಗದ ತನಕ ಶಿವಮೊಗ್ಗ ಜಿಲ್ಲೆಯ ಪೊಲೀಸರು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದರು. ನಂತರ ಉಡುಪಿ ಪೊಲೀಸರು ಝಿರೋ ಸಹ ಇದಕ್ಕೆ ಸಹಕರಿಸಿದರು.