ಶಿವಮೊಗ್ಗ: ತಾಲೂಕಿನ ಕಲ್ಲಗಂಗೂರಿನ ಮಂಜುನಾಥ್ ಎಂಬುವರ ಟಿಪ್ಪರ್ ಎಂಜಿನ್ನಲ್ಲಿ ಹೆಬ್ಬಾವು ಸೇರಿಕೊಂಡಿತ್ತು. ಎಂಜಿನ್ನಲ್ಲಿದ್ದ ಈ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಸ್ನೇಕ್ ಕಿರಣ್ ಕಾಡಿಗೆ ಬಿಟ್ಟಿದ್ದಾರೆ.
ಹಾವನ್ನು ಓಡಿಸಲು ಮಂಜುನಾಥ್ ಸಾಕಷ್ಟು ಪ್ರಯತ್ನ ಪಟ್ಟರು ಹೆಬ್ಬಾವು ಹೋಗದ ಹಿನ್ನೆಲೆ ಸ್ನೇಕ್ ಕಿರಣ್ ಅವರಿಗೆ ತಿಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ 3 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಮೂಲಕ ಕಾಡಿಗೆ ಬಿಟ್ಟಿದ್ದಾರೆ.