ಶಿವಮೊಗ್ಗ: ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಸಿರಾಜುದ್ದೀನ್(22), ಅನಿಲ್(21) ಹಾಗೂ ಶಿಕಾರಿಪುರ ತಾಲೂಕು ಕಲ್ಮನೆಯ ಫಕಿರಪ್ಪ(45) ಬಂಧಿತ ಆರೋಪಿಗಳು. ಬಂಧಿತರಿಂದ 20 ಸಾವಿರ ಮೌಲ್ಯದ 1.310 ಗ್ರಾಂ. ತೂಕದ ಗಾಂಜಾ ಹಾಗೂ ಆ್ಯಕ್ಟಿವಾ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
![3 arest who transporting ganja](https://etvbharatimages.akamaized.net/etvbharat/prod-images/kn-smg-02-gaanja-arrest-7204213_15122019211215_1512f_1576424535_25.jpg)
ಬಂಧಿತರು ಶಿವಮೊಗ್ಗ, ಆಯನೂರು, ಹಣಗೆರೆ ಮಾರ್ಗವಾಗಿ ಬೆಜ್ಜವಳ್ಳಿ ಮೂಲಕ ತೀರ್ಥಹಳ್ಳಿಗೆ ಸರಕನ್ನು ಸಾಗಿಸುವ ಖಚಿತ ಮಾಹಿತಿ ಮೇರೆಗೆ, ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿ ಸಿಪಿಐ ಗಣೇಶಪ್ಪ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.