ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 239 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 6,264ಕ್ಕೆ ಏರಿಕೆಯಾಗಿದೆ.
ಇಂದು 220 ಜನ ಗುಣಮುಖರಾಗಿದ್ದು, ಇದುವರೆಗೂ 4,242 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4 ಜನ ಸೋಂಕಿತರು ಸಾವನ್ನಪ್ಪಿದ್ದು, ಈವರೆಗೆ 111 ಸೋಂಕಿತರು ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,385 ಸಕ್ರಿಯ ಪ್ರಕರಣಗಳಿವೆ.
ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 135, ಕೋವಿಡ್ ಕೇರ್ ಸೆಂಟರ್ನಲ್ಲಿ 161, ಖಾಸಗಿ ಆಸ್ಪತ್ರೆಯಲ್ಲಿ 228, ಮನೆಯಲ್ಲಿ 800 ಜನ ಐಸೋಲೇಷನ್ ಹಾಗೂ ಆಯುರ್ವೇದಿಕ್ ಕಾಲೇಜಿನಲ್ಲಿ 61 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್ ಸಂಖ್ಯೆ 2,639 ಏರಿಕೆಯಾಗಿದೆ. ಇದರಲ್ಲಿ 902 ಜೋನ್ ವಿಸ್ತರಣೆಯಾಗಿದೆ.
ತಾಲೂಕುವಾರು ಸೋಂಕಿತರ ವಿವರ:
ಶಿವಮೊಗ್ಗ106
ಭದ್ರಾವತಿ 33
ಶಿಕಾರಿಪುರ 35
ತೀರ್ಥಹಳ್ಳಿ13
ಸೊರಬ 09
ಸಾಗರ 18
ಹೊಸನಗರ 04
ಬೇರೆ ಜಿಲ್ಲೆಯಿಂದ ಒಬ್ಬ ಸೋಂಕಿತರು ಪತ್ತೆಯಾಗಿದ್ದಾರೆ.