ಶಿವಮೊಗ್ಗ: ಜಿಲ್ಲೆಯಲ್ಲಿ ಒಂದೇ ದಿನ 22 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ.
ಭದ್ರಾವತಿಯಲ್ಲಿ 7, ಶಿಕಾರಿಪುರ 8, ಶಿವಮೊಗ್ಗದಲ್ಲಿ 2, ಹೊಸನಗರ, ತೀರ್ಥಹಳ್ಳಿ ಹಾಗೂ ಸೊರಬದಲ್ಲಿ ತಲಾ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಬಹುತೇಕ ಸೋಂಕಿತರ ಲಕ್ಷಣಗಳು ಶೀತ, ಜ್ವರದಿಂದ ಕೂಡಿವೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 22 ಪ್ರಕರಣಗಳು ಸೇರಿ ಒಟ್ಟು 173 ಸೋಂಕಿತರು ಕಂಡಬಂದಿದ್ದಾರೆ. ಇದರಲ್ಲಿ 109 ಜನ ಡಿಸ್ಚಾರ್ಜ್ ಆಗಿದ್ದು, 62 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ವೃದ್ಧೆಯ ಸಂಪರ್ಕ ತಂದ ಆಪತ್ತು :
ಶಿಕಾರಿಪುರದ ಕವಾಸಪುರದಲ್ಲಿ ಕಳೆದ ವಾರ ವೃದ್ಧೆಯೊಬ್ಬರು ಕೊರೊನಾ ಸೋಂಕಿನಿಂದ ಮೃತರಾಗಿದ್ದರು. ಇವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ 8 ಜನರಿಗೆ ಕೊರೊನಾ ಪಾಸಿಟಿವ್ ಎಂಬ ವರದಿ ಬಂದಿದೆ. ಭದ್ರಾವತಿಯ ಬಸ್ ಏಜೆಂಟ್ ಸಂಪರ್ಕದಿಂದ ಐವರು ಸೇರಿದಂತೆ ಖಾಸಗಿ ಆಸ್ಪತ್ರೆಯ ವೈದ್ಯರಿಗೂ ಸೋಂಕು ತಗುಲಿದೆ.
ಭದ್ರಾವತಿಯಲ್ಲಿ ಎರಡು ಏರಿಯಾದ 5 ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸೊರಬದ ಮುಖ್ಯ ರಸ್ತೆ, ಶಿವಮೊಗ್ಗದ ಗಾಂಧಿನಗರ, ತೀರ್ಥಹಳ್ಳಿಯ ಮೀನು ಮಾರುಕಟ್ಟೆ ರಸ್ತೆ, ರಿಪ್ಪನಪೇಟೆ ಗ್ರಾಮಗಳಲ್ಲಿ ಸೀಲ್ ಡೌನ್ಗೆ ಒಳಪಡಿಸಲಾಗಿದೆ.