ಶಿವಮೊಗ್ಗ: ಜಿಲ್ಲೆಯಲ್ಲಿ 209 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 600 ಜನರು ಗುಣಮುಖರಾಗಿದ್ದಾರೆ. ಸೋಂಕಿತರ ಸಂಖ್ಯೆ 6,025ಕ್ಕೆ ಏರಿಕೆಯಾಗಿದ್ದು, ಇದುವರೆಗೂ 4,022 ಜನರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ ಐವರು ಸೇರಿ ಇದುವರೆಗೂ 107 ಜನ ಸಾವನ್ನಪ್ಪಿದ್ದು, 1,476 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 138, ಕೋವಿಡ್ ಕೇರ್ ಸೆಂಟರ್ನಲ್ಲಿ 272, ಖಾಸಗಿ ಆಸ್ಪತ್ರೆಯಲ್ಲಿ 277, ಮನೆಯಲ್ಲಿ 738 ಜನ, ಆಯುರ್ವೇದಿಕ್ ಕಾಲೇಜಿನಲ್ಲಿ 51 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್ ಸಂಖ್ಯೆ 2,552 ಏರಿಕೆಯಾಗಿದೆ.
ತಾಲೂಕುವಾರು ಸೋಂಕಿತರ ವಿವರ:
ಶಿವಮೊಗ್ಗ-138
ಭದ್ರಾವತಿ-30
ಶಿಕಾರಿಪುರ-16
ತೀರ್ಥಹಳ್ಳಿ-07
ಸೊರಬ-03
ಸಾಗರ-08
ಜೊತೆಗೆ ಬೇರೆ ಜಿಲ್ಲೆಯಿಂದ 06 ಜನ ಸೋಂಕಿತರಿದ್ದಾರೆ.