ETV Bharat / state

ಬಿ ವೈ ರಾಘವೇಂದ್ರ ಖಾತೆಯಿಂದ 16 ಲಕ್ಷ ರೂ ಕನ್ನ : ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆಯಿಂದಿರಿ ಎಂದ ಸಂಸದ - ಈಟಿವಿ ಭಾರತ ಕನ್ನಡ

ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆದ ಬ್ಯಾಂಕ್ ಡಿಜಿಟಲ್ ಪಾವತಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ ಅವರು ಬ್ಯಾಂಕ್​ನ ಒಟಿಪಿ ಇತರರಿಗೆ ಹೇಳ ಬೇಡಿ ಎಂದು ಎಚ್ಚರಿಕೆ ನೀಡಿದರು.

19-lakh-has-been-lost-due-to-cybercrime-said-b-y-raghavendra
ಬಿ ವೈ ರಾಘವೇಂದ್ರ ಖಾತೆಯಿಂದ 19 ಲಕ್ಷ ರೂ ಕನ್ನ
author img

By

Published : Oct 12, 2022, 4:18 PM IST

Updated : Oct 12, 2022, 5:00 PM IST

ಶಿವಮೊಗ್ಗ: ಸೈಬರ್ ಕ್ರೈಂ ನಡೆಸುವವರು ನನ್ನ ಖಾತೆಗೂ 16 ಲಕ್ಷ ರೂ ಕನ್ನ ಹಾಕಿದ್ದರು. ಇದರಿಂದ ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದ್ದಾರೆ.

ಇಂದು ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆದ ಬ್ಯಾಂಕ್ ಡಿಜಿಟಲ್ ಪಾವತಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುವಾಗ, ತಮ್ಮ ಖಾತೆಗೆ ಕನ್ನ ಹಾಕಿದ ಬಗ್ಗೆ ಮಾಹಿತಿ ನೀಡಿದರು. ಶಿವಮೊಗ್ಗ ಪಿಇಎಸ್​ ಇಂಜಿನಿಯರಿಂಗ್ ಕಾಲೇಜಿನ ತಮ್ಮ ಖಾತೆಗೆ ಕನ್ನ ಹಾಕಿ 16 ಲಕ್ಷ ರೂ ಲಪಟಾಯಿಸಿದ್ದರು‌ ಎಂದು ಹೇಳಿದರು.

ನನ್ನ ಖಾತೆಗೆ ಮುಂಬೈ ಮೂಲದವರು 16 ಲಕ್ಷ ರೂ ಕನ್ನ ಹಾಕಿದ್ದರು.

ನನ್ನ ಖಾತೆಯಲ್ಲಿ ಹಣ ಹೋದ ಬಗ್ಗೆ ಶಿವಮೊಗ್ಗದ ಸಿಇಎನ್ ಪೊಲೀಸರಿಗೆ ತಿಳಿಸಿದ ಮೇರೆಗೆ ಅವರು ಬಾಂಬೆಯಲ್ಲಿ ಕುಳಿತು ಕನ್ನ ಹಾಕುವವನನ್ನು ಹಿಡಿದು ಕರೆ ತಂದಿದ್ದರು. ಇದರಿಂದ ಎಲ್ಲರೂ ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸಬೇಕು. ಸುಮ್ಮನೆ ಒಟಿಪಿ ನೀಡುವುದು, ಬ್ಯಾಂಕ್ ಖಾತೆ ವಿವರ ನೀಡುವುದನ್ನು ಮಾಡಬಾರದು ಎಂಬ ಎಚ್ಚರಿಕೆ ನೀಡಿದರು.

ಈ ವೇಳೆ ಕೆನರಾ ಬ್ಯಾಂಕ್ ಎಜಿಎಂ ಪ್ರದೀಪ್ ಕುಮಾರ್, ಯ ಎನ್ ಐ ಬ್ಯಾಂಕ್ ಉಪ ಮಹಾಪ್ರಬಂಧಕ ಎ.ರಾಜಮಣಿ, ನಬಾರ್ಡ್ ಅಧಿಕಾರಿ ರವಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್ ಸೇರಿ ಇತರರಿದ್ದರು.

ಇದನ್ನೂ ಓದಿ : ಆಧಾರ್​ಗೆ 10 ವರ್ಷಗಳ ಹಿಂದೆ ನೀಡಿದ ದಾಖಲೆ ನವೀಕರಿಸಿ: ಯುಐಡಿಎಐ

Last Updated : Oct 12, 2022, 5:00 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.