ETV Bharat / state

ಶಿವಮೊಗ್ಗ: ಮಂಗನ ಕಾಯಿಲೆಯಿಂದ 18 ವರ್ಷದ ಯುವತಿ ಸಾವು, ವರ್ಷದ ಮೊದಲ ಸಾವು - ಕೆಎಫ್​ಡಿ

ಮಂಗನ ಕಾಯಿಲೆಯಿಂದ 18 ವರ್ಷದ ಯುವತಿ ಮೃತಪಟ್ಟಿರುವ ಘಟನೆ ಹೊಸನಗರದಲ್ಲಿ ನಡೆದಿದೆ.

Etv Bharat18-year-old-girl-died-by-kfd-in-shivamogga
ಶಿವಮೊಗ್ಗ: ಮಂಗನ ಕಾಯಿಲೆಯಿಂದ 18 ವರ್ಷದ ಯುವತಿ ಸಾವು, ವರ್ಷದ ಮೊದಲ ಸಾವು
author img

By ETV Bharat Karnataka Team

Published : Jan 8, 2024, 8:09 PM IST

ಶಿವಮೊಗ್ಗ: ಮಾರಣಾಂತಿಕ ರೋಗ ಮಂಗನ ಕಾಯಿಲೆಗೆ ಹೊಸನಗರ ತಾಲೂಕು ಅರಮನೆ ಕೊಪ್ಪ ಗ್ರಾಮದ 18 ವರ್ಷ ಯುವತಿ ಸಾವನ್ನಪ್ಪಿದ್ದಾರೆ. ಕಳೆದ ವಾರ ಯುವರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ತೀವ್ರ ಜ್ವರಕ್ಕೆ ತುತ್ತಾಗಿದ್ದ ಯುವತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಜ್ವರ ಕಡಿಮೆಯಾಗದ ಕಾರಣಕ್ಕೆ ಯುವತಿಯನ್ನು ಶುಕ್ರವಾರ ಮಣಿಪಾಲಕ್ಕೆ ಶಿಫ್ಟ್ ಮಾಡಲಾಗಿತ್ತು. ದುರಾದೃಷ್ಟವಶಾತ್​ ಯುವತಿ ಸೋಮವಾರ ಸಂಜೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಯುವತಿ ಸಾವಿನ ಕುರಿತು ಈಟಿವಿ ಭಾರತ್​ಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ‌ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, "ಯುವತಿಯು ಅರಮನೆಕೊಪ್ಪದ ನಿವಾಸಿಯಾಗಿದ್ದು, ಈಕೆಗೆ ಜ್ವರ ಬಂದು ಒಂದೆರಡು ದಿನವಾದರೂ ಕಡಿಮೆಯಾಗದ ಕಾರಣಕ್ಕೆ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಂದಾಗ ತಪಾಸಣೆ ನಡೆಸಿ ವೈದ್ಯರು, ಅನುಮಾನಗೊಂಡು ರಕ್ತ ಪರೀಕ್ಷೆ ನಡೆಸಿದಾಗ ಯುವತಿಯ ರಕ್ತದಲ್ಲಿ ಪ್ಲೇಟ್​ಲೆಟ್ ಕಡಿಮೆಯಾಗಿತ್ತು. ಆರ್​ಟಿಪಿಸಿಆರ್ ನಲ್ಲಿ ಮೊದಲು ಪರೀಕ್ಷಿಸಿದಾಗ ನೆಗೆಟಿವ್ ಬಂದಿತ್ತು. ಮತ್ತೆರಡು ಬಾರಿ ಪರೀಕ್ಷಿಸಿದಾಗ ಕೆಎಫ್​ಡಿ(ಕ್ಯಾಸನೂರು ಫಾರೆಸ್ಟ್ ಡಿಸೀಸ್) ಪಾಸಿಟಿವ್ ಬಂದಿತ್ತು ಎಂದರು.

ಯುವತಿಯಲ್ಲಿ ರಕ್ತದಲ್ಲಿ‌ ಪ್ಲೇಟ್ಲೆಟ್ ಕಡಿಮೆ ಆದಾಗ ಇವರಲ್ಲಿ ಮೆದುಳು ಜ್ವರ ಕಾಣಿಸಿಕೊಂಡಿತ್ತು. ಇದಕ್ಕೂ ಸಹ ಚಿಕಿತ್ಸೆ ಕೊಡಲಾಗಿತ್ತು. ಶಿವಮೊಗ್ಗದ ಆಸ್ಪತ್ರೆಯಲ್ಲಿ ಇದ್ದಾಗ ಯುವತಿಗೆ ರಕ್ತವನ್ನು ನೀಡಲಾಗಿತ್ತು. ಎಬಿಕೆ ಆರೋಗ್ಯ ಕಾರ್ಡ್​ ಮೂಲಕ ಯುವತಿಗೆ ಚಿಕಿತ್ಸೆಗೆ ಕೊಡಿಸಲಾಗಿತ್ತು. ಇನ್ನು ಅರಮನೆಕೊಪ್ಪ ಭಾಗದಲ್ಲಿ ಕೆಎಫ್​ಡಿಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಈ ಭಾಗದಲ್ಲಿ ಸುಮಾರು 10 ವರ್ಷಗಳ ನಂತರ ಕೆಎಫ್​ಡಿ ಕಾಣಿಸಿಕೊಂಡಿದೆ. ಈ ಮೂಲಕ ಕೆಎಫ್​ಡಿಗೆ ಮೊದಲ ಸಾವು ಇದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸಾಗರ : ಶ್ವಾನ ಪ್ರದರ್ಶನದಲ್ಲಿ ವೀಕ್ಷಕರ ಮೇಲೆ ಎರಗಿ ಕಚ್ಚಿ ಗಾಯಗೊಳಿಸಿದ ರಾಟ್ ವ್ಹೀಲರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.