ETV Bharat / state

ವಚನಕಾರರ ಕಾಲ ನಾಡಿನ ಅದ್ಭುತ ಶತಮಾನ: ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಅಭಿಮತ

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ 'ಕಾಯಕ ಶರಣರ ಜಯಂತಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Kayaka sharanara jayanti
ಶಿವಮೊಗ್ಗದಲ್ಲಿ ನಡೆದ ಕಾಯಕ ಶರಣರ ಜಯಂತಿ
author img

By

Published : Feb 22, 2020, 5:11 AM IST

ಶಿವಮೊಗ್ಗ: 12ನೇ ಶತಮಾನದಲ್ಲಿ ಮೂಢನಂಬಿಕೆ ಹಾಗೂ ಜಾತಿ ಪದ್ಧತಿಯ ವಿರುದ್ಧ ವಚನಗಳ ಮೂಲಕ ಜನ ಜಾಗೃತಿ ಮೂಡಿಸಿದ್ದ ವಚನಕಾರರ ಕೊಡುಗೆ ಅಪಾರವಾದದ್ದು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಅಭಿಪ್ರಾಯಪಟ್ಟರು.

ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಯೋಜಿಸಿದ್ದ 'ಕಾಯಕ ಶರಣರ ಜಯಂತಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಕಾರರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡಿದ್ದರು. ಅವರ ಸಾಮಾಜಿಕ ಕಳಕಳಿ ಕಾರ್ಯದಿಂದ ಹನ್ನೆರಡನೇ ಶತಮಾನ ಬಹಳ ಮಹತ್ವದ ಶತಮಾನ ಎಂದರು.

ಸಮಾಜ ಸುಧಾರಣೆ ಆಗಬೇಕಾದರೆ ನಮ್ಮಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕಾಗಿದೆ. ಕೇವಲ ಜಯಂತಿಗಳನ್ನು ಆಚರಿಸಿದರೆ ಸಾಲದು. ಪಠ್ಯಪುಸ್ತಕಗಳಲ್ಲಿ ಅವರ ತತ್ವಗಳನ್ನು ಸೇರಿಸಬೇಕು. ಅವುಗಳ ಮೂಲಕ ಸಮಾಜದಲ್ಲಿ ಸಮಾನತೆ ಸಾರುವುದು ಬಹುಮುಖ್ಯ. ತಮ್ಮ ಮಕ್ಕಳಿಗೆ ಸರ್ವಜ್ಞ, ಬಸವಣ್ಣ ಸೇರಿದಂತೆ ಅನೇಕ ಸಾಧಕರ ಜೀವನ ಚರಿತ್ರೆ ತಿಳಿಸಬೇಕು. ಅವರು ತತ್ವಗಳು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್ ಉಮೇಶ್, ಸಮಾಜದ ಮುಖಂಡ ಹಾಲೇಶಪ್ಪ ಸೇರಿದಂತೆ ಇತರ ಸದಸ್ಯರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.