ETV Bharat / state

ರಾಮನಗರದಲ್ಲಿ ಕೋವಿಡ್‌ಗೆ ಯುವಕ ಬಲಿ - Young man died in ramnagar due to covid 19

ರಾಮನಗರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32 ವರ್ಷದ ಯುವಕ ಇಂದು ಸಾವನ್ನಪ್ಪಿದ್ದಾನೆ.

Ramnagar
Ramnagar
author img

By

Published : Jul 5, 2020, 1:58 PM IST

ರಾಮನಗರ: ಕೊರೊನಾ ಸೋಂಕು ತಗುಲಿದ ಕಾರಣ ರಾಮನಗರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32 ವರ್ಷದ ಯುವಕ ಇಂದು ಸಾವನ್ನಪ್ಪಿದ್ದಾನೆ.

ಕಳೆದ 5 ದಿನಗಳ ಹಿಂದೆ ಈ ಯುವಕ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ. ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಉಂಟಾದ ಕಾರಣ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಮೃತನು ಮಾಗಡಿ ಪಟ್ಟಣದ ಜ್ಯೋತಿನಗರ ಬಡಾವಣೆ ನಿವಾಸಿಯಾಗಿದ್ದಾನೆ. ಮಾಗಡಿಯಲ್ಲಿ ಕೊರೊನಾ ಸಾವಿನ ಸಂಖ್ಯೆ 5 ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ.

ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ವೃದ್ಧ ಸಾವು:

ಮಾಗಡಿಯ ಹುಲಿಕಟ್ಟೆ ಕ್ವಾರಂಟೈನ್ ಕೇಂದ್ರದಲ್ಲಿದ್ದ 60 ವರ್ಷದ ವೃದ್ಧ ನಿನ್ನೆ ಸಂಜೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ಕೊರೊನಾ ಪರೀಕ್ಷೆಯ ವರದಿ ಬಂದ ನಂತರ ಕೋವಿಡ್ ಸೋಂಕಿನ‌ ಬಗ್ಗೆ ತಿಳಿಯಲಿದೆ ಎಂದು ಅಧಿಕಾರಿಗಳು‌ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.