ರಾಮನಗರ: ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ಲಾ ಹಾಲಿಡೇಸ್ ಲಿಮಿಟೆಡ್ ಶಿಕ್ಷಕರ ದಿನಾಚರಣೆಗೆ ಗೌರವ ಸಮರ್ಪಿಸುವ ಸಲುವಾಗಿ 150 ಶಾಲೆಗಳಿಂದ 300 ಶಿಕ್ಷಕರನ್ನು ಆಹ್ವಾನಿಸುತ್ತಿದೆ. ಆಯ್ದ ಶಾಲೆಗಳಿಂದ ಬರುವ ಈ ಶಿಕ್ಷಕರಿಗೆ ವಂಡರ್‌ಲಾ ವತಿಯಿಂದ ಉಚಿತ ಪ್ರವೇಶ ನೀಡಲಾಗುತ್ತದೆ. ಈ ಕೊಡುಗೆಯು ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ಪಾರ್ಕ್‌ಗಳಲ್ಲಿ ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 5ವರೆಗೆ ಇರಲಿದೆ.
ಈ ಕುರಿತು ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ ಚಿಟ್ಟಿಲಪಿಲ್ಲಿ, ಸಾಂಕ್ರಾಮಿಕ ರೋಗದ ಕಾರಣ ಶಿಕ್ಷಕರು ಆನ್‌ಲೈನ್ ತರಗತಿ ಹೆಸರಿನಲ್ಲಿ ಮನೆ ಹಾಗೂ ಶಾಲೆ ಎರಡೂ ಸೇವೆಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಜೀವನದ ಪಾಠ ಕಲಿಸುವ ಈ ಮಾರ್ಗದರ್ಶಕರನ್ನು ವಂಡರ್‌ಲಾ ಈ ಮೂಲಕ ಗೌರವಿಸುತ್ತಿದೆ ಎಂದರು.
ಇದಷ್ಟೇ ಅಲ್ಲದೆ, ಆಗಸ್ಟ್ 29 ರಿಂದ ಸೆಪ್ಟೆಂಬರ್ 05 ರ ಅವಧಿಯಲ್ಲಿ ವಂಡರ್‌ಲಾ ಪಾರ್ಕ್‌ಗೆ ಭೇಟಿ ನೀಡುವ ಎಲ್ಲಾ ಶಿಕ್ಷಕರಿಗೂ ತಮ್ಮ ಬುಕಿಂಗ್‌ಗಳ ಮೇಲೆ ಶೇ. 20ರಷ್ಟು ರಿಯಾಯಿತಿ ಘೋಷಿಸಿದೆ. ಈ ಕೊಡುಗೆ ಪಡೆಯಲು ಗುರುತಿನ ಚೀಟಿಯನ್ನು ಕೊಂಡೊಯ್ಯಬೇಕು.
ಇದನ್ನೂ ಓದಿ : ತುಮಕೂರು ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ಪೋನಸಂಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ