ETV Bharat / state

ಚನ್ನಪಟ್ಟಣದಲ್ಲಿ ಕಾಡಾನೆ ಹಾವಳಿ: ಡ್ರೋನ್​ ಕ್ಯಾಮರಾದಲ್ಲಿ 7 ಆನೆಗಳು ಸೆರೆ

author img

By

Published : Oct 13, 2022, 8:28 AM IST

ಚನ್ನಪಟ್ಟಣ ತಾಲೂಕಿನಲ್ಲಿ ಕಾಡಾನೆ ಹಾವಳಿ ಮುಂದುವರೆದಿದೆ. ಸುಮಾರು 7 ಆನೆಗಳ ಹಿಂಡು ತೆಂಗಿನಕಲ್ಲು ಗ್ರಾಮದ ಸಮೀಪವಿರುವ ಗುಡ್ಡವೊಂದರಲ್ಲಿ ಕಾಣಿಸಿ ಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ.

elephant
elephant

ರಾಮನಗರ: ಚನ್ನಪಟ್ಟಣ ತಾಲೂಕಿನ ಎನ್.ಆರ್ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನಿನ ಮೇಲೆ ಕಾಡಾನೆ ಹಿಂಡು ದಾಳಿ ಮಾಡಿದ್ದು, ಭತ್ತ, ತೆಂಗು, ಬಾಳೆ, ರೇಷ್ಮೆ ಬೆಳೆ ನಾಶವಾಗಿದೆ.

ಗ್ರಾಮದ ಸಮೀಪವಿರುವ ಗುಡ್ಡವೊಂದರಲ್ಲಿ 7 ಕಾಡಾನೆಗಳು ಬೀಡು ಬಿಟ್ಟಿದ್ದು, ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದೆ. ಜೊತೆಗೆ ಕಾಡಾನೆಗಳ ಓಡಾಟದ ದೃಶ್ಯ ಡ್ರೋನ್​ ಕ್ಯಾಮರಾದಲ್ಲಿ ಸೆರಿಯಾಗಿದೆ.

ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ತಿಂದ ಕಾಡಾನೆ: ವಿಡಿಯೋ ವೈರಲ್

ತೆಂಗಿನಕಲ್ಲು ಅರಣ್ಯ ಪ್ರದೇಶ ವ್ಯಾಪ್ತಿಯ ಗ್ರಾಮಗಳ ರೈತರ ಕೃಷಿ ಜಮೀನಿನ ಮೇಲೆ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿದ್ದು, ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಡ್ರೋನ್​ ಕ್ಯಾಮರಾದಲ್ಲಿ ಸೆರೆಯಾದ ಕಾಡಾನೆಗಳು

ಇದನ್ನೂ ಓದಿ: ಆಹಾರ ಕೊಡ್ತಿರೋ.. ಒಳಗೆ ಬರ್ಲೋ.. ಕಾಡಾನೆ ಆರ್ಭಟಕ್ಕೆ ಬೆಚ್ಚಿಬಿದ್ದ ಬಸ್​ ಪ್ರಯಾಣಿಕರು!

ಹಗಲು ವೇಳೆ ಗ್ರಾಮದ ಸಮೀಪವಿರುವ ಗುಡ್ಡಗಳಲ್ಲಿ ಬೀಡು ಬಿಡುವ ಕಾಡಾನೆ ಹಿಂಡು ರಾತ್ರಿಯಾಗುತ್ತಿದ್ದಂತೆ ರೈತರ ಕೃಷಿ ಜಮೀನಿನ ಮೇಲೆ ದಾಳಿ ಮಾಡಿ, ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡುತ್ತಿವೆ. ಪ್ರತಿ ದಿನ ಕಾಡು ಪ್ರಾಣಿಗಳ ದಾಳಿ ಮುಂದುವರೆದಿದ್ದು, ಬೆಳೆ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.