ರಾಮನಗರ : ಲೋಕಸಭಾ ಚುನಾವಣೆ ಏ.18 ರಂದು ನಡೆಯಲಿದ್ದು ಪ್ರತಿಯೊಬ್ಬರು ತಪ್ಪದೆ ಮತ ಚಲಾವಣೆ ಮಾಡಬೇಕೆಂಬ ಉದ್ದೇಶದಿಂದ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಮಾಡಲಾಯಿತು.
ಚನ್ನಪಟ್ಟಣದಲ್ಲಿ ಎತ್ತಿನಬಂಡಿಗಳ ಮೂಲಕ ಮತದಾರರಲ್ಲಿ ಮತದಾನ ಜಾಗೃತಿ ಮಾಡಲಾಯಿತು. ಚುನಾವಣೆಯ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಮುಲ್ಲೈ ಮುಹಿಲನ್ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು. ಎತ್ತಿನಬಂಡಿಗಳಿಗೆ 'ಯಾವುದೇ ಮತದಾರ ಮತದಾನ ದಿಂದ ಹೊರಗುಳಿಯಬಾರದು, ಮತದಾನವನ್ನ ಕಡ್ಡಾಯವಾಗಿ ಮಾಡಿ' ಎಂಬ ಪ್ಲೆಕ್ಸ್ ಗಳನ್ನ ಕಟ್ಟಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಿ ನಾಗರಿಕರಲ್ಲಿ ಮತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ರು.
ಇದೇ ವೇಳೆ ಮಾತನಾಡಿದ ಸಿಇಒ ಹಾಗೂ ಚುನಾವಣೆಯ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಮುಲ್ಲೈ ಮುಹಿಲನ್ ಎಲ್ಲೂ ಮತದಾನ ಮಾಡಲೇಬೇಕು ಅದು ಎಲ್ಲರ ಹಕ್ಕು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಡಗೊಳಿಸಲು ಎಲ್ಲರೂ ಮತದಾನ ಮಾಡಿ ಎಂದರು. ನಗರದ ಹಲವು ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿ ಪ್ರಚಾರ ನಡೆಸಲಾಯಿತು.