ETV Bharat / state

ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಯುವಕರಿಗೆ ಪಾಠ ಕಲಿಸಿದ ಸ್ಥಳೀಯರು!

ತೋಟದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಾ, ಕಳ್ಳತನ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ಥಳಿಸಿ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸುವ ಘಟನೆ ರಾಮನಗರದಲ್ಲಿ ನಡೆದಿದೆ.

ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಯುವಕರಿಗೆ ಪಾಠ ಕಲಿಸಿದ ಸ್ಥಳೀಯರು
author img

By

Published : Aug 25, 2019, 11:46 PM IST

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಮೂಡ್ಲಳ್ಳಿದೊಡ್ಡಿ ಬಳಿ ಕಳ್ಳತನ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರನ್ನು ಥಳಿಸಿ ಕಟ್ಟಿಹಾಕಿರುವ ಪ್ರಸಂಗ‌ ಜರುಗಿದೆ.

ಕೈಲಾಂಚ ಹೋಬಳಿ ವ್ಯಾಪ್ತಿಯಲ್ಲಿ ಕಳ್ಳತನ ಹೆಚ್ಚಾಗಿದ್ದು, ಖದೀಮರು ರಾಸು ಕದಿಯುವುದರ ಜೊತೆಗೆ ಜಮೀನಿನಲ್ಲಿ‌ ತೆಂಗಿನಕಾಯಿ ಸೇರಿದಂತೆ ಬೆಳೆಗಳನ್ನು ಕಳವು‌ ಮಾಡುತ್ತಿದ್ದರು ಎನ್ನಲಾಗಿದೆ.

ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಯುವಕರಿಗೆ ಪಾಠ ಕಲಿಸಿದ ಸ್ಥಳೀಯರು

ಇಂದು ಮಹಿಳೆಯೊಬ್ಬರು ತೋಟದಲ್ಲಿ ಒಂಟಿಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ರಾಮು, ಮಲ್ಲೇಶ ಎಂಬ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಅತ್ತಿಂದಿತ್ತ ತಿರುಗಾಡುತ್ತಿದ್ದರು ಹಾಗೂ ಅವರ ಬಳಿ ಮಾರಕಾಸ್ತ್ರಗಳಿದ್ದವು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇವರನ್ನು ಕಂಡು ಪ್ರಶ್ನಿಸಿದ್ದಾರೆ. ಅವರಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಅವರನ್ನು ಹಿಡಿದುಕೊಳ್ಳಲು ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ನಂತರ ಅವರನ್ನು ಹಿಡಿದು ಹಗ್ಗದಿಂದ ಕಟ್ಟಿಹಾಕಿದ್ದಾರೆ.

ನಂತರ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಅವರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

Intro:Body: ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ಮೂಡ್ಲಳ್ಳಿದೊಡ್ಡಿ ಬಳಿ ಕಳ್ಳರಂತೆ ಹೊಂಚುಹಾಕುತ್ತಿದ್ದ ಇಬ್ಬರನ್ನು ಥಳಿಸಿ ಕಟ್ಟಿಹಾಕಿರುವ ಪ್ರಸಂಗ‌ಜರುಗಿದೆ.
ತಾಲ್ಲೂಕಿನ‌ಕೈಲಾಂಚ ಹೋಬಳಿ ವ್ಯಾಪ್ತಿಯಲ್ಲಿ ಕಳ್ಳತನ ಹೆಚ್ಚಾಗಿತ್ತು ರಾಸುಕಳ್ಳತನ ಜೊತೆಗೆ ಜಮೀನಿನಲ್ಲಿ‌ತೆಂಗಿನಕಾಯಿ ಸೇರಿದಂತೆ ಬೆಳೆಗಳನ್ನು ಕಳ್ಳರು ಹೊಂಚುಹಾಕಿ ಕಳವು‌ ಮಾಡುತ್ತಿದ್ದರು ಎನ್ನಲಾಗಿದೆ, ಸುಮಾರು 25 ವರ್ಷದ ರಾಮು, ಮಲ್ಲೇಶ ಎಂಬಿಬ್ಬರು ಅನುಮಾನಾಸ್ಪದವಾಗಿ ಹೋಡಾಡುತ್ತಿದ್ದರು. ಇಂದು ಮಹಿಳೆಯೊಬ್ಬರು ತೋಟದಲ್ಲಿ ಒಂಟಿಯಾಗಿ ಕೃಷಿಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಅಲ್ಲಿಯೇ ಅತ್ತಿಂದಿತ್ತ ತಿರುಗಾಡುತ್ತಿದ್ದ ಆಸಾಮಿಗಳ ಬಳಿ ಮಾರಕಾಸ್ತ್ರಗಳಿದ್ದವು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳಿಯರು ಇತ್ತೀಚಿಗೆ ಹೆಚ್ಚಾಗಿದ್ದ ಕಳ್ಳತನಕ್ಕೂ ಅಪರಿಚಿತರಾಗಿದ್ದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇವರನ್ನು ಕಂಡು ಪ್ರಶ್ನಿಸಿದ್ದಾರೆ ಅವರಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡು ಹಿಡಿದುಕೊಳ್ಳಲು ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ನಂತರ ಅವರನ್ನು ಹಿಡಿದುಹಗ್ಗದಿಂದ ಕಟ್ಟಿಹಾಕಿದ್ದರು.
ನಂತರ ಪೋಲೀಸರಿಗೆ ಮಾಹಿತಿ ನೀಡಿದ ಬಳಿಕ ಗ್ರಾಮಾಂತರ ಪೋಲೀಸರು ಸ್ಥಳಕ್ಕಾಗಮಿಸಿ ಅವರನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.