ರಾಮನಗರ: ರಾಮನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮಸ್ಥರ ಅಭಿವೃದ್ಧಿಯ ಆಶಾಭಾವ ಕಮರಿ ಹೋಗಿದ್ದು, ಜನಪ್ರತಿನಿಧಿಗಳ ಪೊಳ್ಳು ಭರವಸೆಗೆ ಕಾದು, ಬಸವಳಿದು ತಮ್ಮೂರಿನ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡಿದ್ದಾರೆ.
ಸುಗ್ಗನಹಳ್ಳಿ ಗ್ರಾಮದ ಅರ್ಕಾವತಿ ನದಿಗೆ ಸೇತುವೆ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಇಲ್ಲಿನ ಗ್ರಾಮಸ್ಥರು ಸರ್ಕಾರದ ನೆರವಿಲ್ಲದೇ ತಮ್ಮ ಸ್ವಂತ ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ.
'ಕಸಬಾ ಹೋಬಳಿ ಪ್ರದೇಶದ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರಿಗೆ ಸೇತುವೆ ಇಲ್ಲದೆ ತುಂಬಾ ತೊಂದರೆಯಾಗಿತ್ತು. ಮಕ್ಕಳು ನದಿ ದಾಟಿಯೇ ಶಾಲೆಗೆ ಹೋಗಬೇಕಿತ್ತು. ಪ್ರತಿನಿತ್ಯ ಓಡಾಟಕ್ಕೆ ಅದರಲ್ಲೂ ಮಳೆಗಾಲದಲ್ಲಿ ನದಿ ದಾಟುವುದೇ ದುಸ್ಸಾಹಸವಾಗಿತ್ತು. ಹಾಗಾಗಿ, ಸೇತುವೆ ನಿರ್ಮಿಸಿಕೊಡಿ ಎಂದು ಸಂಬಂಧಪಟ್ಟ ಅಧಿಕಾರಿಗಳು, ಶಾಸಕರಿಗೆ ಮನವಿ ಮಾಡಿದ್ದೆವು. ಸರ್ಕಾರಕ್ಕೆ ಕೂಡ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲಿಲ್ಲ. ಕೊನೆಗೆ ಗ್ರಾಮಸ್ಥರೆಲ್ಲಾ ಸೇರಿ ನಾವೇ ನಿರ್ಮಿಸಿಕೊಂಡೆವು' ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ: ಮಂಚನಬೆಲೆ ಜಲಾಶಯದ ಬಳಿ ಸೇತುವೆ ಕುಸಿತ: ಗ್ರಾಮಗಳ ರಸ್ತೆ ಸಂಪರ್ಕ ಕಡಿತ
ಸದ್ಯಕ್ಕೆ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿದೆ, ಶಾಶ್ವತವಾದ ಸೇತುವೆ ನಿಮಾರ್ಣಕ್ಕೆ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಸ್ಥಳೀಯ ಯುವಕರು ತಿಳಿಸಿದ್ದಾರೆ.
ಇದನ್ನೂ ಓದಿ: 900 ಗಂಟೆಗಳ ಕೆಲಸ 27 ಗಂಟೆಗಳಲ್ಲಿ ಮುಗಿಸಲು ಕ್ರಮ: ಕರ್ನಾಕ್ ಸೇತುವೆ ತೆರವು ಕಾರ್ಯ