ETV Bharat / state

ಮಾಸ್ಟರ್ ಚೆಫ್ ಕಾರ್ಯಕ್ರಮಕ್ಕೆ ವಿಜಯ್ ಸೇತುಪತಿ ಸಾರಥಿ.. ಕನ್ನಡದ ನಂಟು ಹೇಳಿಕೊಂಡ ಕಾಲಿವುಡ್ ಸ್ಟಾರ್..

ಈ ಹಿಂದೆ ಬೆಂಗಳೂರು, ಮೈಸೂರಿಗೂ ಕೂಡ ಬಂದಿದ್ದೆ. ಅಲ್ಲದೆ ಬೆಂಗಳೂರಿನ ಕಬ್ಬನ್ ಪಾರ್ಕ್ ಹಾಗೂ ಮೈಸೂರಿನ ಪ್ಯಾಲೇಸ್ ನನ್ನ ನೆಚ್ಚಿನ ತಾಣ ಎಂದರು. ಜೊತೆಗೆ ನಟ ಸುದೀಪ್ ಬಗ್ಗೆ ಕೂಡ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು, ಇದೇ ವೇಳೆ ಈ ಹಿಂದೆ ಕನ್ನಡದಲ್ಲಿ ನಟಿಸಿದ್ದ ಅಖಾಡ ಚಿತ್ರದ ಕನ್ನಡ ಡೈಲಾಗ್ ಹೇಳಿ ರಂಜಿಸಿದರು..

ಮಾಸ್ಟರ್ ಚೆಫ್ ಕಾರ್ಯಕ್ರಮಕ್ಕೆ ವಿಜಯ್ ಸೇತುಪತಿ ಸಾರಥಿ

author img

By

Published : Jul 13, 2021, 6:52 PM IST

ರಾಮನಗರ : ತಾಲೂಕಿನ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಮಾಸ್ಟರ್ ಚೆಫ್ ಎಂಬ ತಮಿಳಿನ ರಿಯಾಲಿಟಿ ಶೋಗೆ ಚಾಲನೆ ನೀಡಿದರು.

ಮಾಸ್ಟರ್ ಚೆಫ್ ಕಾರ್ಯಕ್ರಮಕ್ಕೆ ವಿಜಯ್ ಸೇತುಪತಿ ಸಾರಥಿ

ಆಗಸ್ಟ್‌ನಲ್ಲಿ ತಮಿಳಿನ ಖಾಸಗಿ ವಾಹಿನಿಯಲ್ಲಿ ಈ ಕಾರ್ಯಕ್ರಮ ಮೂಡಿ ಬರಲಿದೆ. ವಿಜಯ್ ಸೇತುಪತಿಯವರು ಈ ಕಾರ್ಯಕ್ರಮನ್ನ ನಡೆಸಿ ಕೊಡಲಿದ್ದಾರೆ. ಹೀಗಾಗಿ, ಇವತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಜಯ್ ಸೇತುಪತಿ, ತಮಗೂ ಕರ್ನಾಟಕಕ್ಕೂ ಇರುವ ನಂಟನ್ನು ಕೂಡ ಮೆಲುಕು ಹಾಕಿದರು. ಮಡಿಕೇರಿ ನನಗೆ ಸಾಕಷ್ಟು ಇಷ್ಟವಾದ ಸ್ಥಳವಾಗಿದೆ.

ಈ ಹಿಂದೆ ಬೆಂಗಳೂರು, ಮೈಸೂರಿಗೂ ಕೂಡ ಬಂದಿದ್ದೆ. ಅಲ್ಲದೆ ಬೆಂಗಳೂರಿನ ಕಬ್ಬನ್ ಪಾರ್ಕ್ ಹಾಗೂ ಮೈಸೂರಿನ ಪ್ಯಾಲೇಸ್ ನನ್ನ ನೆಚ್ಚಿನ ತಾಣ ಎಂದರು. ಜೊತೆಗೆ ನಟ ಸುದೀಪ್ ಬಗ್ಗೆ ಕೂಡ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು, ಇದೇ ವೇಳೆ ಈ ಹಿಂದೆ ಕನ್ನಡದಲ್ಲಿ ನಟಿಸಿದ್ದ ಅಖಾಡ ಚಿತ್ರದ ಕನ್ನಡ ಡೈಲಾಗ್ ಹೇಳಿ ರಂಜಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.