ETV Bharat / state

ಮಹಾಮಳೆ: ಕೋಳಿ ಫಾರಂಗೆ ನುಗ್ಗಿದ ನೀರು, ಸಾವಿರಾರು ಕೋಳಿಗಳ ಸಾವು - ಕೋಳಿ ಫಾರಂಗೆ ನುಗ್ಗಿದ ನೀರು

ಭಾನುವಾರ ರಾತ್ರಿ ಸುರಿದ ಮಳೆಯಿಂದ ಒಂದು ಶೆಡ್​ನಲ್ಲಿದ್ದ ಸಾವಿರಕ್ಕೂ ಅಧಿಕ ಕೋಳಿಗಳು ಸತ್ತಿವೆ.

thousands-of-chicken-died-by-rain-water-in-ramanagara
ಪ್ರಾಣಬಿಟ್ಟ ಸಾವಿರಾರು ಕೋಳಿಗಳು
author img

By

Published : Nov 15, 2021, 9:40 PM IST

ರಾಮನಗರ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕೋಳಿ ಫಾರಂಗೆ ನೀರು ನುಗ್ಗಿ ಸಾವಿರಾರು ಕೋಳಿಗಳು ಮೃತಪಟ್ಟಿರುವ ಘಟನೆ ಬಿಡದಿ ಹೋಬಳಿಯ ಹೆಗ್ಗಡಗೆರೆ ಗ್ರಾಮದಲ್ಲಿ ನಡೆದಿದೆ.

ಹೆಗ್ಗಡಗೆರೆ ಗ್ರಾಮದ ರೈತ ಮಹಿಳೆ ಶೋಭಾ.ಆರ್ ಅವರಿಗೆ ಸೇರಿದ ಕೋಳಿ ಫಾರಂನಲ್ಲಿ ಪ್ರತ್ಯೇಕ ಶೆಡ್​ಗಳಲ್ಲಿ 6 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಸಾಕಾಣಿಕೆ ಮಾಡಲಾಗುತ್ತಿತ್ತು. ಭಾನುವಾರ ರಾತ್ರಿ ಸುರಿದ ಮಳೆಯಿಂದ ಒಂದು ಶೆಡ್​ನಲ್ಲಿದ್ದ ಸಾವಿರಕ್ಕೂ ಅಧಿಕ ಕೋಳಿಗಳು ಮೃತಪಟ್ಟಿವೆ.

thousands-of-chicken-died-by-rain-water-in-ramanagara

ಅಲ್ಲದೇ, ಅದೇ ಶೆಡ್​ನಲ್ಲಿದ್ದ 40 ಸಾವಿರಕ್ಕೂ ಅಧಿಕ ಮೌಲ್ಯದ ಕೋಳಿ ಆಹಾರ (ಫೀಡ್ಸ್) ಹಾಳಾಗಿವೆ. ಶೆಡ್​ಗೂ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ.

15-20 ದಿನ ಕಳೆದಿದ್ದರೆ ಸಾವಿರಾರು ರೂ. ಆದಾಯ ಬರುತ್ತಿತ್ತು. ವರುಣನ ಅಬ್ಬರದಿಂದ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಂಗಾಲಾಗಿರುವ ರೈತ ಮಹಿಳೆಗೆ ಜಿಲ್ಲಾಡಳಿತ ಪ್ರಕೃತಿ ವಿಕೋಪ ನಿಧಿಯಡಿಯಲ್ಲಿ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ.

ಇದನ್ನೂ ಓದಿ: ವಿದ್ಯಾಕಾಶಿಯಲ್ಲಿಯೇ 1,463 ಮಕ್ಕಳು ಶಾಲೆಯಿಂದ ದೂರ: ಶಿಕ್ಷಣ ಇಲಾಖೆ ಸಮೀಕ್ಷೆಯಿಂದ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.