ETV Bharat / state

ಕತ್ತಲಿನಲ್ಲಿ ಕತ್ತಿನಲ್ಲಿದ್ದ ಸರ ಅಪಹರಿಸಿದವನ ಬಂಧನ - ramanagar crime news

ನಿಲ್ಲಸಿದ್ದ ಕಾರಿಗೆ ಕಲ್ಲಿನಿಂದ ಹೊಡೆದು ಮಾಲೀಕನ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಅಪಹರಿಸಿದ್ದ ಊಟಗಳ್ಳಿಯ ಗಣೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಗಣೇಶ್, ಬಂಧಿತ ಆರೋಪಿ
author img

By

Published : Sep 3, 2019, 2:28 AM IST

ರಾಮನಗರ : ಚನ್ನಪಟ್ಟಣದ ಸಿಲ್ಕ್ ಫಾರಂ ಬಳಿ ಮಳೆ‌ ಜೋರಾಗಿದ್ದರಿಂದ ರಸ್ತೆ ಬದಿ ಕಾರು‌ ನಿಲ್ಲಿಸಿ ನಿಂತಿದ್ದ ವೇಳೆ ಕಾರಿಗೆ ಕಲ್ಲಿನಿಂದ ಹೊಡೆದು ಜಖಂಗೊಳಿಸಿ, ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಣ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನಪಟ್ಟಣದ ಸಿಲ್ಕ್‌ ಫಾರಂ ಮುಂಭಾಗದ ರಸ್ತೆ ಬದಿಯಲ್ಲಿ ಕೃಷ್ಣ ಎಂಬಾತ ಕಾರು ನಿಲ್ಲಿಸಿಕೊಂಡು ನಿಂತಿದ್ದನು. ಈ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಮೈಸೂರು ಮೂಲದ ಗಣೇಶ್ ಎಂಬಾತ ಚನ್ನಪಟ್ಟಣ ಕಡೆಯಿಂದ ನಡೆದುಕೊಂಡು ಬಂದು ಸರ ಕಿತ್ತುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೀಗ ಮೈಸೂರು ಊಟಗಳ್ಳಿಯ ಗಣೇಶ್ ಎಂಬುವವನನ್ನು ಬಂಧಿಸಿದ್ದು, ಆರೋಪಿಯಿಂದ ಸುಮಾರು 29.500. ಗ್ರಾಂ ತೂಕದ ಚಿನ್ನದ ಚೈನು ವಶಕ್ಕೆ ಪಡೆದದಿದ್ದಾರೆ.

ಕೃತ್ಯಕ್ಕೆ ಬಳಸಲಾದ ಗೂಡ್ಸ್‌ ಕ್ಯಾರಿಯರ್‌ ವಾಹನ ಸೇರಿ ಒಟ್ಟು 5 ಲಕ್ಷ ಮೌಲ್ಯದ ಮಾಲು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಇದೀಗ ಆರೋಪಿಯನ್ನು ನ್ಯಾಯಾಂಗ‌‌ ಬಂಧನಕ್ಕೆ ಒಪ್ಪಿಸಲಾಗಿದೆ.

Intro:Body:ರಾಮನಗರ : ಚನ್ನಪಟ್ಟಣದ ಸಿಲ್ಕ್ ಫಾರಂ ಬಳಿ ಮಳೆ‌ ಜೋರಾಗಿದ್ದರಿಂದ ರಸ್ತೆ ಬದಿ ಕಾರು‌ ನಿಲ್ಲಿಸಿ ನಿಂತಿದ್ದ ವೇಳೆ ಕಾರಿಗೆ ಕಲ್ಲಿನಿಂದ ಹೊಡೆದು ಜಖಂಗೊಳಿಸಿದ್ದು ಯಾರೆಂದು ನೋಡುವಷ್ಠರಲ್ಲಿ ಕತ್ತಿನಲ್ಲಿದ್ದ ಸರ ಅಪಹರಣ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನಪಟ್ಟಣದ ಸಿಲ್ಕ್‌ ಫಾರಂ ಮುಂಭಾಗ ರಸ್ತೆ ಬದಿಯಲ್ಲಿ ಕೃಷ್ಣ ಎಂಬಾತ ಕಾರು ನಿಲ್ಲಿಸಿಕೊಂಡು ನಿಂತಿದ್ದ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಮೈಸೂರು ಮೂಲದ ಗಣೇಶ್ ಎಂಬಾತ ಚನ್ನಪಟ್ಟಣ ಕಡೆಯಿಂದ ನಡೆದುಕೊಂಡು ಬಂದು
ಆರೋಪಿಯಿಂದ ಸುಮಾರು 29.500. ಗ್ರಾಂ ತೂಕದ ಚಿನ್ನದ ಚೈನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಪೋಲೀಸರು ಪ್ರಕೆಣ ದಾಖಲಿಸಿಕೊಂಡು ತನಿಖೆ ಆರಂಬಿಸಿದ್ದರು ಇದೀಗ ಮೈಸೂರು ಊಟಗಳ್ಳಿಯ ಗಣೇಶ್ ಎಂಬುವವನನ್ನು ಬಂದಿಸಿದ್ದಾರೆ ಕೃತ್ಯಕ್ಕೆ ಬಳಸಿದ್ದ ಸ್ವರಾಜ್‌ ಮಜ್ಜಾ ಗೂಡ್ಸ್‌ ಕ್ಯಾರಿಯರ್‌ ವಾಹನ ಸೇರಿ ಒಟ್ಟು 5 ಲಕ್ಷ ಮೌಲ್ಯದ ಮಾಲು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಇದೀಗ ಬಂದಿತ ಆರೋಪಿಯನ್ನು ನ್ಯಾಯಾಂಗ‌‌ ಬಂಧನಕ್ಕೆ ಒಪ್ಪಿಸಲಾಗಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.