ETV Bharat / state

ಬಿಜೆಪಿ - ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖ ಇದ್ದಂತೆ: ಹೆಚ್​.ಡಿ. ಕುಮಾರಸ್ವಾಮಿ - ಪಕ್ಷದ ಪ್ರಚಾರ ನಡೆಸುತ್ತಿದ್ದಾರೆ ನೀರಿಗಾಗಿ ಪಾದಯಾತ್ರೆ ನಡೆಸುತ್ತಿಲ್ಲ.

ಪಕ್ಷದ ಪ್ರಚಾರ ನಡೆಸುತ್ತಿದ್ದಾರೆ ನೀರಿಗಾಗಿ ಪಾದಯಾತ್ರೆ ನಡೆಸುತ್ತಿಲ್ಲ. ಕಾಂಗ್ರೆಸ್​​​ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದರೆ ಪಾದಯಾತ್ರೆ ಅಗತ್ಯ ಇತ್ತೇ. ಇಂತಹ ವಿಚಾರಗಳಲ್ಲಿ ಬಿಜೆಪಿ - ಕಾಂಗ್ರೆಸ್‌ ಎರಡು ಒಂದೇ, ಒಂದೇ ನಾಣ್ಯದ ಎರಡು ಮುಖ ಇದ್ದಂತೆ....

h d kumara swami
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
author img

By

Published : Feb 26, 2022, 5:46 PM IST

ರಾಮನಗರ: ನಾನು ಸಿಎಂ ಇದ್ದಾಗ ಹಿಂದೂ - ಮುಸ್ಲಿಂ ಗಲಾಟೆಯಾಗಲು ಬಿಟ್ಟಿಲ್ಲ. ಇವತ್ತು ಯಾಕೆ ಇಂತಹ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಕಾಂಗ್ರೆಸ್‌ - ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ಯಾಕೆ ಈ ರೀತಿಯ ಸಮಸ್ಯೆ ಉದ್ಭವವಾಗುತ್ತೆ ಜನರೇ ನೀವೇ ಆಲೋಚಿಸಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಬಿಜೆಪಿ - ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖ ಇದ್ದಂತೆ: ಹೆಚ್​.ಡಿ. ಕುಮಾರ ಸ್ವಾಮಿ

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಸಿಎಎ ಹೋರಾಟದಲ್ಲಿ ದೆಹಲಿ ಕೇಂದ್ರದಲ್ಲಿ 53 ಜನ ಸತ್ತರು ಅವರ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ. ಮುಂದಿನ‌ 1 ವರ್ಷ ದೇಶದ ಸಮಸ್ಯೆಗಳ ವಿಚಾರವಾಗಿ ಹೋರಾಟ ನಡೆಸುತ್ತೇನೆ. ದೇಶದಲ್ಲಿನ ಗಲಭೆಗಳಿಗೆ ಯಾವ ಯಾವ ಪಕ್ಷ ಕಾರಣ ಎಂಬುದನ್ನು ಜನತೆಯ ಮುಂದೆ ಇಡುತ್ತೇನೆ ಎಂದರು.

ಮೇಕೆದಾಟು ಪಾದಯಾತ್ರೆಗೆ ವಿರೋಧ: ಪಕ್ಷದ ಪ್ರಚಾರ ನಡೆಸುತ್ತಿದ್ದಾರೆ ನೀರಿಗಾಗಿ ಪಾದಯಾತ್ರೆ ನಡೆಸುತ್ತಿಲ್ಲ. ಕಾಂಗ್ರೆಸ್​​​​ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದರೆ ಪಾದಯಾತ್ರೆಯ ಅಗತ್ಯ ಇತ್ತೇ. ಇಂತಹ ವಿಚಾರಗಳಲ್ಲಿ ಬಿಜೆಪಿ - ಕಾಂಗ್ರೆಸ್‌ ಎರಡು ಒಂದೇ, ಒಂದೇ ನಾಣ್ಯದ ಎರಡು ಮುಖ ಇದ್ದಂತೆ ಎಂದು ಟೀಕಿಸಿದರು.

ಹಿಜಾಬ್ ಬಗ್ಗೆ ಹೆಚ್.ಡಿ. ಕೆ ಪ್ರತಿಕ್ರಿಯೆ: ರಾಜ್ಯದ ಶಾಲೆಯಲ್ಲಿ ಆರಂಭವಾದ ಸಮವಸ್ತ್ರ ವಿಚಾರದ ರಾಷ್ಟ್ರ ಮಟ್ಟಕ್ಕೆ ತಲುಪಿದೆ. ಹಿಜಾಬ್​ ವಿಚಾರ ಸಮಾಜದಲ್ಲಿ ಕಲುಷಿತ ವಾತಾವರಣಕ್ಕೆ ಕಾರಣವಾಗಿದೆ. ಇಂತಹ ವಿಷಯಗಳಿಗೆ ಪಕ್ಷಾತೀತವಾಗಿ ನಿಂತು ಅಮಾಯಕರನ್ನು ರಕ್ಷಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ರಾಜ್ಯದವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಕ್ರಮ : ಸಿಎಂ ಬೊಮ್ಮಾಯಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.