ETV Bharat / state

ರಾಮನಗರ ಜಿಲ್ಲೆ ಬಗ್ಗೆ ಸರ್ಕಾರದಿಂದ ಮಲತಾಯಿ ಧೋರಣೆ: ಡಿ.ಕೆ.ಸುರೇಶ್​​​

ಜಿಲ್ಲೆಯಲ್ಲಿ ಅಭಿವೃದ್ಧಿಯ ವಿಚಾರವೇ ಇಲ್ಲ. ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಆಗಿದ್ದ ಎಲ್ಲಾ ಯೋಜನೆಗಳನ್ನ ಈಗ ತಡೆಹಿಡಿಯಲಾಗಿದೆ ಎಂದು ಎಂದು ಡಿ.ಕೆ.ಸುರೇಶ್​ ಹೇಳಿದರು.

author img

By

Published : Jan 18, 2020, 3:12 PM IST

D.K Suresh
ಡಿ.ಕೆ ಸುರೇಶ್​

ರಾಮನಗರ: ಸಮ್ಮಿಶ್ರ ಸರ್ಕಾರವಿದ್ದಾಗ ಜಿಲ್ಲೆಯ ಬಾನಂದೂರು ಮತ್ತು ವೀರಾಪುರ ಗ್ರಾಮಗಳ ಅಭಿವೃದ್ಧಿಗೆ ತಲಾ 25 ಕೋಟಿ ಹಣವನ್ನ ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಸರ್ಕಾರ ಅದನ್ನ ಮರೆತಂತೆ ಜಾಣ ಮರೆವು ಪ್ರದರ್ಶಿಸುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್​ ಕಿಡಿಕಾರಿದ್ದಾರೆ.

ಡಿ.ಕೆ.ಸುರೇಶ್​, ಸಂಸದ

ಬಿಡದಿಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ‌ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಾನಂದೂರು ಮತ್ತು ವೀರಾಪುರ ಗ್ರಾಮದ ಅಭಿವೃದ್ಧಿಗೆ ತಲಾ 25 ಕೋಟಿ ಹಣವನ್ನ ಬಜೆಟ್​ನಲ್ಲಿ ಘೋಷಣೆ ಮಾಡಿದ್ದರು. ಹೊಸ ಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಈ ಬಗ್ಗೆ ಸಭೆ ಕರೆಯುತ್ತಾರೆ ಅಂತಾ ನಾವು ಕಾಯ್ತಾ ಇದ್ದೇವೆ. ಆದರೆ ಇನ್ನೂ ನಮ್ಮನ್ನ ಕರೆದಿಲ್ಲ. ಸರ್ಕಾರ ತಾರತಮ್ಯ ನೀತಿಯನ್ನ ಬಿಡಬೇಕೆಂದು ಸಂಸದ ಡಿ.ಕೆ.ಸುರೇಶ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲೆಯಲ್ಲಿ ಅಭಿವೃದ್ಧಿಯ ವಿಚಾರವೇ ಇಲ್ಲ. ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಆಗಿದ್ದ ಎಲ್ಲಾ ಯೋಜನೆಗಳನ್ನ ತಡೆಹಿಡಿಯಲಾಗಿದೆ. ರಾಮನಗರ ಜಿಲ್ಲೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಈ ರೀತಿ ಮಾಡ್ತಿದ್ದಾರೆ. ಅಧಿವೇಶನ ಬರಲಿ, ಇದೆಲ್ಲದರ ಬಗ್ಗೆ ನಮ್ಮ ಶಾಸಕರು ಮಾತನಾಡ್ತಾರೆ ಎಂದರು.

ಅಲ್ಲದೇ ಜಿಲ್ಲೆಯ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ಪ್ರಮುಖವಾಗಿ ನೀರಾವರಿ ಯೋಜನೆಗಳು ಮತ್ತು ಕುಡಿಯುವ ನೀರು‌ ಸರಬರಾಜು ಯೋಜನೆಗೆ ಸರ್ಕಾರ‌ ತಡೆಯೊಡ್ಡಿರೋದು ಸರಿಯಲ್ಲ. ಕೂಡಲೇ‌ ಕಾಮಗಾರಿಗಳು ಚಾಲನೆಯಾಗಲಿ ಎಂದ ಅವರು, ಈವರೆಗೆ ಅಭಿವೃದ್ಧಿಗೆ ಗಮನಹರಿಸಿಲ್ಲ. ಇನ್ನೂ ಬಹಳ‌ ವರ್ಷ ಇರುತ್ತಲ್ಲಾ ನೋಡೋಣ. ಆಗಲಾದರೂ ಮಾಡ್ತಾರ ಎಂದು ಲೇವಡಿ ಮಾಡಿದರು.

Intro:Body:
ರಾಮನಗರ : ಸಮ್ಮಿಶ್ರ ಸರ್ಕಾರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶಿವಕುಮಾರಸ್ವಾಮೀಜಿಯವರ ಎರಡೂ ಗ್ರಾಮಗಳ ಅಭಿವೃದ್ಧಿಗೆ ತಲಾ 25 ಕೋಟಿ ಹಣವನ್ನ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು, ಹೊಸಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ನಾವು ಕಾಯ್ತಾ ಇದ್ದೇವೆ, ಈ ಬಗ್ಗೆ ಸಭೆ ಕರೆಯುತ್ತಾರೆ ಅಂತಾ ಆದರೆ ಇನ್ನು ನಮ್ಮನ್ನ ಕರೆದಿಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆಯಬೇಕು, ನಂತರ ಮಾತನಾಡ್ತೇವೆ ಸರ್ಕಾರ ತಾರತ್ಮ್ಯ ನೀತಿ‌ಬಿಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಡದಿಯಲ್ಲಿ ಬಾಲಗಂಗಾಧರ ನಾಥ ಸ್ವಾಮೀಜಿ‌ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಜಿಲ್ಲೆಯ ಬಾನಂದೂರು ಮತ್ತು ವೀರಾಪುರ ಅಭಿವೃದ್ದಿಗೆ ಹಣ ಮೀಸಲಿಟ್ಟಿದ್ದು ಘೋಷಣೆ ಮಾಡಲಾಗಿತ್ತು ಆದರೆ ಸರ್ಕಾರ ಅದನ್ನ ಮರೆತಂತೆ ಜಾಣಮರೆವು ಪ್ರದರ್ಶಿಸುತ್ತಿದೆ ನಾವು ಜಾಸ್ತಿ ಮಾತನಾಡಿದರೆ ಬೇರೆ ರೀತಿ ಚರ್ಚೆಯಾಗುತ್ತೆ
ನಾವು ಅಭಿವೃದ್ಧಿ ಮಾಡ್ತಿದ್ದೇವೆಂದು ಹೇಳಿಕೆ ಕೊಟ್ಟಿದ್ದನ್ನ ನೋಡಿದ್ದೆ
ಆದರೆ ಅದು ಕಾಣ್ತಿಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಗೆ ಟಾಂಗ್ ನೀಡಿದರು. ಜಿಲ್ಲೆಯಲ್ಲಿ ಅಭಿವೃದ್ಧಿಯ ವಿಚಾರವೇ ಇಲ್ಲ
ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಆಗಿದ್ದ ಎಲ್ಲಾ ಯೋಜನೆಗಳನ್ನ ತಡೆಹಿಡಿಯಲಾಗಿದೆ, ರಾಮನಗರ ಜಿಲ್ಲೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ರಾಜಕೀಯ ಕಾರಣಗಳಿಗಾಗಿ ಈ ರೀತಿ ಮಾಡ್ತಿದ್ದಾರೆ ಇದೆಲ್ಲದರ ಬಗ್ಗೆ ಅಧಿವೇಶನ ಬರಲಿ ನಮ್ಮ ಶಾಸಕರು ಮಾತನಾಡ್ತಾರೆ ಎಂದರು.
ಪರಮಪೂಜ್ಯರ ಸ್ವಗ್ರಾ‌ಮ ಅಭಿವೃದ್ಧಿ ಗೆ ಕೂಡಲೇ ಸರ್ಕಾರ ಮುಂದಾಗಬೇಕೆ‌ಂದು ಆಗ್ರಹಿಸಿದರು.
ಜಿಲ್ಲೆಯ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ ಪ್ರಮುಖವಾಗಿ ನೀರಾವರಿ ಯೋಜನೆಗಳು ಮತ್ತು ಕುಡಿಯುವ ನೀರು‌ ಸರಭರಾಜು ಯೋಜನೆಗೆ ಸರ್ಕಾರ‌ ತಡೆಯೊಡ್ಡಿರೋದು ಸರಿಯಲ್ಲ, ಕೂಡಲೇ‌ ಕಾಮಗಾರಿಗಳು ಚಾಲನೆಯಾಗಲಿ ಎಂದ ಅವರು ಈವರೆಗೆ ಅಭಿವೃದ್ದಿಗೆ ಗಮನಹರಿಸಿಲ್ಲ ಇನ್ನೂ ಬಹಳ‌ವರ್ಷ ಇರುತ್ತಲ್ಲಾ ನೋಡೋಣ ಆಗಲಾದರೂ ಮಾಡ್ತಾರ ಅಂತಾ ಎಂದು ಲೇವಡಿ ಮಾಡಿದ ಅವರು ಮುಂದಿನ ದಿನಗಳಲ್ಲಿ ಸದನದಲ್ಲಿ ಎಲ್ಲ ಪ್ರಶ್ನೆಗಳೂ ನಮ್ಮ‌ಶಾಸಕ‌ ಮಿತ್ರರು‌ ಕೇಳಲಿದ್ದಾರೆ ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.