ETV Bharat / state

ಇಡುಗುಂಜಿ ದೇವಾಲಯ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

author img

By

Published : Aug 25, 2020, 10:04 AM IST

ಶ್ರೀ ಇಡುಗುಂಜಿ ಗಣಪತಿ ದೇವಾಲಯದ ಬಾಗಿಲು ಒಡೆದು ಖದೀಮರು 6 ಕೆ.ಜಿ.ಯಷ್ಟು ಬೆಳ್ಳಿ ಹಾಗೂ ಕಾಣಿಕೆ ಹುಂಡಿ ಕಳವು ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Idugunji Temple Theft accused arrest
ಇಡುಗುಂಜಿ ದೇವಾಲಯ ಕಳ್ಳತನ ಆರೋಪಿಗಳ ಬಂಧನ

ಚನ್ನಪಟ್ಟಣ : ನಗರದ ಇಡುಗುಂಜಿ ದೇವಾಲಯದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರು ಬನ್ನಿ ಮಂಟಪ ರಸ್ತೆಯ ನಿವಾಸಿಗಳಾದ ಕಬ್ಬಾಳ ಅಲಿಯಾಸ್ ಚಂದು (25) ಆದಪ್ಪ (30) ಬಂಧಿತ ಆರೋಪಿಗಳು. ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ, ಬೆಲೆ ಬಾಳುವ ವಸ್ತುಗಳು ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಶ್ರೀ ಇಡುಗುಂಜಿ ಗಣಪತಿ ದೇವಾಲಯದ ಬಾಗಿಲು ಒಡೆದ ಖದೀಮರು 6 ಕೆ.ಜಿ.ಯಷ್ಟು ಬೆಳ್ಳಿ ಹಾಗೂ ಕಾಣಿಕೆ ಹುಂಡಿ ಕಳವು ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪ್‌ ಶೆಟ್ಟಿ ಹಾಗೂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದಲ್ಲಿ, ನಗರ ವೃತ್ತ ನಿರೀಕ್ಷಕ ಗೋವಿಂದರಾಜು ನೇತೃತ್ವದಲ್ಲಿ ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮೈಸೂರು ಹಾಗೂ ಮಂಡ್ಯದ ವಿವಿಧೆಡೆ ಆರೋಪಿಗಳು ಕಳ್ಳತನ ಮಾಡಿರುವ ವಿಚಾರ ಗೊತ್ತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.