ETV Bharat / state

ಸಾಲುಮರದ ತಿಮ್ಮಕ್ಕ ಚೇತರಿಸಿಕೊಳ್ಳುತ್ತಿದ್ದಾರೆ.. ಸುಳ್ಳು ಸುದ್ದಿ ಹರಡಬೇಡಿ : ಪುತ್ರ ಉಮೇಶ್​

author img

By ETV Bharat Karnataka Team

Published : Oct 5, 2023, 4:27 PM IST

Updated : Oct 5, 2023, 7:50 PM IST

ಸಾಲುಮರದ ತಿಮ್ಮಕ್ಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪುತ್ರ ಉಮೇಶ್ ತಿಳಿಸಿದ್ದಾರೆ.

salumarada-thimmakka-is-fine-dot-dont-spread-false-news-son-umesh
ಸಾಲುಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ.. ಸುಳ್ಳು ಸುದ್ದಿ ಹರಡಬೇಡಿ : ಪುತ್ರ ಉಮೇಶ್​
ಸಾಲುಮರದ ತಿಮ್ಮಕ್ಕ ಚೇತರಿಸಿಕೊಳ್ಳುತ್ತಿದ್ದಾರೆ.. ಸುಳ್ಳು ಸುದ್ದಿ ಹರಡಬೇಡಿ : ಪುತ್ರ ಉಮೇಶ್​

ರಾಮನಗರ : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ತಿಮ್ಮಕ್ಕ ಅವರು ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿದ್ದು, ಇದು ಸುಳ್ಳು ಸುದ್ದಿ ಎಂದು ಪುತ್ರ ಉಮೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಉಮೇಶ್, ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯ ಸ್ಥಿರವಾಗಿದೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಇನ್ನಿಲ್ಲ. ನಿಧನ ಅನ್ನೋ ಸುದ್ದಿ ಸುಳ್ಳು. ಇಂತಹ ಸುದ್ದಿಗಳನ್ನು ಹರಡಬೇಡಿ. ಅವರು ಬೇಗ ಗುಣಮುಖರಾಗುವಂತೆ ಬೇಡಿಕೊಳ್ಳುವಂತೆ ಮನವಿ ಮಾಡಿದರು.

ಸಾಲು ಮರದ ತಿಮ್ಮಕ್ಕ ಅವರಿಗೆ ಈಗ 112 ವರ್ಷ. ಎರಡು ತಿಂಗಳ ಹಿಂದೆ ಬಿದ್ದು ಇದೇ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇತ್ತೀಚಿಗೆ ಬೇಲೂರಿನಲ್ಲಿರುವಾಗ ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಈ ಸಂಬಂಧ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.

ಕೆಲ ದಿನಗಳಿಂದ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಿಮ್ಮಕ್ಕ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಇದಕ್ಕೂ ಮುನ್ನ, ಬೆಂಗಳೂರಿನಿಂದ ತೆರಳಿ ಹಾಸನ ಜಿಲ್ಲೆಯ ಬೇಲೂರಿನಲ್ಲಿ ತಿಮ್ಮಕ್ಕ ವಾಸವಿದ್ದರು. ಬೇಲೂರು ಮಲೆನಾಡು ಪ್ರದೇಶ ಆಗಿರುವುದರಿಂದ ಶೀತ ಜಾಸ್ತಿಯಾಗಿದೆ. ಕಳೆದ ಮೂರು ದಿನಗಳಿಂದ ಸ್ವಲ್ಪ ಉಸಿರಾಟದ ಸಮಸ್ಯೆಯಾಗಿತ್ತು. ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕವೂ ಕಡಿಮೆ ಆಗದ ಹಿನ್ನೆಲೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯ ಕೂಡ ಸ್ಥಿರವಾಗಿದೆ ಎಂದು ಉಮೇಶ್ ತಿಳಿಸಿದ್ದಾರೆ.

ತಿಮ್ಮಕ್ಕ ಆರೋಗ್ಯ ಸ್ಥಿರವಾಗಿದೆ.. ವೈದ್ಯರ ಮಾಹಿತಿ : ಈ ಬಗ್ಗೆ ಪ್ರತಿಕ್ರಿಯಿಸಿರುವ ಅಪೋಲೋ ಆಸ್ಪತ್ರೆ ಕಾರ್ಡಿಯೊಲಾಜಿಸ್ಟ್ ಡಾಕ್ಟರ್ ಅಭಿಜಿತ್ ಕುಲಕರ್ಣಿ, ಎರಡು ದಿನದ ಹಿಂದೆ ಸಾಲು ಮರದ ತಿಮ್ಮಕ್ಕ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಅಸ್ತಮಾ ಸಮಸ್ಯೆಯಿಂದ ಬಂದು ದಾಖಲಾಗಿದ್ದರು. ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡು ಸುಸ್ತಾಗಿದ್ದರು. ಈ ಸಂಬಂಧ ಪರೀಕ್ಷಿಸಿದಾಗ ಇಸಿಜಿಯಲ್ಲಿ ಸ್ವಲ್ಲ ವ್ಯತ್ಯಾಸ ಕಂಡುಬಂದಿದೆ. ಅವರ ವಯಸ್ಸು ಆಧರಿಸಿ ಔಷಧಿ ನೀಡುತ್ತಿದ್ದೇವೆ. ಅಂಜಿಯೋಗ್ರಾಂ ಮಾಡಿದ್ದೇವೆ. ರಕ್ತನಾಳದಲ್ಲಿ 95 ಬ್ಲಾಕೇಜ್​ ಕಾಣಿಸಿಕೊಂಡಿದೆ. ಸದ್ಯ ಸ್ಟಂಟ್ ಅಳವಡಿಕೆ ಮಾಡಿದ್ದೇವೆ. ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಪಿ ಕಂಟ್ರೋಲ್ ಅಲ್ಲಿ ಇದೆ. 48 ಗಂಟೆಗಳ ನಿಗಾದಲ್ಲಿ ಇರಿಸಿದ್ದೇವೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದರು.

ಬಿದ್ದು ಗಾಯ ಮಾಡಿಕೊಂಡಿದ್ದ ತಿಮ್ಮಕ್ಕ: ಅವರು ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ನಿವಾಸದಲ್ಲಿ ಎರಡು ತಿಂಗಳ ಹಿಂದೆ ಕಾಲು ಜಾರಿಬಿದ್ದಿದ್ದರು. ಆ ಸಂದರ್ಭದಲ್ಲಿ ಬೆನ್ನು ಮೂಳೆಗೆ ಪೆಟ್ಟಾಗಿತ್ತು. ಆಗ ಅವರನ್ನು ಜಯನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ : ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು

Last Updated : Oct 5, 2023, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.