ETV Bharat / state

ಕರಾಚಿ ಮರಗಳ ಮಾರಾಟ ಮಾಡುತ್ತಿದ್ದ ಮೂವರು ಮರಗಳ್ಳರ ಬಂಧನ - native plants of karachi

ಕರಾಚಿ ಮರಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಮರಗಳ್ಳರನ್ನು ಬಂಧಿಸಲಾಗಿದೆ. ಭಾರಿ ಮೌಲ್ಯದ ಮರಗಳನ್ನು ಕತ್ತರಿಸಿ ಅದನ್ನು ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದರು. ಸುದ್ದಿ ತಿಳಿದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Sale of Karachi Trees; Three accused arrest
ಕರಾಚಿ ಮರಗಳ ಮಾರಾಟ
author img

By

Published : Oct 16, 2020, 11:44 PM IST

ರಾಮನಗರ : ಕತ್ತರಿಸಿದ್ದ ಬೆಲೆಬಾಳುವ ಕರಾಚಿ ಮರಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಮರಗಳ್ಳರನ್ನು ಬಂಧಿಸಲಾಗಿದೆ.

ಮಂಡ್ಯ ಜಿಲ್ಲೆಯ ಬಿಳಿದೇಗುಲ ಅರಣ್ಯ ಪ್ರದೇಶದಲ್ಲಿ ಮರ ಸಾಗಣೆ ಮಾಡುತ್ತಿರುವ ಸುದ್ದಿ ತಿಳಿದು ದಾಳಿ ನಡೆಸಿದ ಇಲ್ಲಿನ ಪೊಲೀಸರು, 10 ಮರದ ದಿಮ್ಮಿಗಳೊಂದಿಗೆ ವಾಹನ ಮತ್ತು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮದ್ದೂರು ತಾಲೂಕಿನ ತೊರೆಬೊಮ್ಮನಹಳ್ಳಿ ಗ್ರಾಮದ ಕೃಷ್ಣ ಅಲಿಯಾಸ್ ಕಿಟ್ಟಿ (30), ಚನ್ನಪಟ್ಟಣ ತಾಲೂಕಿನ ಅರೆಭೂಹಳ್ಳಿ ಗ್ರಾಮದ ಯೋಗೇಶ್ ಹಾಗೂ ವಾಹನದ ಮಾಲೀಕ ರಂಗಸ್ವಾಮಿ ಅಲಿಯಾಸ್ ಸೋಮಣ್ಣ (35) ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.

ಬಂಧಿತರು 2 ಮರಗಳನ್ನು ಕಡಿದು 10 ದಿಮ್ಮಿಗಳನ್ನಾಗಿ ಮಾಡಿದ್ದರು. ಖರೀದಿದಾರರು ಇಲ್ಲದೇ ಮುಚ್ಚಿಟ್ಟಿದ್ದ ಮರಗಳ್ಳರು ಸುಮಾರು 2 ತಿಂಗಳ ಬಳಿಕ ಮಾರಾಟ ಮಾಡಲು ಪ್ರಯತ್ನಿಸಿದ್ದರು. ಈ ಸುದ್ದಿ ತಿಳಿದು ದಾಳಿ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.