ರಾಮನಗರ: ಅಭಿಮಾನಿಯೊಬ್ಬರು ಮನೆಯ ದೇವರ ಕೋಣೆಯಲ್ಲಿ ಡಾ.ರಾಜ್‍ಕುಮಾರ್ ಭಾವಚಿತ್ರವಿಟ್ಟು ವರ್ಷಪೂರ್ತಿ ಪೂಜೆ ಮಾಡುತ್ತಿದ್ದಾರೆ. ಈ ಅಭಿಮಾನಿಯ ಹೆಸರು ನಾಗೇಶ್. ಇವರು ರಾಜ್‍ಕುಮಾರ್ ಅಭಿನಯದ ಎಲ್ಲಾ ಸಿನಿಮಾಗಳ ಸಿಡಿಗಳು ಹಾಗೂ ತಮ್ಮ ಬೈಕ್ನಲ್ಲಿ ಅವರ ಭಾವಚಿತ್ರಗಳನ್ನು ಹಾಕಿಕೊಂಡಿದ್ದಾರೆ.
![ಡಾ. ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿ ನಾಗೇಶ್](https://etvbharatimages.akamaized.net/etvbharat/prod-images/r-kn-rmn-02-24042022-drraj-abimani-ka10051_24042022185527_2404f_1650806727_380.jpg)
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಗೆಚಗೆರೆ ಗ್ರಾಮದ ನಿವಾಸಿ ನಾಗೇಶ್, ವರನಟ ಡಾ.ರಾಜ್ ಕುಮಾರ್ ಅಪ್ಪಟ ಅಭಿಮಾನಿ. ಇವರ ಪ್ರತಿದಿನ ಆರಂಭವಾಗುವುದೇ ಡಾ.ರಾಜ್ ಭಾವಚಿತ್ರವನ್ನು ನೋಡುವುದರಿಂದ ಎನ್ನಬಹುದು. ಮನೆಯಲ್ಲಿ ಪ್ರತಿನಿತ್ಯ ವರನಟನನ್ನು ಪೂಜಿಸುವ ಜೊತೆಗೆ ಡಾ. ರಾಜ್ ಹುಟ್ಟುಹಬ್ಬದ ದಿನದಂದು ಆಸ್ಪತ್ರೆಗೆ ತೆರಳಿ ಹಣ್ಣು ಹಂಪಲುಗಳನ್ನು ರೋಗಿಗಳಿಗೆ ವಿತರಣೆ ಮಾಡುತ್ತಾರೆ. ಅಲ್ಲದೇ ಅವರ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬೆಂಗಳೂರಿಗೆ ತೆರಳಿ ಸಮಾಧಿ ದರ್ಶನ ಮಾಡಿ ಪೂಜೆ ಸಲ್ಲಿಸುವುದನ್ನು ತಪ್ಪಿಸುವುದಿಲ್ಲ.
ಇದನ್ನೂ ಓದಿ: ಡಾ.ರಾಜ್ ಕುಮಾರ್ ಹುಟ್ಟುಹಬ್ಬ: ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ