ರಾಮನಗರ: ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆ ಮೃತ್ತಿಕೆ ಸಂಗ್ರಹಿಸುವ ರಥಯಾತ್ರೆ ಕಾರ್ಯಕ್ರಮದಲ್ಲಿ ಪೂಜಾ ಕುಣಿತ ಮಾಡಿ ವಿಶ್ರಾಂತಿಗೆಂದು ರಥಯಾತ್ರಾ ವಾಹನದಲ್ಲಿ ಮಲಗಿದ್ದ ಕಲಾವಿದರೊಬ್ಬರು ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ. ಶ್ರೀನಿವಾಸ್ (29) ಮೃತ ದುರ್ದೈವಿ. ಇದಕ್ಕೂ ಮುನ್ನ ರಥಯಾತ್ರೆಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಎಚ್.ಎಂ.ಕೃಷ್ಣಮೂರ್ತಿ, ಬಿಜೆಪಿ ಮುಖಂಡ ಪ್ರಸಾದ್ ಗೌಡ ಚಾಲನೆ ನೀಡಿದ್ದರು.
ಇದನ್ನೂ ಓದಿ: ಕಾರು-ಬಸ್ ನಡುವೆ ಭೀಕರ ರಸ್ತೆ ಅಪಘಾತ: 11 ಮಂದಿ ದುರ್ಮರಣ