ETV Bharat / state

ರಾಮನಗರ: ನೇಣು ಬಿಗಿದುಕೊಂಡು ಕಂಚುಗಲ್ಲು ಸ್ವಾಮೀಜಿ ಆತ್ಮಹತ್ಯೆ - etv bharat kannada

ಬಂಡೇಮಠದ ಬಸವಲಿಂಗ ಸ್ವಾಮೀಜಿಯವರ ಮೃತದೇಹ ಬೆಟ್ಟದ ಮಹಾಲಿಂಗೇಶ್ವರ ಪೂಜಾ ನಿಲಯದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ramanagar-swamiji-dead-body-found-hanging
ರಾಮನಗರ: ನೇಣು ಬಿಗಿದುಕೊಂಡು ಕಂಚುಗಲ್ಲು ಸ್ವಾಮೀಜಿ ಆತ್ಮಹತ್ಯೆ
author img

By

Published : Oct 24, 2022, 9:48 AM IST

Updated : Oct 24, 2022, 2:07 PM IST

ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್ಲು ಬಂಡೇಮಠದ ಬಸವಲಿಂಗ ಸ್ವಾಮೀಜಿ(45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುದೂರು ಬಳಿಯ ಕಂಚುಗಲ್ಲು ಬಂಡೇಮಠದಲ್ಲಿರುವ ಬೆಟ್ಟದ ಮಹಾಲಿಂಗೇಶ್ವರ ಪೂಜಾ ನಿಲಯದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯವರ ಮೃತದೇಹ ಪತ್ತೆಯಾಗಿದೆ.

ramanagar-swamiji-dead-body-found-hanging
ಬಂಡೇಮಠದ ಬಸವಲಿಂಗ ಸ್ವಾಮೀಜಿ

ಬಸವಲಿಂಗ ಸ್ವಾಮೀಜಿಯವರು ಬಂಡೇಮಠದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು. ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿಯವರೂ ಸಹ ಇದೇ ರೀತಿ ನೇಣುಬಿಗಿದ ಸ್ಥಿತಿಯಲ್ಲಿ ಮೃತರಾಗಿದ್ದರು. ಈ ಘಟನೆಗೆ ಒಂದು ವರ್ಷವೂ ಆಗಿಲ್ಲ. ಅದು ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದೆ.

ಕಂಚುಗಲ್ಲು ಸ್ವಾಮೀಜಿ ಆತ್ಮಹತ್ಯೆ

ಈ ಬಗ್ಗೆ ಸ್ಥಳಕ್ಕೆ ಕುದೂರು ಪೊಲೀಸ್‌ ಠಾಣೆ ಇನ್ಸ್​ಪೆಕ್ಟರ್ ಎ.ಪಿ.ಕುಮಾರ್​​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಠದ ಆವರಣದಲ್ಲಿ ಸಾವಿರಾರು ಮಂದಿ ಭಕ್ತರು ಜಮಾಯಿಸಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಇದನ್ನೂ ಓದಿ: ಬಿಎಂಟಿಸಿ ಬಸ್​ ಅಪಘಾತ ಪ್ರಕರಣ.. ನೂರಾರು ಕನಸು ಹೊತ್ತು ಓದಲು ತೆರಳಿದ್ದ ಮಗಳು ಜೀವಂತವಾಗಿ ಬರಲೇ ಇಲ್ಲ..

Last Updated : Oct 24, 2022, 2:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.