ರಾಮನಗರ: ನಟ ಪುನೀತ್ ರಾಜಕುಮಾರ್ ಅಭಿಮಾನಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರ ಮನೆಗೆ ನಟ ರಾಘವೇಂದ್ರ ರಾಜ್ಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಅಪ್ಪು ನಿಧನದ ಬಳಿಕ ಕಳೆದ ನ.4ನೇ ತಾರೀಖು ರಾಮನಗರ ಜಿಲ್ಲೆ ಚನ್ನಪಟ್ಟಣದ ಎಲೆಕೇರೆಯಲ್ಲಿ ಪುನೀತ್ ಅಭಿಮಾನಿ ವೆಂಕಟೇಶ್ (25) ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕ್ಷೌರಿಕ ವೃತ್ತಿ ಮಾಡ್ತಿದ್ದ ವೆಂಕಟೇಶ್, ಪುನೀತ್ ನಿಧನದ ಬಳಿಕ ಸಂಪೂರ್ಣ ಖಿನ್ನತೆಗೆ ಒಳಗಾಗಿ, ಊಟ ಬಿಟ್ಟು ಕಂಗಾಲಾಗಿದ್ದನು. ನಂತರ ಆತ್ಮಹತ್ಯೆಗೆ ಶರಣಾಗಿದ್ದರು. ನಂತರ ಮೃತನ ಆಸೆಯಂತೆಯೇ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ.ರಾಜ್ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ಆತನ ಕಣ್ಣುಗಳನ್ನ ಕುಟುಂಬಸ್ಥರು ದಾನ ಮಾಡಿದ್ದರು.
ಇಂದು ಮೃತ ಯುವಕನ ಮನೆಗೆ ರಾಘವೇಂದ್ರ ರಾಜ್ಕುಮಾರ್ ಭೇಟಿ ನೀಡಿ ಅರ್ಧಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರ ಜೊತೆಗೆ ಮಾತುಕತೆ ನಡೆಸಿ, ನಿಮ್ಮ ಜೊತೆಗೆ ನಾವಿದ್ದೇವೆ ಧೈರ್ಯವಾಗಿರಿ ಎಂದು ಸಾಂತ್ವನ ನುಡಿದಿದ್ದಾರೆ.
ಇದನ್ನೂ ಓದಿ:ತೆಲುಗು ರಿಯಾಲಿಟಿ ಶೋನಲ್ಲಿ ಪುನೀತ್ ರಾಜಕುಮಾರ್ಗೆ ಶ್ರದ್ಧಾಂಜಲಿ