ರಾಮನಗರ: ಮಾಗಡಿ ಬಂಡೆಮಠದ ಸ್ವಾಮೀಜಿ ಸಾವಿಗೆ ಸಂಬಂಧಿಸಿದಂತೆ ತನಿಖೆ ಮುಗಿಸಿರುವ ಪೊಲೀಸರು ದೋಷಾರೋಪ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಿದ್ದಾರೆ. ನೂರಾರು ಪುಟಗಳ ದೋಷಾರೋಪ ಪಟ್ಟಿಯಲ್ಲಿ ಘಟನೆಯ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ.
ಆರೋಪಿಯಾಗಿರುವ ಯುವತಿಯು ತಾನು ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ಈ ಕೃತ್ಯ ಮಾಡಿದ್ದಳು ಎಂಬ ಸತ್ಯ ಬಯಲಾಗಿದೆ. ಸ್ವಾಮೀಜಿ ಮಾಡಿದ್ದ ಒಂದು ಅವಮಾನವನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಿದ್ದಾಳೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಏನಿದೆ ?: ಯುವತಿಗೆ ಬಂಡೆಮಠದ ಸ್ವಾಮಿಯ ಮೇಲೆ ಸೇಡು ಇತ್ತು. ಸ್ವಾಮೀಜಿ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಕೆ ಕಾಯುತ್ತಿದ್ದಳು. ಅದಕ್ಕಾಗಿ ಈ ಹಿಂದೆ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಳು. ಈ ವಿಚಾರ ಗೊತ್ತಾಗಿ ಬಂಡೆಮಠದ ಸ್ವಾಮೀಜಿ ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದಂತೆ. ಆ ಆಡಿಯೋದ ಮೂಲಕ ಯುವತಿಗೆ ಸ್ವಾಮೀಜಿ ಅವಮಾನ ಮಾಡಿದ್ದರು ಎನ್ನಲಾಗಿದೆ.
ಈ ಅವಮಾನದಿಂದ ಕುಪಿತಗೊಂಡಿದ್ದ ಯುವತಿಯು ಸೇಡು ತೀರಿಸಿಕೊಳ್ಳುವ ಯೋಜನೆ ರೂಪಿಸಿದ್ದಳು ಎಂಬ ಸತ್ಯ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ.
ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಕೇಸ್.. ಕಣ್ಣೂರು ಮಠದ ಸ್ವಾಮೀಜಿ, ಯುವತಿ ಸೇರಿ ಮೂವರು ಅರೆಸ್ಟ್