ETV Bharat / state

ನಿಖಿಲ್‌ -ರೇವತಿ ಮದುವೆಗೆ ರಾಮನಗರದಲ್ಲಿ ನಿರ್ಮಾಣವಾಗಲಿದೆ ಬೃಹತ್​ ಸೆಟ್​... ಜಾಗ ವೀಕ್ಷಿಸಿದ ಹೆಚ್​ಡಿಕೆ

ಮಾಜಿ ಸಿಎಂ‌ ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹ ಮಹೋತ್ಸವದ ಸಕಲ‌ ಸಿದ್ದತೆಯಲ್ಲಿ ತೊಡಗಿದ್ದಾರೆ. ಏಪ್ರಿಲ್ 17 ಕ್ಕೆ ದಿನಾಂಕ ನಿಗದಿಯಾಗಿದ್ದು ಮದುವೆಯನ್ನ ರಾಮನಗರ ಜಿಲ್ಲೆಯಲ್ಲಿಯೇ ಮಾಡಲು ನಿರ್ಧರಿಸಿದ್ದರು. ಅದರಂತೆ ಇಂದು ಹೆಚ್​ಡಿಕೆ ಬೀಗರೊಂದಿಗೆ ಸ್ಥಳ ವೀಕ್ಷಣೆ ನಡೆಸಿದ್ದಾರೆ.

Nikhil Kumaraswamy - Rewati Wedding Preparation
ನಿಖಿಲ್‌ ಕುಮಾರಸ್ವಾಮಿ -ರೇವತಿ ವಿವಾಹ ಸಿದ್ಧತೆ: ಸ್ಥಳ ವೀಕ್ಷಣೆ ನಡೆಸಿದ ಎಚ್‌ಡಿಕೆ
author img

By

Published : Feb 12, 2020, 8:22 PM IST

ರಾಮನಗರ: ಮಾಜಿ ಸಿಎಂ‌ ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹ ಮಹೋತ್ಸವದ ಸಕಲ‌ ಸಿದ್ದತೆಯಲ್ಲಿ ತೊಡಗಿದ್ದಾರೆ. ಏಪ್ರಿಲ್ 17 ಕ್ಕೆ ದಿನಾಂಕ ನಿಗದಿಯಾಗಿದ್ದು ಮದುವೆಯನ್ನ ರಾಮನಗರ ಜಿಲ್ಲೆಯಲ್ಲೆಯೇ ಮಾಡಲು ನಿರ್ಧರಿಸಿದ್ದರು. ಅದರಂತೆ ಇಂದು ಹೆಚ್​ಡಿಕೆ ಬೀಗರೊಂದಿಗೆ ಸ್ಥಳ ವೀಕ್ಷಣೆ ನಡೆಸಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ -ರೇವತಿ ವಿವಾಹ ಸಿದ್ಧತೆ: ಸ್ಥಳ ವೀಕ್ಷಣೆ ನಡೆಸಿದ ಎಚ್‌ಡಿಕೆ

ರಾಮನಗರ ಹೊರ ವಲಯದಲ್ಲಿರುವ ಜನಪದ ಲೋಕದ ಹಿಂಭಾಗದ ಜಾಗವನ್ನು ಮಾಜಿ ಸಿಎಂ ಹೆಚ್​. ಡಿ. ಕುಮಾರಸ್ವಾಮಿ ವೀಕ್ಷಣೆ ಮಾಡಿದ್ದಾರೆ. ಪುತ್ರ ನಿಖಿಲ್ ಕುಮಾರ ಸ್ವಾಮಿ ಮದುವೆ ಮಂಜುನಾಥ್ ಪುತ್ರಿ ರೇವತಿ ಜೊತೆಗೆ ನಿಶ್ಚಯವಾಗಿದ್ದು, ನಿಶ್ಚಿತಾರ್ಥ ಕಾರ್ಯ ಫೆ.10 ಕ್ಕೆ ಮುಗಿದಿದೆ. ಮದುವೆ ನಡೆಯುವ ಸ್ಥಳದ ವೀಕ್ಷಣೆ ನಡೆಸಿದ್ದ ಹೆಚ್​ಡಿಕೆೆ‌ ತಮ್ಮ ಬೀಗರೊಂದಿಗೆ ಇಂದು ಸಹ ಭೇಟಿ ನೀಡಿ ಮದುವೆ ನಡೆಸಲು ಇಚ್ಚಿಸಿದ್ದ ಸ್ಥಳ ವೀಕ್ಷಣೆ ನಡೆಸಿದರು.

ಮದುವೆಗೆ 10 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, ಯಾವುದೇ ಅನಾನುಕೂಲವಾಗದಂತೆ ಕ್ರಮ ಕೈಗೊಳ್ಳಲು ಹೆಚ್​ಡಿಕೆ ಖುದ್ದು ಭೇಟಿ ನೀಡಿದ್ದರು. ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಗೆ ಹಾಗೂ ಇತರ ಖಾಸಗಿ ವ್ಯಕ್ತಿಗಳಿಬ್ಬರಿಗೆ ಸೇರಿದ ಜಾಗವಾಗಿದ್ದು ಏಪ್ರಿಲ್ 17 ಕ್ಕೆ ನಿಗದಿಯಾಗಿರುವ ನಿಖಿಲ್ - ರೇವತಿ ವಿವಾಹಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಲು ಚಿಂತಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.