ETV Bharat / state

ದೇವಾಲಯದ ಹುಂಡಿ ಒಡೆದು ಹಣ ಕಳ್ಳತನ - kannada news

ದೇವಾಲಯದ ಬಾಗಿಲು ಮುರಿದು 50 ಸಾವಿರ ಸಾವಿರ ಹಣವನ್ನ ದೋಚಿ ಪರಾರಿಯಾದ ಕಳ್ಳರು.

ದೇವಾಲಯ ಹುಂಡಿ ಹೊಡೆದು ಹಣ ಕಳ್ಳತನ
author img

By

Published : Mar 30, 2019, 6:44 PM IST

ರಾಮನಗರ : ದೇವಸ್ಥಾನದ ಹುಂಡಿ ಒಡೆದು ಹಣ ಕಳ್ಳತನ ಮಾಡಿರುವ ಘಟನೆ ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದಿದೆ.

ದೇವಾಲಯ ಹುಂಡಿ ಹೊಡೆದು ಹಣ ಕಳ್ಳತನ

ಬೆಳಗಿನ ಜಾವ ಬಂದು ದುಷ್ಕರ್ಮಿಗಳು ದೇವಾಲಯದ ಬಾಗಿಲು ಮುರಿದು ಹುಂಡಿಯನ್ನ ಒಡೆದು ಸುಮಾರು 50 ಸಾವಿರ ಹಣವನ್ನ ದೋಚಿ ಪರಾರಿಯಾಗಿದ್ದಾರೆ. ಕಿಡಿಗೇಡಿಗಳ ಚಲನವಲನಗಳು ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಹಿಂದೆಯೂ ಕೂಡ ಇದೇ ದೇವಾಲಯದಲ್ಲಿ ಕಳ್ಳತನವಾಗಿತ್ತು. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯಾವಳಿಯನ್ನ ವಶಪಡಿಸಿಕೊಂಡಿದ್ದಾರೆ. ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಹೆಚ್ಚಾದ ಕಳವು ಪ್ರಕರಣ

ನಗರ ಪ್ರದೇಶದಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಹಾಗೂ ಜನಸಾಮಾನ್ಯರ ಜೊತೆಗಿನ‌ ಬಾಂಧವ್ಯ ಕಡಿಮೆಯಾಗಿರುವುದೇ ಕಾರಣ ಎಂದು ಹೊರಾಟಗಾರ ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ರಾತ್ರಿಯ ಸಮಯ‌ ಕರ್ತವ್ಯ ನಿರ್ವಹಣೆಗಿಂತ ಹೆಚ್ಚು ಅನ್ಯ ವಿಚಾರಗಳಲ್ಲಿ ಬ್ಯುಸಿಯಾಗಿದ್ದಾರೆ. ನಗರದಲ್ಲಿ ಸಿಸಿಟಿವಿಗಳು ಕೆಟ್ಟು ನಿಂತಿವೆ. ಕನಿಷ್ಠ ಅವುಗಳನ್ನು ದುರಸ್ತಿ ಮಾಡುವ ಪ್ರಯತ್ನ ಕೂಡ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ : ಕದೀಮರು ದೇವಸ್ಥಾನದ ಹುಂಡಿ ಹೊಡೆದು ಹಣ ಕಳ್ಳತನ ಮಾಡಿರುವ ಘಟನೆ ನಡೆದಿದೆ. ನಗರದವಬೆಂಗಳೂರು ಮೈಸೂರು ಹೆದ್ದಾರಿ ಜಿಲ್ಲಾಧಿಕಾರಿ ಕಚೇರಿ ಎದುರೇ ಇರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ ಬಂದು ದುಷ್ಕರ್ಮಿಗಳು ದೇವಾಲಯದ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ.‌ ಬಳಿಕ ಒಳಗೆ ಇದ್ದ ಹುಂಡಿಯನ್ನ ಹೊಡೆದ ಅದರಲ್ಲಿ ಭಕ್ತರು ಹಾಕಿದ್ದ ಸುಮಾರು 50 ಸಾವಿರ ಹಣವನ್ನ ದೋಚಿ ಪರಾರಿಯಾಗಿದ್ದಾರೆ . ಕಿಡಿಗೇಡಿಗಳ ಚಲನವಲನಗಳು ದೇವಾಲಯದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿಂದೆಯೂ ಕೂಡ ಇದೇ ದೇವಾಲಯದಲ್ಲಿ ಹಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯಾವಳಿಯನ್ನ ವಶಪಡಿಸಿಕೊಂಡಿದ್ದಾರೆ. ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಹೆಚ್ಚಾದ ಕಳವು ಪ್ರಕರಣ : ನಗರ ಪ್ರದೇಶದಲ್ಲಿ ಇತ್ತೀಚಿಗೆ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು ಪೋಲೀಸರು ಜನಸಾಮಾನ್ಯರ ಜೊತೆಗಿನ‌ಭಾಂದವ್ಯ ಕಡಿಮೆಯಾಗಿರುವುದೇ ಕಾರಣ ಎಂದು ಹೊರಾಟಗಾರ ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿಪಾಳಿ‌ ಪೋಲೀಸರು‌ ಕರ್ತವ್ಯ ನಿರ್ವಹಣೆಗಿಂತ ಹೆಚ್ಚು ಅನ್ಯ ವಿಚಾರಗಳಲ್ಲಿ ಬ್ಯುಸಿಯಾಗಿದ್ದಾರೆ. ಬೀಟ್ ಪೋಲೀಸರು ಯಾವ ಉದ್ದೇಶಕ್ಕಾಗಿ ರಾತ್ರಿ ೧೦: ೩೦ ಕ್ಕೆ ಎಲ್ಲಾ ಅಂಗಡಿ ಮುಗ್ಗಟ್ಟು ಗಳು ಮುಚ್ಚುವಂತೆ ಆದೇಶಿಸಿ ರೂಡ್ ಆಗಿ ವರ್ತಿಸುತ್ತಾರೆ‌, ಟೀ ಟಿಫನ್ ಸೆಂಟರ್ ಮುಚ್ಚಿಸುವ ಆಸಕ್ತಿಯಷ್ಠೇ ಬಾರ್ ಗಳು ಹಾಗೂ ದೊಡ್ಡದೊಡ್ಡ ಹೋಟೆಲ್ಗಳನ್ನು ರಾತ್ರಿ ಒಂದು ಗಂಟೆಯಾದರೂ ಮುಚ್ಚಿಸುವ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ ಅವರು ಹೆದ್ದಾರಿ ಅಪಘಾತ ಆದರೆ ಆರೋಪಿ‌ ತಪ್ಪಿಸಿಕೊಳ್ಳುತ್ತಾರೆ ಯಾಕಂದ್ರೆ ಆರೋಪಿ‌ಗೆ ಸಹಾಯವಾಗುವಂತೆ ಸಿಸಿಟಿವಿಗಳು ಕೆಟ್ಟು ನಿಂತಿವೆ ಅದನ್ನ ಕನಿಷ್ಟ ದುರಸ್ಥಿ‌ಮಾಡುವ ಪ್ರಯತ್ನ ಕೂಡ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಕಸ್ಮಾತ್ ಸಾರ್ವಜನಿಕರು ಪ್ರಶ್ನಿಸಿದರೆ ಇಲ್ಲಸಲ್ಲದ ಆರೋಪ‌ಮಾಡಿ ಕೇಸ್ ಜಡಿಯುವುದಾಗಿ ಬೆದರಿಸಿದ ಪ್ರಸಂಗಗಳೂ ನಡೆದಿವೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಇತ್ತ ಗಮನ ಹರಿಸಿ ರಾತ್ರಿಪಾಳಿ ಪೋಲೀಸರು ಬೀಟ್ ಪ್ರಕ್ರಿಯೆ ಸರಿಯಾಗಿ ನಿಭಾಯಿಸುವಂತೆ ಹಾಗೂ ಸಾರ್ವಜನಿಕರ ಜೊತೆಗೆ ಸಭ್ಯವರ್ತನೆ ತೋರುವಂತೆ ಸೂಚಿಸಲು ಮನವಿ ಮಾಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.