ETV Bharat / state

ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಮಾಗಡಿ ಶಾಸಕ ಮಂಜುನಾಥ್​ 'ಭೂ ಕಬಳಿಕೆ' ಆರೋಪ

ಬಿಡದಿ ಮೇಡನಹಳ್ಳಿಯಲ್ಲಿ ಸರ್ಕಾರಿ ಜಮೀನು ಕಬಳಿಸಿರುವ ಬಾಲಕೃಷ್ಣ ತಮ್ಮ ಪತ್ನಿ ರಾಧಾ ಬಿ. ಕೃಷ್ಣ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ ಎಂದು ಶಾಸಕ ಎ. ಮಂಜುನಾಥ್ ಗಂಭೀರ ಆರೋಪ ಮಾಡಿದರು.

author img

By

Published : Dec 22, 2021, 6:55 PM IST

Updated : Dec 22, 2021, 7:41 PM IST

balakrishna
ಶಾಸಕ ಬಾಲಕೃಷ್ಣ

ರಾಮನಗರ: ಬಿಡದಿ ಮೇಡನಹಳ್ಳಿಯಲ್ಲಿ ಸರ್ಕಾರಿ ಜಮೀನು ಕಬಳಿಸಿರುವ ಬಾಲಕೃಷ್ಣ ತಮ್ಮ ಪತ್ನಿ ರಾಧಾ ಬಿ. ಕೃಷ್ಣ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ ಎಂದು ಶಾಸಕ ಎ. ಮಂಜುನಾಥ್ ಗಂಭೀರ ಆರೋಪ ಮಾಡಿದರು.

ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಮಾಗಡಿ ಶಾಸಕ ಮಂಜುನಾಥ್​ 'ಭೂ ಕಬಳಿಕೆ' ಆರೋಪ

ರಾಮನಗರ ಜಿಲ್ಲೆ ಬಿಡದಿಯಲ್ಲಿ ಪುರಸಭೆ ಚುನಾವಣೆಯ ನಿಮಿತ್ತ ಬಿಡದಿ ಸಾಧನೆಯ ಹಾದಿಯಲ್ಲಿ ಕೈಪಿಡಿ ಬಿಡುಗಡೆ ಮಾಡಿ ಅವರು ಮಾಜಿ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು. ಖಾಸಗಿ ಮೈಕೋ ಸಂಸ್ಥೆ ವತಿಯಿಂದ 36 ಕೋಟಿ ರೂ. ಹಣ ಪಡೆದುಕೊಂಡು, ಮೇಡನಹಳ್ಳಿ ಕರಿಯಪ್ಪ ಅವರನ್ನು ಬ್ಲಾಕ್ ಮೇಲ್ ಮಾಡುವ ಮೂಲಕ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಆಪಾದಿಸಿದರು.

ಮೇಡನಹಳ್ಳಿ, ಅವರಗೆರೆ, ಬಾನಂದೂರು, ಇಟ್ಟಮಡು ಭಾಗದಲ್ಲಿ ಸರ್ಕಾರಿ ಸರ್ವೆ ನಂಬರ್​ನಲ್ಲಿ ನಿವೇಶನ ಕೊಡುತ್ತೇವೆ. ಬಿಡದಿಯಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ, 80 ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಘಟಕ, ಮಂಚನಬೆಲೆಯಿಂದ ಬಿಡದಿಯ 23 ವಾರ್ಡ್‍ಗಳಿಗೆ ಕುಡಿಯುವ ನೀರು, ಯುಜಿಡಿ, ಗ್ಯಾಸ್ ಕೇಬಲ್ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಯೋಜನೆ ತಕರಾರು ಅರ್ಜಿ ವಾಪಸ್ ಪಡೆದ ತೆಲಂಗಾಣ : ಗುಡ್ ನ್ಯೂಸ್ ನೀಡಿದ ಸಿಎಂ ಬೊಮ್ಮಾಯಿ

ಸ್ಲಂ ಬೋರ್ಡ್‍ನಿಂದ 420 ಮನೆಗಳ ನಿರ್ಮಾಣಕ್ಕೆ ಸದ್ಯದಲ್ಲಿಯೆ ಚಾಲನೆ ನೀಡಲಾಗುವುದು. ಹೈವೇ ಕಾಮಗಾರಿಯಿಂದ ಮನೆ ಕಳೆದುಕೊಂಡವರಿಗೆ ಕೆಂಚನಕುಪ್ಪೆ ಸರ್ಕಾರಿ ಜಮೀನಿನಲ್ಲಿ ಆಶ್ರಯ ನಿವೇಶನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜನವರಿ 3 ರಂದು ಮಾಗಡಿಯಲ್ಲಿ ಜಿಟಿಡಿಸಿ ಕೇಂದ್ರಕ್ಕೆ ಮುಖ್ಯಮಂತ್ರಿ ಶಂಕು ಸ್ಥಾಪನೆ ಮಾಡಲಿದ್ದಾರೆ. ರಾಜ್ಯದಲ್ಲಿಯೇ ಬಿಡದಿಯನ್ನು ಮಾದರಿ ಪುರಸಭೆಯನ್ನಾಗಿ ಮಾಡಲಾಗುವುದು. ಫುಟ್ ಪಾತ್ ವ್ಯಾಪಾರಿಗಳಿಗೆ ಶಾಸಕರ ಅನುದಾನದಲ್ಲಿ ಸ್ಟೀಲ್ ಸ್ಟ್ರಚರ್ ನಿರ್ಮಾಣ ಮಾಡಿಕೊಡಲಾಗುತ್ತದೆ. ಸುಜುಕಿ ಕಾರ್ಖಾನೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 6 ಸಾವಿರ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡಲಾಗುವುದು ಎಂದು ತಿಳಿಸಿದರು.

ಹಾಗೆಯೇ ಹಲವು ವರ್ಷಗಳಿಂದ ನಿರಂತರವಾಗಿ ಜನಸೇವೆ ಮಾಡಿದ್ದೇನೆ. ನಿಮ್ಮ ಸೇವೆ ಇದ್ದರೆ ಜನರ ಮುಂದಿಡಿ ಎಂದು ಬಾಲಕೃಷ್ಣ ಅವರಿಗೆ ಸವಾಲು ಹಾಕಿದ ಅವರು ಬಿಡದಿ ಪಟ್ಟಣದಲ್ಲಿ ನಡೆದಿರುವ ಕೆಲಸಗಳ ಪೂರ್ಣ ಪ್ರಮಾಣದ ದಾಖಲೆಗಳನ್ನು ಪಾರದರ್ಶಕವಾಗಿ ಜನರ ಮುಂದಿಟ್ಟಿದ್ದೇನೆ. ಯುಜಿಡಿ ಸೇರಿದಂತೆ ಹಲವು ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಮಾಡಿದ್ದೇನೆ ಎಂದರು.

ಇದನ್ನೂ ಓದಿ: ಸದನದಲ್ಲಿ ಶಾಸಕರ ಶಿಸ್ತು ಪಾಠದ ಬಗ್ಗೆ ನಾಯಕರ ಚರ್ಚೆ : ಗರಂ ಆದ ಬಿಎಸ್​​​ವೈ, ಭಾವುಕರಾದ ಸ್ಪೀಕರ್

ಕೆಎಚ್‍ಬಿ ಕಾಲೋನಿಯಲ್ಲಿ 85 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗನ, ಬಾನಂದೂರು ಮತ್ತು ವೀರಾಪುರಕ್ಕೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ತಲಾ 25 ಕೋಟಿ ರೂ. ಬಿಡುಗಡೆಯಾಗಿದೆ. ಸತ್ಯಾಸತ್ಯತೆ ಬಾಲಕೃಷ್ಣ ಅವರ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು.

ಬಾಲಕೃಷ್ಣ ಅವರು ಶಾಸಕರಾಗಿದ್ದಾಗ ಕೊಟ್ಟ ಆಶ್ರಯ ನಿವೇಶನಗಳ ಅಕ್ರಮ ಇಂದು ಲೋಕಾಯುಕ್ತ ತನಿಖೆ ಆಗುತ್ತಿದೆ. ನಿಮ್ಮ ಕಾರು ಚಾಲಕರಿಗೆ, ಆಪ್ತ ಸಹಾಯಕರಿಗೆ (ಪಿಎ) ಆಶ್ರಯ ನಿವೇಶನ ಕೊಟ್ಟಿರುವುದು ಜಗಜ್ಜಾಹೀರಾಗಿದೆ ಎಂದು ಇದೇ ವೇಳೆ ಗಂಭೀರ ಆರೋಪಿಸಿದರು.

Last Updated : Dec 22, 2021, 7:41 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.