ETV Bharat / state

ಉ.ಕರ್ನಾಟಕದಲ್ಲಿ ನೆಲೆಯಿಲ್ಲ, ಅವರಿಗೆ ಮಂಡ್ಯನೂ ಹೋಯ್ತಲ್ಲಾ ಅನ್ನೋ ನೋವಿದೆ: ಸಿ.ಪಿ.ಯೋಗೇಶ್ವರ್​

ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ವಾಕ್ಸಮರ ಸಂಬಂಧ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಯೋಗೇಶ್ವರ್, ಅವರಿಗೆ ಮಂಡ್ಯದಲ್ಲಿ ಬೇರೆ ಸಂಸದರು ಗೆದ್ದಿರುವುದು ತಡೆದುಕೊಳ್ಳಲು ಆಗುತ್ತಿಲ್ಲ ಎಂದರು.

minister-cp-yogeshwar
ಸಿ.ಪಿ ಯೋಗೇಶ್ವರ್​
author img

By

Published : Jul 8, 2021, 4:07 PM IST

ರಾಮನಗರ: ಉತ್ತರ ಕರ್ನಾಟಕದಲ್ಲಿ ಜೆಡಿಎಸ್​ಗೆ ನೆಲೆಯಿಲ್ಲ, ಇದ್ದೊಂದು ಮಂಡ್ಯನೂ ಹೋಯ್ತಲ್ಲಾ ಅನ್ನೋ ನೋವಿದೆ ಎಂದು ಕುಮಾರಸ್ವಾಮಿ ವಿರುದ್ಧ ಸಚಿವ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಅವರ ಮಗನನ್ನು ಮಂಡ್ಯ ಜನತೆ ಸೋಲಿಸಿದ್ದಾರೆ. ಹಳೆ ಮೈಸೂರು ಭಾಗವನ್ನು ಅವರೇನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಮಂಡ್ಯದಲ್ಲಿ ಬೇರೆ ಸಂಸದರು ಗೆದ್ದಿರುವುದು ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಇದು ನುಂಗಲಾರದ ತುತ್ತಾಗಿದೆ ಎಂದದರು. ಮಂಡ್ಯ ಬಿಟ್ಟು ಬೇರೆಲ್ಲೂ ಹೋಗಲು ಆಗುತ್ತಿಲ್ಲ. ಚುನಾವಣೆ ಬಂದಾಗಲೆಲ್ಲಾ ನಾನು ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಾರೆ. ನೋಡೋಣ 2023ಕ್ಕೆ ಏನಾಗಲಿದೆ ಎಂದು ಹೇಳಿದರು.

ಕುಮಾರಸ್ವಾಮಿ ಹೇಳಿಕೆ ಕುರಿತು ಸಿ.ಪಿ ಯೋಗೇಶ್ವರ್ ಪ್ರತಿಕ್ರಿಯೆ

ಕಲ್ಲುಗಣಿಗಾರಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾವು ಮಂಡ್ಯ ಜಿಲ್ಲೆಗೆ ತೆರಳಲಿದ್ದೇವೆ. ನಮ್ಮ ಇಲಾಖೆಯಿಂದ ಯಾವ ಕ್ರಮ ತೆಗೆದುಕೊಳ್ಳಲು ಸಾಧ್ಯವೋ ಅದನ್ನು ಮಾಡಲಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಸುಮಲತಾ- ಹೆಚ್​​ಡಿಕೆ ಬೀದಿ ಜಗಳ ನಿಲ್ಲಿಸಲಿ: ಎನ್.ಚೆಲುವರಾಯಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.