ETV Bharat / state

ಸಾವನದುರ್ಗ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ರಾಮನಗರದ ಸಾವನದುರ್ಗಕ್ಕೆ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಉತ್ತರಪ್ರದೇಶ ಮೂಲದ ಯುವಕ ಇಂದು ಶವವಾಗಿ ಪತ್ತೆಯಾಗಿದ್ದಾನೆ.

youth-went-missing-during-the-savandurga-trek-was-found-dead
ರಾಮನಗರ : ಸಾವನದುರ್ಗ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ
author img

By ETV Bharat Karnataka Team

Published : Dec 28, 2023, 5:46 PM IST

ರಾಮನಗರ: ಕಳೆದ ಕೆಲವು ದಿನಗಳ ಹಿಂದೆ ಮಾಗಡಿ ತಾಲೂಕಿನ ಸಾವನದುರ್ಗ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮೃತನನ್ನು ಉತ್ತರಪ್ರದೇಶ ಮೂಲದ ಗಗನ್​ದೀಪ್​ ಸಿಂಗ್​ (30) ಎಂದು ಗುರುತಿಸಲಾಗಿದೆ.

ಗಗನ್ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಕಳೆದ ಭಾನುವಾರ ಸ್ನೇಹಿತರ ಜೊತೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಸಾವನದುರ್ಗ ಚಾರಣಕ್ಕೆ ಬಂದಿದ್ದರು. ಸಂಜೆ ವೇಳೆಗೆ ನಾಪತ್ತೆಯಾಗಿದ್ದರು. ಕಳೆದ ಐದು ದಿನಗಳಿಂದ ಅರಣ್ಯಾಧಿಕಾರಿಗಳು, ಪೊಲೀಸರು, ಸ್ಥಳೀಯರು ಸೇರಿ ಬೆಟ್ಟದಲ್ಲಿ ತೀವ್ರ ಹುಡುಕಾಟ‌ ನಡೆಸುತ್ತಿದ್ದರು. ಇಂದು ಸಾವನದುರ್ಗ ಬೆಟ್ಟದ ಎಮ್ಮೆಬೀಡು ಪ್ರದೇಶದಲ್ಲಿ ಶವ ಪತ್ತೆಯಾಗಿದೆ.

ಗಗನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ರಾಮನಗರ ಎಸ್ಪಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾರಣಕ್ಕೆ ತೆರಳಿದ್ದ ಯುವಕನಿಗೆ ಹೃದಯಾಘಾತ: ಚಾರಣಕ್ಕೆ ತೆರಳಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದ ಘಟನೆ ಇತ್ತೀಚೆಗೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಬಳಿಯ ಕಕ್ಕಬ್ಬೆ ತಡಿಯಂಡ ಮೋಳು ಬೆಟ್ಟದಲ್ಲಿ ನಡೆದಿತ್ತು. ಮೃತನನ್ನು ಹರಿಯಾಣ ಮೂಲದ ಜತಿನ್ ಕುಮಾರ್ (25) ಎಂದು ಗುರುತಿಸಲಾಗಿತ್ತು.

ಬೆಂಗಳೂರಿನ ಜೆಪಿ ನಗರದ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಜತಿನ್, ತನ್ನ 5 ಜನ ಸಹೋದ್ಯೋಗಿಗಳ ಜೊತೆ ಕಳೆದ ಭಾನುವಾರ ತಡಿಯಂಡ ಮೋಳು ಬೆಟ್ಟದ ವೀಕ್ಷಣೆಗೆ ಆಗಮಿಸಿದ್ದರು. ಬೆಟ್ಟದ ಮೇಲೆ ತಲುಪಿದಾಗ ಜತಿನ್​​ಗೆ ತೀವ್ರತರ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಅರಣ್ಯ ಇಲಾಖೆಯ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿ ತೆರಳಿ ಬೆಟ್ಟದ ಮೇಲಿಂದ ಮೃತದೇಹವನ್ನು ಕೆಳಗೆ ತಂದಿದ್ದರು. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಟ್ರೆಕ್ಕಿಂಗ್ ಪ್ರಿಯರ ಸ್ವರ್ಗ ಸುಬ್ರಹ್ಮಣ್ಯದ ಕುಮಾರಪರ್ವತ ಚಾರಣಕ್ಕೆ ಮತ್ತೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.