ರಾಮನಗರ: ಇಲ್ಲಿನ ತಹಶೀಲ್ದಾರ್ಗೆ ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಧಮ್ಕಿ ಹಾಕಿರುವ ಘಟನೆ ನಡೆದಿದೆ.
ಮಾಗಡಿ ತಾಲೂಕು ಕಚೇರಿಯಲ್ಲಿ ಸೋಮವಾರ ಆರಾಧನಾ ಕಮಿಟಿ ಹಾಗೂ ಕುಂದುಕೊರತೆ ಸಭೆ ನಡೆದಿತ್ತು. ಈ ವೇಳೆ ತಹಶೀಲ್ದಾರ್ ರಮೇಶ್ಗೆ , ಶಾಸಕ ಎ.ಮಂಜುನಾಥ್ ಅವಾಜ್ ಹಾಕಿದ್ದಾರೆ.
ಅಲ್ಲದೆ ತಹಶೀಲ್ದಾರ್ ಮುಂದೆಯೇ ಕೆಳ ಹಂತದ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಧಮ್ಕಿ ಹಾಕಿದ್ದಲ್ಲದೆ, ಚಪ್ಪಲಿಯಲ್ಲಿ ಹೊಡಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾರೆ.
ಇದೇ ವೇಳೆ ತಮ್ಮ ಕೆಲಸವಾಗುತ್ತಿಲ್ಲ ಎಂದು ಶಾಸಕನ ಬಳಿ ಕಾರ್ಯಕರ್ತರು ಹೇಳಿದಕ್ಕೆ ಗರಂ ಆಗಿದ್ದಾರೆ. ಜನರ ಕೈಯಲ್ಲಿ ಅವನಿಗೆ ಚಪ್ಪಲಿಯಲ್ಲಿ ಹೊಡಿಸುತ್ತೇನೆ ಎಂದು ಹೇಳುವ ಮೂಲಕ ಜೆಡಿಎಸ್ ಶಾಸಕ ಮಂಜುನಾಥ್ ದುರ್ವರ್ತನೆ ತೋರಿದ್ದಾರೆ.