ETV Bharat / state

ಮಾವನ ಮಗಳನ್ನು ಲವ್​ ಮಾಡಿದ್ದಕ್ಕೆ ಯುವಕನ ಹತ್ಯೆ... ರಾಮನಗರದಲ್ಲಿ ಹರಿಯಿತು ರಕ್ತ! - ಪ್ರೀತಿಸಿದ್ದಕ್ಕೆ ಕೊಲೆ

ರಾಮನಗರ ಜಿಲ್ಲೆಯನ್ನು ಬೆಚ್ಚಿ ಬೀಳಿಸುವಂತೆ ಘಟನೆಯೊಂದು ನಡೆದಿದೆ. ತನ್ನ ಮಾವನ ಮಗಳನ್ನು ಪ್ರೀತಿಸಿದ ಎಂಬ ಕಾರಣಕ್ಕೆ ಪ್ರೀತಿಸಿದ ಹುಡುಗಿಯ ತಂದೆ ಮತ್ತು ಆಕೆಯ ಅಣ್ಣ ಸೇರಿಕೊಂಡು ಯುವಕನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೊಲೆ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮಾವನ ಮಗಳನ್ನು ಪ್ರೀತಿಸಿದಕ್ಕೆ ನಡೆದೇ ಹೋಯ್ತು ಹತ್ಯೆ
author img

By

Published : Jul 2, 2019, 1:00 PM IST

ರಾಮನಗರ: ಪ್ರೇಮಿಗಳಿಬ್ಬರು 5 ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ರು. ಆದ್ರೆ ಯುವತಿಯ ಮನೆಯವರು ಪ್ರೀತಿಯನ್ನ ವಿರೋಧಿಸುತ್ತಲೇ ಬಂದಿದ್ರು. ಮದುವೆಯಾಗುವುದಕ್ಕೆ ಸಿದ್ಧವಾಗಿದ್ದಾಗ ಘೋರ ಕೃತ್ಯವೊಂದು ನಡೆದಿದೆ.

ಹೌದು, ಯುವಕನನ್ನ ಅಪಹರಿಸಿ ಯುವತಿಯ ತಂದೆ ಹಾಗೂ ಆಕೆಯ ಚಿಕ್ಕಪ್ಪನ ಮಗ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ಪ್ರೇಮ‌ಕತೆಯೊಂದು ದುರಂತ‌ ಅಂತ್ಯ‌ ಕಂಡಿದೆ.

ಮಾಗಡಿ ತಾಲೂಕಿನ ಬಿಳಗುಂಬ ಸಮೀಪದ ಆನೆಹಳ್ಳದ ಬಳಿಯ ಮಾನಗಲ್‌ನ ನಿವಾಸಿ ರವಿಕುಮಾರ್ ಕೊಲೆಗೀಡಾಗಿರುವ ಯುವಕ. ನಿನ್ನೆ ರಾತ್ರಿ ತಾನು ಪ್ರೀತಿಸುತ್ತಿದ್ದ ಯುವತಿಯ ತಂದೆ ಹಾಗೂ ಅಣ್ಣನಿಂದ ಅಪಹರಣಕ್ಕೊಳಗಾಗಿದ್ದ ರವಿಕುಮಾರ್ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ತನ್ನ ಸೋದರಮಾವ ನಾಗೇಶ್ ಎಂಬುವರ ಮಗಳನ್ನ ಪ್ರೀತಿಸಿದ್ದಕ್ಕೆ ಇದೀಗ ಆತನನ್ನ ಕಿಡ್ನಾಪ್​ ಮಾಡಿ ಕೊಲೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಪ್ರೀತಿಸಿದ್ದೇ ತಪ್ಪಾಯ್ತಾ..?: ಯುವಕನ ಜೀವಕ್ಕೆ ಪ್ರೀತಿಯೇ ಕುತ್ತಾಗಿ ಹಳ್ಳದ ಪೊದೆಯೊಂದರಲ್ಲಿ ಯುವಕನ ಶವ ಬೀಳುವಂತಾಯ್ತು. ನಾಗೇಶ್‌ ಎಂಬುವರ ಮಗಳನ್ನು ಕಳೆದ 5 ವರ್ಷಗಳಿಂದ ರವಿಕುಮಾರ್​ ಪ್ರೀತಿಸುತ್ತಿದ್ದನಂತೆ. ಇವರ ಪ್ರೀತಿಗೆ ರವಿ ಮನೆಯಲ್ಲಿ ಒಪ್ಪಿಗೆಯಿತ್ತು, ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ರು. ಅಲ್ಲದೇ ಹಲವು ಬಾರಿ ತಮ್ಮ ಮಗಳ ವಿಷಯಕ್ಕೆ ತಲೆ ಹಾಕದಂತೆ ಯುವತಿಯ ತಂದೆ ಹಾಗೂ ಆಕೆಯ ಅಣ್ಣ ಲೋಕೇಶ್ ಎಚ್ಚರಿಕೆ ಸಹ ನೀಡಿದ್ದರಂತೆ.

ಆದ್ರೆ ಅದ್ಯಾವುದನ್ನೂ ಲೆಕ್ಕಿಸದ ರವಿಕುಮಾರ್ ಯುವತಿಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಇದರಿಂದ ಕೋಪಗೊಂಡಿದ್ದ ಯುವತಿಯ ತಂದೆ ನಾಗೇಶ್ ಹಾಗೂ ಆಕೆಯ ಅಣ್ಣ ಲೋಕೇಶ್ ತನ್ನ ಸಹಚರರ ಜೊತೆ ಸೇರಿ ಸೋಮವಾರ ರಾತ್ರಿ ರವಿಕುಮಾರ್‌ನನ್ನ ಮಾತುಕತೆಗೆಂದು ಕರೆದು ಅಪಹರಿಸಿದ್ದರು. ನಂತರ ಮನಬಂದಂತೆ ಥಳಿಸಿ, ಕತ್ತು ಕುಯ್ದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಇನ್ನು, ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಕೊಲೆ ಮಾಡಿರುವ ಆರೋಪಿಗಳಿಗಾಗಿ ಪೊಲೀಸರು ಮೂರು ತಂಡಗಳಾಗಿ ಹುಡುಕಾಟ ಶುರು ಮಾಡಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್‌ಸಿಂಗ್‌ ರಾಥೋಡ್​ ತಿಳಿಸಿದ್ದಾರೆ.

Intro:Body:KN_RMN_04_MURDER_PKG_7204219Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.