ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ನಡೆಸಿದ್ದ ಆರೋಪಿಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಲಾರಿ ಚಾಲಕ ಲಿಯಾಕತ್ ಪ್ರಕರಣದ ಮುಖ್ಯ ಆರೋಪಿ. ಆತನ ಮಗ ಬಷೀರ್ ಖಾನ್, ಸ್ನೇಹಿತರಾದ ತಬ್ರೇಜ್, ವಾಸು, ವಿನೋದ್, ಮನೋಜ್ ಬಂಧಿತರು. ಪ್ರೇಮ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಆಗಸ್ಟ್ 3ರಂದು ಮಾದಾಪುರ ಬಳಿ ಇಲಿಯಾಜ್ ಖಾನ್ ಕುರಿಗಳನ್ನು ತರಲು ಬಾಡಿಗೆ ಲಾರಿ ಮಾಡಿಕೊಂಡು ಆಂಧ್ರಪ್ರದೇಶಕ್ಕೆ ಹೊರಟಿದ್ದರು. ಈ ವಿಷಯವನ್ನು ಮುಂಚಿತವಾಗಿಯೇ ತಿಳಿದ ಲಿಯಾಕತ್ ತನ್ನ ಮಗನ ಮೂಲಕ ದರೋಡೆಗೆ ಸಂಚು ರೂಪಿಸಿ, ಮಾದಾಪುರ ಬಳಿ ರಾತ್ರಿ 2 ಗಂಟೆ ಸುಮಾರಿಗೆ ತಮ್ಮ ಲಾರಿಯಿಂದ ಇಲಿಯಾಜ್ ಖಾನ್ ಅವರ ಲಾರಿ ಅಡ್ಡಗಟ್ಟಿ ಹಲ್ಲೆ ಮಾಡಿ ಹಣ ದೋಚಿದ್ದರು.
ಈ ಕುರಿತು ಇಲಿಯಾಜ್ ಖಾನ್ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ 6 ಜನರ ಪೈಕಿ ಐವರನ್ನು ಬಂಧಿಸಿದ್ದಾರೆ. ಬಂಧಿತರು ಮಂಡ್ಯ ಮೂಲದವರಾಗಿದ್ದಾರೆ. 7.5 ಲಕ್ಷ ರೂ ಹಣ ವಸೂಲಿ ಮಾಡಲಾಗಿದೆ.
ಇದನ್ನೂ ಓದಿ: ಸಿಗರೇಟ್ ಹೊಗೆ ಬಿಟ್ಟಿದ್ದಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ: ವಿಡಿಯೋ ವೈರಲ್