ರಾಮನಗರ : ಸಂಸದರು ಹಾಗೂ ಕೇಂದ್ರ ಸಚಿವರು ಮೋದಿ ಮುಂದೆ ಮಾತನಾಡಲು ಹೆದರುತ್ತಿದ್ದಾರೆ. ಎಲ್ಲಿ ನಮ್ಮ ಸ್ಥಾನಗಳು, ಅಧಿಕಾರ ಹೋಗುತ್ತದೆಯೋ ಅಂತಾ ಭಯ ಪಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರವಾಗಲಿ, ಮೇಕೆದಾಟು ವಿಚಾರವಾಗಲಿ, ಮೋದಿ ಮುಂದೆ ಮಾತನಾಡಲು ಬೊಮ್ಮಾಯಿ, ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್ ಅವರುಗಳಿಗೆ ಧೈರ್ಯವಿಲ್ಲ. ಉಸಿರು ನಿಂತು ಹೋಗುತ್ತದೆ. ಧೈರ್ಯವಾಗಿ ಮಾತನಾಡುವ ಶಕ್ತಿಯನ್ನ ಹಿರಿಯ ಬಿಜೆಪಿ ಮುಖಂಡರು ಕಳೆದುಕೊಂಡಿದ್ದಾರೆ ಎಂದರು.
ಮೇಕೆದಾಟು ವಿಚಾರದಲ್ಲಿ ಸಚಿವರುಗಳ ಹೇಳಿಕೆ ಪ್ರಚಾರಕ್ಕಾಗಿ ಅಷ್ಟೇ.. ಅವರಿಗೆ ಧೈರ್ಯ, ಬದ್ಧತೆಯಿದ್ದರೆ ಪ್ರಧಾನಮಂತ್ರಿ ಹಾಗೂ ಕೇಂದ್ರ ನೀರಾವರಿ ಸಚಿವರನ್ನ ನೇರವಾಗಿ ಭೇಟಿ ಮಾಡಲಿ ನೋಡೋಣ. ರಾಜ್ಯದ 25 ಸಂಸದರು ಹೋರಾಟ ಮಾಡಿ ಮೇಕೆದಾಟು ಯೋಜನೆ ಪ್ರಾರಂಭ ಮಾಡಬೇಕು.
ಅದರಲ್ಲಿಯೂ ಬೆಂಗಳೂರಿನಲ್ಲಿರುವ 3 ಮಂದಿ ಸಂಸದರು ಹೋರಾಟ ಮಾಡಬೇಕು. ಕಾರಣ ಈ ಯೋಜನೆಯಿಂದ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಸಿಗುತ್ತದೆ. ಈ ಯೋಜನೆಗೆ ಕ್ರೇತ್ರದ ಜನರಾಗಿ ನಾವು ತಕರಾರು ಮಾಡಬೇಕು. ನಾವೇ ಮಾಡಿ ಅಂತಾ ಹೇಳುತ್ತಿದ್ದೇವೆ. ಎಷ್ಟು ಜಮೀನು ಹೋದರೂ ಹೋಗಲಿ ಜನರನ್ನ ನಾವು ಒಪ್ಪಿಸುತ್ತೇನೆ ಎಂದರು.
ಈ ಯೋಜನೆಯಲ್ಲಿ ಒಂದು ಎಕರೆಗೂ ನೀರು ಬಳಸಿಕೊಳ್ಳುವುದಿಲ್ಲ. ಎಲ್ಲವೂ ಕುಡಿಯುವ ನೀರಿಗಾಗಿ ಅಷ್ಟೇ.. ಈ ಯೋಜನೆಯಲ್ಲಿ ವಿದ್ಯುತ್ ಶಕ್ತಿ ತಯಾರು ಮಾಡಲಾಗುತ್ತದೆ. ಬೇಕಿದ್ದರೆ ತಮಿಳುನಾಡು ಸರ್ಕಾರ ಖರೀದಿ ಮಾಡಲಿ.
ಸಚಿವ ಅಶ್ವತ್ಥ್ ನಾರಾಯಣ್ ಕೇಂದ್ರ ಸರ್ಕಾರ ಮೇಕೆದಾಟು ವಿಚಾರವಾಗಿ ನಮ್ಮ ಪರ ಇದೆ ಎಂದು ಹೇಳಿದ್ದಾರೆ. ಈ ಒಂದು ಮಾತು ಸಾಕು ತಮಿಳುನಾಡಿನ ಸರ್ಕಾರಕ್ಕೆ. ಇದನ್ನೇ ಒಂದು ಗ್ರಿಪ್ ಹಿಡಿದುಕೊಂಡು ಕೋರ್ಟ್ಗೆ ಅರ್ಜಿ ಸಲ್ಲಿಸಿಸುತ್ತಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ರೆ ಕೆಲಸ ಆಗುತ್ತದೆ ಅಂತಾ ಅಶ್ವತ್ಥ್ ನಾರಾಯಣ ಹೇಳಿದ್ರಲ್ಲ, ಮಾಡಿಸಲಿ. ಅವರು ಬೇಜವಾಬ್ದಾರಿ ಹೇಳಿಕೆಗಳನ್ನ ಕೊಡಬಾರದು. ಅವರು ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ.
ಹೇಳಿಕೆಗಳನ್ನ ಕೊಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದರು. ಸಿ ಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಯಾವುದೋ ನಶೆಯಲ್ಲಿದ್ದಾರೆ. ಅವರ ಬಗ್ಗೆ ಮಾತನಾಡುವುದು ಬೇಡ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಕಟ್ಟುವ ಕೆಲಸ ಮಾಡಿದೆ, ಬಿಜೆಪಿ ಕೆಡವೋ ಕೆಲಸ ಮಾಡಿದೆ : ಕೆಪಿಸಿಸಿ ಸಾರಥಿ ಡಿಕೆಶಿ