ETV Bharat / state

ರಾಮನಗರದಲ್ಲಿ ರಂಗೇರಿದ ಚುನಾವಣೆ ಅಖಾಡ: ಅಭ್ಯರ್ಥಿಗಳೆಲ್ಲರೂ ಕರೋಡಪತಿಗಳು.. ಆಸ್ತಿ ವಿವರ ಇಂತಿದೆ - ಮಾಗಡಿ ವಿಧಾನಸಭಾ ಕ್ಷೇತ್ರ

ರಾಮನಗರ ಜಿಲ್ಲೆಯಲ್ಲಿ ಕೋಟ್ಯಾಧಿಪತಿಗಳು ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ರಾಜಕೀಯದ ಪ್ರಮುಖ ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ ನೋಡಿ..

Karnataka Elections  Assets details of candidates  Assets details of candidates from Ramnagar  ರಾಮನಗರ ಜಿಲ್ಲೆಯಲ್ಲಿ ಚುನಾವಣೆ ಅಖಾಡ  ಚುನಾವಣೆ ಅಖಾಡಕ್ಕಿಳಿದಿದ್ದಾರೆ ಕೋಟ್ಯಾಧಿಪತಿಗಳು  ಕನಕಪುರ ವಿಧಾನಸಭಾ ಕ್ಷೇತ್ರ  ಕೋಟ್ಯಾಧಿಪತಿಗಳು ಚುನಾವಣೆ ಅಖಾಡ  ರಾಜಕೀಯದ ಪ್ರಮುಖ ಪಕ್ಷ  ಅಶೋಕ್ ಆಸ್ತಿ ಎಷ್ಟು  ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಸ್ತಿ ವಿವರ  ಹೆಚ್‌ಡಿ ಕುಮಾರಸ್ವಾಮಿ ಆಸ್ತಿ ವಿವರ  ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಆಸ್ತಿ ವಿವರ  ಮಾಜಿ ಸಚಿವ ಸಿಪಿ ಯೋಗೇಶ್ವರ್ ಆಸ್ತಿ ವಿವರ  ಮಾಗಡಿ ವಿಧಾನಸಭಾ ಕ್ಷೇತ್ರ  ಜೆಡಿಎಸ್ ಅಭ್ಯರ್ಥಿಯ ಆಸ್ತಿ ಇಷ್ಟು
ರಾಮನಗರ ಜಿಲ್ಲೆಯಲ್ಲಿ ಚುನಾವಣೆ ಅಖಾಡಕ್ಕಿಳಿದಿದ್ದಾರೆ ಕೋಟ್ಯಾಧಿಪತಿಗಳು
author img

By

Published : Apr 20, 2023, 8:11 AM IST

ರಾಮನಗರ: ಜಿಲ್ಲೆಯಲ್ಲಿ ಕೋಟ್ಯಾಧಿಪತಿಗಳು ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳಿಂದ ಸ್ಪರ್ಧಿಸಿರುವ ಬಹುತೇಕ ಅಭ್ಯರ್ಥಿಗಳು ಕೋಟಿ ಕುಳಗಳಾಗಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಆಸ್ತಿ ವಿವರದ ಬಗ್ಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಪ್ರಮುಖವಾಗಿ ಸ್ಪರ್ಧಿಸಿರುವ ಹುರಿಯಾಳುಗಳ ಅವರ ಆಸ್ತಿ ವಿವರದ ಬಗ್ಗೆ ಮಾಹಿತಿ ಇಲ್ಲಿದೆ..

ಕನಕಪುರ ವಿಧಾನಸಭಾ ಕ್ಷೇತ್ರ: ರೇಷ್ಮೆನಗರಿ ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬದ ₹1,414 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಮತದಾರರ ಹುಬ್ಬೇರಿಸಿದೆ. ಶಿವಕುಮಾರ್ ಕನಕಪುರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ 108 ಪುಟಗಳಲ್ಲಿ ಆಸ್ತಿ ವಿವರ ನೀಡಿದ್ದಾರೆ.

ಡಿಕೆಶಿ ಅವರ ವೈಯಕ್ತಿಕ ಆಸ್ತಿಯೇ ₹1,214 ಕೋಟಿ ದಾಟಿದೆ. ಅವರ ಪತ್ನಿ ಉಷಾ 133 ಕೋಟಿ ಹಾಗೂ ಪುತ್ರ ಆಕಾಶ್‌ ₹66 ಕೋಟಿ ಆಸ್ತಿ ಹೊಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬಳಿ ₹970 ಕೋಟಿಯಷ್ಟು ಸ್ಥಿರಾಸ್ತಿ, ₹244 ಕೋಟಿ ಚರಾಸ್ತಿ ಇದ್ದು, ₹226 ಕೋಟಿ ಸಾಲವನ್ನೂ ಹೊಂದಿದ್ದಾರೆ. ಡಿಕೆಶಿ ಬಳಿ ₹23 ಲಕ್ಷ ಮೌಲ್ಯದ ಯೂಬ್ಲೆಟ್‌ ವಾಚ್‌ ಸಹ ಇದ್ದು, ಅವರು ಸದ್ಯ ವರ್ಷಕ್ಕೆ ₹14 ಕೋಟಿಯಷ್ಟು ಆದಾಯ ಗಳಿಸುತ್ತಿದ್ದಾರೆ. ಕುಟುಂಬದವರಲ್ಲಿ 4 ಕೆ.ಜಿ. ಯಷ್ಟು ಬಂಗಾರದ ಸಂಗ್ರಹವೂ ಇದೆ. ರಾಜ್ಯದ ವಿವಿಧೆಡೆ ಕೃಷಿ, ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. 2013ರಲ್ಲಿ ಡಿಕೆಶಿ ಕುಟುಂಬದ ಆದಾಯವು ₹252 ಕೋಟಿ ಇದ್ದು, 2018ರಲ್ಲಿ ಅದು ₹840 ಕೋಟಿಗೆ ಏರಿಕೆ ಆಗಿತ್ತು. ಸದ್ಯ ಅವರ ಮೇಲೆ ವಿವಿಧ ಕ್ರಿಮಿನಲ್‌ ಪ್ರಕರಣಗಳೂ ಸೇರಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ.

ಆರ್. ಅಶೋಕ್ ಆಸ್ತಿ ಎಷ್ಟು?: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ಕಣಕ್ಕೆ ಇಳಿದಿರುವ ಸಚಿವ ಆರ್ ಅಶೋಕ್ 87.35 ಕೋಟಿ ರೂ.ಗಳ ಆಸ್ತಿ ಘೋಷಣೆ ಮಾಡಿದ್ದಾರೆ. ನಾಮಪತ್ರ ಸಲ್ಲಿಸಿದ ಅಶೋಕ್ ತಮ್ಮ ಬಳಿ 400 ಗ್ರಾಂ ಚಿನ್ನ, 12 ಕೆಜಿ ಬೆಳ್ಳಿ ಹಾಗೂ ತಮ್ಮ ಪತ್ನಿ ಎಂ.ಆರ್. ಪರಿಮಳಾ ರಾಣಿ ಅವರ ಬಳಿ 617 ಗ್ರಾಂ ಚಿನ್ನ, 11.5 ಕೆಜಿ ಬೆಳ್ಳಿ, 165.23 ಗ್ರಾಂ ವಜ್ರಾರಭಣ ಇದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಜಂಟಿಯಾಗಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ರೂಪದಲ್ಲಿ ಹಾಗೂ ಸಾಲ ಮತ್ತು ಇತರೆ ರೂಪದಲ್ಲಿ ಬರಬೇಕಿರುವ ಒಟ್ಟು ಮೊತ್ತ ಸುಮಾರು 8.96 ಕೋಟಿ ರೂ. ಇದೆ ಎಂದು ತೋರಿಸಿಕೊಂಡಿದ್ದು, ಒಟ್ಟಾರೆ ಚರಾಸ್ತಿಯನ್ನು 12.31 ಕೋಟಿ ರೂ.ಗಳು ಎಂದು ತಿಳಿಸಿದ್ದಾರೆ.

ಉಳಿದಂತೆ ಅಶೋಕ್​ಗೆ ತಮ್ಮ ಹೆಸರಲ್ಲಿ ಕೃಷಿ ಭೂಮಿ ಇಲ್ಲವಾದರೂ ಜಂಟಿ ಆಗಿ ಸುಮಾರು 10.50 ಕೋಟಿ ರೂ. ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇವರ ಪತ್ನಿ ಪರಿಮಳಾ ರಾಣಿ 2.17 ಎಕರೆ ಕೃಷಿ ಭೂಮಿ ಹಾಗೂ 1.04 ಎಕರೆ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ. ಬೆಂಗಳೂರಿನ ಜಾಲಹಳ್ಳಿಯ ಶಾರದಾಂಬನಗರದಲ್ಲಿ ಮನೆಯನ್ನು ಆರ್.ಅಶೋಕ್ ಹೊಂದಿದ್ದು, ಇದರ ಮೌಲ್ಯ 3.10 ಕೋಟಿ ರೂಪಾಯಿ ಬೆಲೆ ಬಾಳುತ್ತಿದೆ. ಒಟ್ಟಾರೆಯಾಗಿ ಅಶೋಕ್ ಮತ್ತು ಪರಿಮಳಾರಾಣಿ ಹೆಸರಲ್ಲಿ ಹಾಗೂ ಜಂಟಿ ಆಗಿ ಸ್ಥಿರಾಸ್ತಿ ಒಟ್ಟು ಮೌಲ್ಯ ಸುಮಾರು 75.03 ಕೋಟಿ ರೂಪಾಯಿಗಳಾಗಿದೆ. ಉಳಿದಂತೆ ಅಶೋಕ್ ವೈಯಕ್ತಿಕವಾಗಿ 97 ಲಕ್ಷ ಮತ್ತು ಪರಿಮಳಾರಾಣಿ 64 ಲಕ್ಷ ಸಾಲ ಉಳಿಸಿಕೊಂಡಿದ್ದಾರೆ. ಇದರ ಜೊತೆಗೆ ಅಶೋಕ್ ವಿವಿಧ ಕಂಪನಿಗಳು ಹಾಗೂ ವ್ಯಕ್ತಿಗಳ ಪಾಲುದಾರಿಕೆಯಲ್ಲಿ 7.95 ಕೋಟಿ ರೂ.ಗಳ ಬಾಕಿಯನ್ನು ತೀರಿಸಬೇಕಿದೆ.

ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಸ್ತಿ ವಿವರ: ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ, ಯುವ ನಾಯಕ‌ ನಿಖಿಲ್ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದು, ಅವರ ಒಟ್ಟು 74.51 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಚರಾಸ್ತಿ 46.51ಕೋಟಿ ರೂಪಾಯಗಳಿದ್ದು, ಸ್ಥಿರಾಸ್ತಿ 28 ಕೋಟಿ ರೂಪಾಯಿ ಇದೆ. 1.151 ಕೆಜಿ ಚಿನ್ನ ಇದೆ ಎಂದು ಹೇಳಿರುವ ನಿಖಿಲ್​ ಕುಮಾರಸ್ವಾಮಿ 38.94 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ. ಇನ್ನು ನಿಖಿಲ್​ ಕುಮಾರಸ್ವಾಮಿ ಬಳಿ ಲ್ಯಾಂಬೋರ್ಗಿನಿ ಸಹಿತ ಒಟ್ಟು 5 ಕಾರುಗಳಿದ್ದು, ಅವರ ವಾರ್ಷಿಕ ಆದಾಯ 4.28 ಕೋಟಿ ರೂಪಾಯಿ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹೆಚ್‌ಡಿ ಕುಮಾರಸ್ವಾಮಿ ಆಸ್ತಿ ವಿವರ: ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿಯಾಗಿರುವ ಹೆಚ್‌.ಡಿ. ಕುಮಾರಸ್ವಾಮಿ ಕುಟುಂಬವು ಸದ್ಯ ₹189.27 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದೆ. ಕುಮಾರಸ್ವಾಮಿ–ಅನಿತಾ ದಂಪತಿ ಒಟ್ಟಾಗಿ ₹92.84 ಕೋಟಿ ಮೊತ್ತದ ಸ್ಥಿರಾಸ್ತಿ ಹಾಗೂ ₹96.43 ಕೋಟಿ ಮೊತ್ತದ ಚರಾಸ್ತಿಯನ್ನು ಹೊಂದಿದ್ದಾರೆ.

ಒಟ್ಟು 4.130 ಕೆ.ಜಿ. ಚಿನ್ನ ಹಾಗೂ 29 ಕೆ.ಜಿ. ಬೆಳ್ಳಿ, 54 ಕ್ಯಾರಟ್‌ನಷ್ಟು ವಜ್ರವಿದೆ. ಕುಮಾರಸ್ವಾಮಿ ಹೆಸರಿನಲ್ಲಿ ಟ್ರ್ಯಾಕ್ಟರ್ ಮಾತ್ರ ಇದೆ. ಅವರ ಪತ್ನಿ ಬಳಿ ಇನೋವಾ ಕ್ರಿಸ್ಟ ಹಾಗೂ ಎಂಟು ಮಾರುತಿ ಎಕೋ ಕಾರುಗಳಿವೆ. ಹೆಚ್​ ಡಿ ಕುಮಾರಸ್ವಾಮಿ 48 ಎಕರೆಗೂ ಹೆಚ್ಚು ಕೃಷಿ ಜಮೀನು ಹೊಂದಿದ್ದು, 2021–22ನೇ ಸಾಲಿನಲ್ಲಿ ಇದರಿಂದ ₹47 ಲಕ್ಷದಷ್ಟು ಕೃಷಿ ಆದಾಯ ತೋರಿಸಿದ್ದಾರೆ. ಅನಿತಾ ಬಳಿ ವಾಣಿಜ್ಯ ಆಸ್ತಿಗಳು ಹೆಚ್ಚಿದ್ದು, ಸಾಕಷ್ಟು ಕಂಪನಿಗಳಲ್ಲೂ ಹೂಡಿಕೆ ಮಾಡಿದ್ದಾರೆ. ₹77 ಕೋಟಿಯಷ್ಟು ಸಾಲವೂ ಇವರ ಬೆನ್ನಿಗಿದೆ. ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಐದು ಪ್ರಕರಣಗಳು ದಾಖಲಾಗಿರುವ ಮಾಹಿತಿ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಆಸ್ತಿ ವಿವರ: ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಇಕ್ಬಾಲ್​ ಹುಸೇನ್​ ನಾಮಪತ್ರ ಸಲ್ಲಿಕೆ ಮಾಡಿದ್ದು, ಅವರ ಒಟ್ಟು 59.36 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಚರಾಸ್ತಿ 5.13 ಕೋಟಿ ರೂಪಾಯಗಳಿದ್ದು, ಸ್ಥಿರಾಸ್ತಿ 54.23 ಕೋಟಿ ರೂಪಾಯಿ ಇದೆ. 500 ಗ್ರಾಂ ಒಡವೆ ಇದೆ ಎಂದು ಹೇಳಿರುವ ಇಕ್ಬಾಲ್​ 8.71 ಕೋಟಿ ರೂಪಾಯಿ ಸಾಲವಿದೆ ಎಂದು ಘೋಷಿಸಿದ್ದಾರೆ. ಇನ್ನು ಇಕ್ಬಾಲ್​ ಬಳಿ ಫಾರ್ಚುನರ್ ಸೇರಿದಂತೆ ವಿವಿಧ ವಾಹನಗಳಿವೆ. ಅವರ ವಾರ್ಷಿಕ ಆದಾಯ 66.30 ಲಕ್ಷ ರೂಪಾಯಿ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಾಜಿ ಸಚಿವ ಸಿಪಿ ಯೋಗೇಶ್ವರ್ ಆಸ್ತಿ ವಿವರ: ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್ ಆಸ್ತಿ ಮೌಲ್ಯ 35.28 ಕೋಟಿ. ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸಿದ ಅವರು ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಪತ್ನಿ ಶೀಲಾ ಮತ್ತು ಅವರ ಒಟ್ಟು ಚರಾಸ್ತಿ ಮತ್ತು ಸ್ಥಿರಾಸ್ತಿ 35.28 ಕೋಟಿ ರೂ.ಇದೆ. ಯೋಗೇಶ್ವರ್ ಹೆಸರಲ್ಲಿ 250 ಗ್ರಾಂ ಚಿನ್ನ, ಸಾರ್ವಜನಿಕರಿಂದ ಉಡುಗೊರೆಯಾಗಿ ಪಡೆದ 1 ಕೆಜಿ ಚಿನ್ನ ಮತ್ತು 50 ಕೆಜಿ ಬೆಳ್ಳಿ ಒಳಗೊಂಡಂತೆ 5.09 ಕೋಟಿ ರೂ. ಚರಾಸ್ತಿ ಇದೆ. ಪತ್ನಿ ಹೆಸರಲ್ಲಿ 1.5 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಒಳಗೊಂಡಂತೆ ಒಟ್ಟು 2.43 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಉಳಿದಂತೆ ಯೋಗೇಶ್ವರ್ ಅವರ ಬಳಿ ಇರುವ ಕೃಷಿ ಮತ್ತು ಕೃಷಿಯೇತರ ಜಮೀನಿನ ಒಟ್ಟು ಮಾರುಕಟ್ಟೆ ಮೌಲ್ಯ 25.59 ಕೋಟಿ ರೂ ಆಗಿದ್ದು, ಪತ್ನಿ ಬಳಿ 2.14 ಕೋಟಿ ರೂ ಮೌಲ್ಯದ ಕೃಷಿ ಮತ್ತು ಕೃಷಿಯೇತರ ಜಮೀನು ಇದೆ ಎಂದು ಘೋಷಿಸಿದ್ದಾರೆ. ಒಟ್ಟಾರೆಯಾಗಿ ಯೋಗೇಶ್ವರ್ 30.69 ಕೋಟಿ ರೂ. ಚರ ಮತ್ತು ಸ್ಥಿರಾಸ್ತಿ ಮಾಲೀಕರಾದರೆ, ಶೀಲಾ 4.58 ಕೋಟಿ ರೂ. ಚರ ಮತ್ತು ಸ್ಥಿರಾಸ್ತಿ ಒಡತಿ. ಯೋಗೇಶ್ವರ್‌ ಅವರಿಗೆ 13 ಕೋಟಿ ರೂ. ಸಾಲವಿದ್ದರೆ, ಶೀಲಾ 3.28 ಕೋಟಿ ರೂ. ಸಾಲ ತೀರಿಸಬೇಕಿದೆ.

ಮಾಗಡಿ ವಿಧಾನಸಭಾ ಕ್ಷೇತ್ರ: ಮಾಗಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ ಬಾಲಕೃಷ್ಣ ಅವರ ಒಟ್ಟು ಆಸ್ತಿ ಮೌಲ್ಯ 35.30 ಕೋಟಿ. ಮಂಗಳವಾರ ನಾಮಪತ್ರ ಸಲ್ಲಿಸಿದ ಅವರು ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಪತ್ನಿ ರಾಧಾ ಮತ್ತು ಅವರ ಒಟ್ಟು ಆಸ್ತಿ 35.30 ಕೋಟಿ ಘೋಷಿಸಿಕೊಂಡಿದ್ದಾರೆ. ತಮ್ಮ ಸಹೋದರ ಎಚ್.ಎನ್ ಅಶೋಕ್ ಅವರೊಂದಿಗೆ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯಲ್ಲಿ ಪಾಲುದಾರಿಕೆಯನ್ನು ಹೊಂದಿರುವ ಬಾಲಕೃಷ್ಣ ಅವರು ಒಟ್ಟು 9.93 ಕೋಟಿ ರೂ. ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದರೆ, ಇವರ ಪತ್ನಿ ರಾಧಾ ಅವರು 23.52 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ. ಇನ್ನು ಬಾಲಕೃಷ್ಣ ಅವರು 1.11 ಕೋಟಿ ರೂ. ಗಳ ಸಾಲಗಾರರಾಗಿದ್ದರೆ, ಪತಿಗಿಂತ ಹೆಚ್ಚು ಸಾಲ ಮಾಡಿರುವ ರಾಧಾ ಅವರು, 11.13 ಕೋಟಿ ರೂ. ಸಾಲ ಉಳಿಸಿಕೊಂಡಿದ್ದಾರೆ. ಬಾಲಕೃಷ್ಣ ಹೆಸರಲ್ಲಿ ಯಾವುದೇ ವಾಹನಗಳು ಇಲ್ಲವಾಗಿದ್ದು, ಪತ್ನಿ ಹೆಸರಲ್ಲಿ 3 ಕಾರುಗಳಿವೆ. ಬಾಲಕೃಷ್ಣ ಬಳಿ 450 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ಇದ್ದರೆ, ರಾಧ ಅವರ ಬಳಿ 1133 ಗ್ರಾಂಗಳ ಚಿನ್ನ, 4 ಕೆಜಿ ಬೆಳ್ಳಿ ಇದೆ.

ಜೆಡಿಎಸ್ ಅಭ್ಯರ್ಥಿಯ ಆಸ್ತಿ ಇಷ್ಟು: ಮಾಗಡಿ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ 22 ಕೋಟಿ ರೂ. ಆಸ್ತಿಯ ಒಡೆಯ. ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಘೋಷಣೆ ಮಾಡಿಕೊಂಡಿರುವ ಪ್ರಮಾಣ ಪತ್ರದಲ್ಲಿ ತಾವು ಹಾಗೂ ತಮ್ಮ ಪತ್ನಿ ಲಕ್ಷ್ಮಿ ಹೆಸರಲ್ಲಿ ಇರುವ ಒಟ್ಟು ಆಸ್ತಿ ಮೌಲ್ಯ 22 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಮಂಜುನಾಥ್ ಅವರ ಬಳಿ 9.45 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದ್ದರೆ, ಪತ್ನಿ ಲಕ್ಷ್ಮೀ ಅವರ ಬಳಿ 10.88 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಮಂಜುನಾಥ್ 1.18 ಕೋಟಿ ರೂ.ಗಳ ಸಾಲವನ್ನು ಹೊಂದಿದ್ದರೆ, ಲಕ್ಷ್ಮೀ ಅವರು ಉಳಿಸಿಕೊಂಡಿರುವ ಸಾಲದ ಮೊತ್ತ 4.15 ಕೋಟಿ ರೂ.ಗಳಾಗಿವೆ. ಉಳಿದಂತೆ ಮಂಜುನಾಥ್ ಹೆಸರಲ್ಲಿ 5 ಕಾರುಗಳಿದ್ದರೆ, ಲಕ್ಷ್ಮಿ ಹೆಸರಲ್ಲಿ ಒಂದು ಕಾರು ಮತ್ತು ಸ್ಕೂಟರ್ ಇದೆ. ಮಂಜುನಾಥ್ ಅವರ ಬಳಿ 250 ಗ್ರಾಂ ತೂಕದ ಚಿನ್ನ ಮತ್ತು ಒಂದು ಕೆಜಿ ಬೆಳ್ಳಿ, ಲಕ್ಷ್ಮೀ ಅವರ ಬಳಿ 400 ಗ್ರಾಂ ಚಿನ್ನ ಮತ್ತು ಒಂದೂವರೆ ಕೆಜಿ ಬೆಳ್ಳಿ ಇದೆ.

ಓದಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಲಿಂಗಾಯತ ಮುಖ್ಯಮಂತ್ರಿ ಅಸ್ತ್ರ ಪ್ರಯೋಗ.. ಶಾಸಕ ರೇಣುಕಾಚಾರ್ಯ ಹೀಗಂದ್ರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.