ETV Bharat / state

ಕರ್ನಾಟಕ ವಿಧಾನಸಭೆ ಚುನಾವಣೆ: ಹೆಚ್​ ಡಿ ದೇವೇಗೌಡರಿಂದ ಭರ್ಜರಿ ಪ್ರಚಾರ - ಪಂಚರತ್ನ ರಥ ಯೋಜನೆ

ಮಾಗಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಶನಿವಾರ ಜೆಡಿಎಸ್​ ಅಭ್ಯರ್ಥಿ ಮಂಜುನಾಥ್ ಪರ ಪ್ರಚಾರ ನಡೆಸಿದರು.

jds
ಜೆಡಿಎಸ್​
author img

By

Published : Apr 30, 2023, 7:13 AM IST

Updated : Apr 30, 2023, 7:32 AM IST

ಸಮಾವೇಷ ಕಾರ್ಯಕ್ರಮದಲ್ಲಿ ಹೆಚ್​ ಡಿ ದೇವೇಗೌಡರು

ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಪ್ರಚಾರ ಅಖಾಡಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ‌ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಳಿದಿದ್ದಾರೆ. ಅಂತೆಯೇ ರೇಷ್ಮೆನಗರಿ ರಾಮನಗರ ಜಿಲ್ಲೆಗೆ ಶನಿವಾರ ದೊಡ್ಡಗೌಡ್ರು ಭೇಟಿ ನೀಡಿ, ಕೆಂಪೇಗೌಡ ಕೋಟೆ ಮಾಗಡಿಯಲ್ಲಿ ಜೆಡಿಎಸ್ ಸಮಾವೇಶದಲ್ಲಿ ಅಭ್ಯರ್ಥಿ ಎ.ಮಂಜುನಾಥ್ ಪರ ಪ್ರಚಾರ ನಡೆಸಿದರು.

ಹೆಲಿಕಾಪ್ಟರ್ ಮೂಲಕ ಮಾಗಡಿಗೆ ಬಂದಿಳಿದ ಜೆಡಿಎಸ್ ವರಿಷ್ಠ ಹೆಚ್‌.ಡಿ.ದೇವೇಗೌಡ್ರು, ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿದ ಮಾತನಾಡಿದ ದೇವೇಗೌಡರು, ಇಂದು ಮಾಗಡಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೇನೆ. ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ನವಲಗುಂದದಲ್ಲಿ ಪ್ರಚಾರಕಾರ್ಯ ಮುಗಿಸಿಕೊಂಡು ಬಂದಿದ್ದೇನೆ ಎಂದರು.

ಮಂಜಣ್ಣನ ಮಾತು ನನ್ನ ಹೃದಯವನ್ನು ಕರಗಿಸಿದೆ-ಹೆಚ್​ ಡಿ ದೇವೇಗೌಡ: ಬೆಳಗ್ಗೆಯಿಂದಲೂ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಎ.ಮಂಜು ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಇಂದು ಅವರ ಪರವಾಗಿ ಪ್ರಚಾರ ಮಾಡಲು ಬಂದಿದ್ದೇನೆ. ಮಂಜುಗೆ ಈ ಬಾರಿಯೂ ಗೆಲುವಾಗಲಿದೆ ಎಂದರು. ಸಮಾವೇಶದಲ್ಲಿ ಮಂಜಣ್ಣ ಅವರು ಒಂದು ಗಂಟೆಗೂ ಹೆಚ್ಚು ಸುದೀರ್ಘವಾಗಿ ಮಾತನಾಡಿದ್ದಾರೆ. ಅವರ ಮಾತು ನನ್ನ ಹೃದಯವನ್ನು ಕರಗಿಸಿದೆ. ಇಂಥ ಯೋಗ್ಯ ಅಭ್ಯರ್ಥಿಯನ್ನು ಈ ಕ್ಷೇತ್ರದ ಮಹಾಜನತೆಯ ಆಶೋತ್ತರಗಳಿಗೆ ನೆರವಾಗಿರುವಂಥಹ ಮಂಜಣ್ಣನವರನ್ನು ಮತ್ತೊಮ್ಮೆ ಕಣಕ್ಕೆ ಇಳಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಹೊಡೆಯುತ್ತಿದೆ: ಪ್ರಿಯಾಂಕಾ ವಾದ್ರಾ

ಅವರ ಗೆಲುವು ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ. ಅವರ ಒಂದೊಂದು ಮಾತನ್ನು ಕೂಡ ಗ್ರಹಿಸಿಕೊಳ್ಳುತ್ತಿದ್ದೆ. ಹಣ ಮತ್ತು ಸಚಿವ ಸ್ಥಾನಕ್ಕೆ ಆಸೆ ಪಡದೆ, ತನ್ನ ಮೇಲೆ ಏನೇ ಒತ್ತಡ ಬಂದರೂ ಅದನ್ನೆಲ್ಲ ಧಿಕ್ಕರಿಸಿ ನಿಂತ ಯೋಗ್ಯ ಮಹಾರಾಜಕಾರಣಿ ಮಂಜಣ್ಣನವರು. ಅಂತಹ ವ್ಯಕ್ತಿಯನ್ನು ಗುರುತು ಮಾಡಿದ್ದೇವೆ. ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಮಂಡ್ಯ ಉರೀಗೌಡ, ನಂಜೇಗೌಡ ಮತ್ತು ಅಂಬರೀಶ್ ಹುಟ್ಟಿದ ನಾಡು..​ ಕೇಂದ್ರ ಸಚಿವ ರಾಜನಾಥ್ ಸಿಂಗ್ ಚುನಾವಣಾ ಪ್ರಚಾರ

ಕುಮಾರಸ್ವಾಮಿ ಅವರ ಪಂಚರತ್ನ ರಥಯೋಜನೆಯನ್ನು ಯಶಸ್ವಿಯಾಗಿಸಬೇಕು. ಪಂಚರತ್ನ ಯೋಜನೆಯಲ್ಲಿನ ಭರವಸೆಗಳನ್ನು ಈಡೇರಿಸಲು ನೀವು ಮಂಜಣ್ಣನವರನ್ನು ವಿಧಾನಸಭೆಗೆ ಕಳುಹಿಸಿ ಕೊಡಿ. ಈ ಬಾರಿ ಪಂಚರತ್ನ ಯೋಜನೆಗಳು ಜಾರಿಯಾಗಬೇಕಾದರೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಅದಕ್ಕಾಗಿ ನಿಮ್ಮ ಸಹಕಾರ ಬೇಕಾಗಿದೆ. ಈ ನಿಟ್ಟಿನಲ್ಲಿ ಮಾಗಡಿ‌ ಶಾಸಕ ಎ.ಮಂಜುನಾಥ್ ಅವರನ್ನು ಗೆಲ್ಲಿಸುವಂತೆ ಕರೆಕೊಟ್ಟರು. ಇನ್ನು ರಾಮನಗರಕ್ಕೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ಪ್ರಧಾನಿಗಳು ಬರಲಿ. ಯಾರು ಬಂದರೂ ಬೇಡ ಅನ್ನೋಕ್ಕಾಗುತ್ತಾ ಬರಲಿ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: ರಾಮನಗರ: ಚನ್ನಪಟ್ಟಣಕ್ಕೆ ಇಂದು ಪ್ರಧಾನಿ ಮೋದಿ ಆಗಮನ

Last Updated : Apr 30, 2023, 7:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.