ETV Bharat / state

ಕೊಳವೆ ಬಾವಿಯಲ್ಲಿ ಚಿಮ್ಮಿದ ನೀರು: ಇದಕ್ಕೆ ಸಚಿವ ಯೋಗೇಶ್ವರ್ ಕಾರಣ ಅಂತಾರೆ ಜನ! - Kadankanahalli village of Channapatna taluk

ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಚನ್ನಪಟ್ಟಣ ತಾಲೂಕಿನಾದ್ಯಂತ ಕೈಗೊಂಡ ನೀರಾವರಿ ಯೋಜನೆಯಿಂದ ತಾಲೂಕಿನಲ್ಲಿರುವ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಗೆ ಹಾಹಾಕಾರ ಇದ್ದರೂ ಕೂಡ ಈ ಕ್ಷೇತ್ರದಲ್ಲಿ ಮಾತ್ರ ನೀರಿನ ತೊಂದರೆ ಇಲ್ಲ. ಇದಕ್ಕೆ ಕಾರಣ ಯೋಗೇಶ್ವರ್ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

improvement-of-pipeline-well-groundwater-in-kadankanahalli-village
ಕೊಳವೆ ಬಾವಿಯಲ್ಲಿ ಚಿಮ್ಮಿದ ನೀರು
author img

By

Published : Mar 23, 2021, 10:56 PM IST

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಾಡಂಕನಹಳ್ಳಿ ಗ್ರಾಮದಲ್ಲಿ ರೈತನೋರ್ವ ಕೊರೆಸಿದ ಕೊಳವೆ ಬಾವಿಯಲ್ಲಿ ಸುಮಾರು 50 ಅಡಿಗೂ ಹೆಚ್ಚು ಎತ್ತರಕ್ಕೆ ನೀರು ಚಿಮ್ಮಿದ ದೃಶ್ಯ ನೋಡುಗರನ್ನು ನಿಬ್ಬೆರಗು ಮಾಡಿದೆ.

ಒಂದು ಕಾಲದಲ್ಲಿ ಈ ಭಾಗದಲ್ಲಿ ಸಾವಿರ ಅಡಿ ಕೊಳವೆ ಬಾವಿ ಕೊರೆದ್ರು ನೀರು ಸಿಗದೆ ಈ ಭಾಗದ ರೈತರು ಭಾರಿ ಸಂಕಷ್ಟದ ಜೀವನ ಎದುರಿಸಿದ್ದರು. ಇಂದು ಕೇವಲ 100 ಅಡಿಯ ಒಳಗೆ ನೀರು ಸಿಕ್ಕಿರುವುದು ಈ ಭಾಗದ ರೈತರ ಸಂತಸಕ್ಕೆ ಕಾರಣವಾಗಿದೆ.

ಕೊಳವೆ ಬಾವಿಯಲ್ಲಿ ಚಿಮ್ಮಿದ ನೀರು

ಓದಿ: ಪರಿಚಿತರಲ್ಲೇ ರಾಬರಿ ಪ್ರಕರಣ: ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ ಪೊಲೀಸರು

ಸಿ.ಪಿ‌‌.ಯೋಗೇಶ್ವರ್ ಕಾರಣ!: ಅಂತರ್ಜಲದ ಮಟ್ಟ ಇಷ್ಟೊಂದು ಮೇಲಕ್ಕೆ ಬರಲು ಸಚಿವ ಸಿ.ಪಿ.ಯೋಗೇಶ್ವರ್ ಅವರೇ ಕಾರಣ ಎಂದು ಇಲ್ಲಿಯ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ‌. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಚನ್ನಪಟ್ಟಣ ತಾಲೂಕಿನಾದ್ಯಂತ ಕೈಗೊಂಡ ನೀರಾವರಿ ಯೋಜನೆಯಿಂದ ತಾಲೂಕಿನಲ್ಲಿರುವ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಗೆ ಹಾಹಾಕಾರ ಇದ್ದರೂ ಕೂಡ ಈ ಕ್ಷೇತ್ರದಲ್ಲಿ ಮಾತ್ರ ನೀರಿನ ತೊಂದರೆ ಇಲ್ಲ. ಇದಕ್ಕೆ ಕಾರಣ ಯೋಗೇಶ್ವರ್ ಎನ್ನುತ್ತಾರೆ‌‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.