ETV Bharat / state

ಸಿ.ಪಿ.ಯೋಗೀಶ್ವರ್ ಎಂಎಲ್​ಸಿ ಆಗುತ್ತಾರೆಂಬ ವಿಶ್ವಾಸವಿದೆ: ಡಿಸಿಎಂ ಅಶ್ವಥ್ ನಾರಾಯಣ್ - ಬಿಜೆಪಿ ಜಿಲ್ಲಾದ್ಯಕ್ಷ ರುದ್ರೇಶ್

ಉಪಮುಖ್ಯಮಂತ್ರಿಗಳ ಮಾತಿಗೆ‌ ಕೆಲಕಾಲ ವಿಚಲಿತರಾದ ಬಿಜೆಪಿ ಜಿಲ್ಲಾದ್ಯಕ್ಷ ರುದ್ರೇಶ್ ಮಾತನಾಡಿ, ಎಂಎಲ್​ಸಿ ಸ್ಥಾನಕ್ಕೆ ಯಾರು ತಾನೆ ಆಕಾಂಕ್ಷಿಯಾಗಿಲ್ಲ, ಎಲ್ಲರೂ ಕೂಡ ಆಕಾಂಕ್ಷಿಗಳೇ ಎನ್ನುವ ಮೂಲಕ ನಾನು ಆಕಾಂಕ್ಷಿ ಎಂಬುದನ್ನ ಬಹಿರಂಗಪಡಿಸಿದರು.

ಅಶ್ವಥ್ ನಾರಾಯಣ್
ಅಶ್ವಥ್ ನಾರಾಯಣ್
author img

By

Published : Jun 1, 2020, 11:11 PM IST

ರಾಮನಗರ : ರಾಜ್ಯದಲ್ಲಿ ಖಾಲಿಯಿರುವ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಎಂಎಲ್​ಸಿ ಆಗಬೇಕು ಎನ್ನುವ ಒತ್ತಡ ಇದೆ. ಅದು ಆಗುತ್ತೆ ಎಂಬ ವಿಶ್ವಾಸ ನನಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

ಈ ಕುರಿತು ಮಾತನಾಡಿದ ಅವರು, ಯೋಗಿಶ್ವರ್​ ಎಂಎಲ್​ಸಿ ಸ್ಥಾನಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್​ ಯಾರನ್ನು ಸೂಚಿಸುತ್ತದೆಯೋ ಅವರೆ ಆಗುತ್ತಾರೆ. ಯೋಗೇಶ್ವರ್​ಗೆ ನಮ್ಮ ಸಹಮತ‌ ಇದೆ ಎಂದು ಪಕ್ಕದಲ್ಲೇ ಇದ್ದ ಬಿಜೆಪಿ ಜಿಲ್ಲಾದ್ಯಕ್ಷ ಎಂ.ರುದ್ರೇಶ್​ಗೆ ಟಾಂಗ್ ನೀಡಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಮತ್ತು ಬಿಜೆಪಿ ಜಿಲ್ಲಾದ್ಯಕ್ಷ ರುದ್ರೇಶ್

ಉಪಮುಖ್ಯಮಂತ್ರಿಗಳ ಮಾತಿಗೆ‌ ಕೆಲಕಾಲ ವಿಚಲಿತರಾದ ರುದ್ರೇಶ್ ಮಾತನಾಡಿ, ಎಂಎಲ್​ಸಿ ಸ್ಥಾನಕ್ಕೆ ಯಾರು ತಾನೆ ಆಕಾಂಕ್ಷಿಯಾಗಿಲ್ಲ, ಎಲ್ಲರೂ ಕೂಡ ಆಕಾಂಕ್ಷಿಗಳೇ ಎನ್ನುವ ಮೂಲಕ ನಾನು ಆಕಾಂಕ್ಷಿ ಎಂಬುದನ್ನ ಬಹಿರಂಗಪಡಿಸಿದರು. ಜತೆಗೆ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.